25 ವಷ೯ದ ಮೊಮ್ಮಗಳನ್ನು ಮದುವೆಯಾದ 70ರ ಅಜ್ಜ, ಹನಿಮೂನ್ ಮಾತ್ರ ರೋಚಕ

 

      ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ಎಲ್ಲರೂ ಆಘಾತದಲ್ಲಿದ್ದಾರೆ. ಏಕೆಂದರೆ ವಿಡಿಯೋದಲ್ಲಿ 25 ವರ್ಷದ ಹುಡುಗಿ ಜೊತೆ 70 ವರ್ಷದ ವ್ಯಕ್ತಿ ಮದುವೆಯಾಗಿದ್ದಾರೆ... ಅದೂ ಪರಸ್ಪರ ಒಪ್ಪಿಗೆಯಿಂದ.

     ವಿಡಿಯೋದಲ್ಲಿ, ಮೊಮ್ಮಗಳು ಮತ್ತು ಅಜ್ಜ ಮದುವೆಯ ನಂತರ ತುಂಬಾ ಸಂತೋಷಗೊಂಡಿರುವುದನ್ನು ಕಾಣಬಹುದು... ಮೊಮ್ಮಗಳನ್ನು ಮದುವೆಯಾದ ನಂತರ, ವೃದ್ಧರು, 'ಈ ಹುಡುಗಿ ಹುಟ್ಟಿದಾಗ, ನಾನು ಅವಳನ್ನು ಪ್ರೀತಿಸುತ್ತಿದ್ದೆ. ಹುಡುಗಿ ಬೆಳೆಯಲು ನಾನು ಕಾಯುತ್ತಿದ್ದೆ. ಕೊನೆಗೆ, ಅವಳು ಬೆಳೆದಾಗ, ನಾವು ಮದುವೆಯಾದೆವು...' ಎಂದು ತಾತ ಹೇಳಿಕೊಂಡಿದ್ದಾನೆ.
     ಇನ್ನು ತನ್ನ ಅಜ್ಜನನ್ನು ಮದುವೆಯಾದ ಹುಡುಗಿ.. 'ಮದುವೆಯಾದ ನಂತರ ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಅಜ್ಜ ಯಾವಾಗಲೂ ನನ್ನನ್ನು ಗೌರವಿಸುತ್ತಿದ್ದ, ಪ್ರೀತಿಸುತ್ತಿದ್ದ. ಈ ಮದುವೆಯಲ್ಲಿ ನನಗೆ ಯಾವುದೇ ಸಮಸ್ಯೆ ಅನಿಸುತ್ತಿಲ್ಲ...' ಎಂದು ಹೇಳಿಕೊಂಡಿದ್ದಾಳೆ.