24 ರ ಮುದ್ದಾದ ಯುವತಿಗೆ 54 ರ ತಾತನ ಜೊತೆ ಪ್ರೀತಿ ಪ್ರೇಮ, ತಾತನೇ ಬೇಕೆಂದು ಹುಚ್ಚು ಆಸೆ ಪಟ್ಟ ಯುವತಿ

 

ಪ್ರೀತಿ ಮಾಯೆ ಹುಷಾರು ಎನ್ನುವುದು ಸುಮ್ಮನೆ ಅಲ್ಲ ಅಷ್ಟಕ್ಕೂ ಪ್ರೀತಿಯಲ್ಲಿ ಬಿದ್ದವರ ಪಾಡು ಎಂದಿದ್ದರೂ ಹಾಗೆಯೇ. ಅವರಿಗೆ ಅವರಿವರ ಕುರಿತು ಒಂದಿಷ್ಟು ಯೋಚನೆ ಇರುವುದೇ ಇಲ್ಲ. ಅವರು ಅವರ ಪಾಡಿಗೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಲೇ ಇರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನೆಡೆದಿದೆ. ಇದು ಪ್ರೇಮವೋ, ಕಾಮವೋ ಏನೆಂದು ತಿಳಿಯದ ಭಾವ.

ಹೌದು 54 ವರ್ಷದ ತಾತನ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ ಮಹಿಳೆ ಕೊನೆಗೆ ಪೂಜಾರಿ ಜೊತೆಯೇ ಎಸ್ಕೇಪ್ ಆಗಿದ್ದಾಳೆ. ವಿವಾಹಿತ ಮಹಿಳೆ ಲಲಿತಾ ಗಂಗಮ್ಮ ದೇವಾಲಯದ ಪೂಜಾರಿ ಮುನಿರಾಜು ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಬನ್ನಿಕುಪ್ಪೆ ಗ್ರಾಮದ ಬಳಿ ಅಮಾನಿಗೋಪಾಲಕೃಷ್ಣ ಕೆರೆ ದಡದಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು ಒಂದು ತಿಂಗಳ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದರಿಂದ ಲಲಿತಾ-ಮುನಿರಾಜು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರಾ? ಪೊಲೀಸರ ದಿಕ್ಕು ತಪ್ಪಿಸಲು ನಾಟಕ ಆಡಿದ್ರಾ? ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಕೆರೆಯಲ್ಲಿ ಮೃತದೇಹಗಳಿಗಾಗಿ ಶೋಧಕಾರ್ಯ ನಡೆದಿದೆ.  <a href=https://youtube.com/embed/AkryBqxG5No?autoplay=1&mute=1><img src=https://img.youtube.com/vi/AkryBqxG5No/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲಲಿತಾ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಆತ್ಮಹತ್ಯೆ ಕಥೆ ನಾಟಕ ಮಾಡಿದ್ದ ಕಿಲಾಡಿ ಜೋಡಿ ಅರೆಸ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಯಾರ ಒಲವು ಎಲ್ಲಿ ಮೂಡುವುದೋ ಯಾರು ಕೂಡ ಬಲ್ಲವರಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.