ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕರುನಾಡಿನ ಹೆಮ್ಮೆಯ ಪುತ್ರ ಕೆ ಎಲ್ ರಾಹುಲ್ ಅವರು ಇವತ್ತು ಭಾರತೀಯ ಕ್ರಿಕೆಟ್ ತಂಡದ ಬಲಿಷ್ಠ ಆಟಗಾರ. ಹೌದು, ಕೆ ಎಲ್ ರಾಹುಲ್ ಅವರು ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನ ಹುಡುಗ, ಮಂಗಳೂರಿನ ನೆಹರು ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಾ ಬೆಳೆದ ಕೆ ಎಲ್ ರಾಹುಲ್ ಅವರು ಇವತ್ತು ಭಾರತೀಯ ಕ್ರಿಕೆಟ್ ಲೋಕದ ದುಬಾರಿ ಆಟಗಾರ. 

ಕೆ ಎಲ್ ರಾಹುಲ್ ಅವರು 2013 ರಲ್ಲಿ ಆರ್ ಸಿ ಬಿ ತಂಡಕ್ಕೆ ಆಯ್ಕೆ ಆದ ಬಳಿಕ ಅವರ ಕ್ರಿಕೆಟ್ ಜಗತ್ತಿನ ಸಂಭಾವನೆ ಸಾಕಷ್ಟು ಬದಲಾವಣೆಯಾಗಿದೆ. ಹೌದು, ಕೆ ಎಲ್ ರಾಹುಲ್ ಅವರಿಗೆ ಸಾಕಷ್ಟು ಜಾಹಿರಾತು ಕಂಪನಿಗಳು ಕೂಡ ಕೋಟ್ಯಾಂತರ ರೂಪಾಯಿ ಆಫರ್ ಮಾಡುತ್ತಿದೆ. ಜೊತೆಗೆ ಆರ್ ಸಿ ಬಿ ತಂಡದಲ್ಲಿ ಆಟವಾಡುವ ಸಂಧರ್ಭ ಕೆ ಎಲ್ ರಾಹುಲ್ ಅವರಿಗೆ ಹತ್ತು ಕೋಟಿಯವರೆಗೂ ಡಿಮಾಂಡ್ ಮಾಡಲಾಗಿತ್ತು. 

ಇನ್ನು ಕೆ ಎಲ್ ರಾಹುಲ್ ಅವರಿಗೆ ಬಿಸಿಸಿಐ ವರ್ಷಕ್ಕೆ 3.5 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದೆ. ಜೊತೆಗೆ ಕೆ ಎಲ್ ರಾಹುಲ್ ಅವರ ಒಟ್ಟು ಆಸ್ತಿ 50 ರಿಂದ ನೂರು ಕೋಟಿಯವರೆಗೆ ಏರಿಕೆ ಕಂಡಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಕೆ ಎಲ್ ರಾಹುಲ್ ಅವರು ಭಾರತೀಯ ತಂಡದ ದುಬಾರಿ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.