ಕಾಶ್ಮೀರ ಉ ಗ್ರರ ಧಾಳಿ ಬಗ್ಗೆ ನಟ ಡಿ ಬಾಸ್ ದಶ೯ನ್ ಮೊದಲ ಪ್ರತಿಕ್ರಿಯೆ

 
Ns
 ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸಕ್ಕೆ ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು 26 ಪ್ರವಾಸಿಗರು ಉಗ್ರರ ದಾಳಿಗೆ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಪಹಲ್ಗಾಮ್‌ ಧಾಮವನ್ನು ಪ್ರವೇಶಿಸಿದ ಉಗ್ರರು ಅಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಗುಂಡಿನ ದಳಿ ನಡೆಸಿದ್ದಾರೆ. ಭಾರತದ ಎಲ್ಲಾ ನಾಗರೀಕರನ್ನು ಈ ದಾಳಿ ದುಃಖಕ್ಕೆ ದೂಡಿದೆ.
 ಉಗ್ರರ ದಾಳಿಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪೈಶಾಚಿಕ ಕೃತ್ಯವನ್ನು ಖಂಡಿಸಿ ಹಲವು ತಾರೆಯರು ಪ್ರತಿಕ್ರಯಿಸಿದ್ದಾರೆ. ಇದೀಗ ನಟ ದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಯಿಸಿದ್ದಾರೆ.ಉಗ್ರರ ಗುಂಡಿನ ದಾಳಿಗೆ ಬಲಿಯಾದ ಅಮಾಯಕರನ್ನು ನೆನೆದು, ಉಗ್ರರ ದಾಳಿಯಿಂದ ಯಾರ್ಯಾರಿಗೆ ತೊಂದರೆಯಾಗಿ ಅಲ್ಲಿ ಪ್ರಾಣ ಕಳೆದುಕೊಂಡು ನೋವು ಉಂಟಾಗಿದೆಯೋ, ಅಷ್ಟೇ ನನಗೂ ಈ ವಿಚಾರದಲ್ಲಿ ಬಹಳ ನೋವು ಉಂಟಾಗಿದೆ.  <a href=https://youtube.com/embed/o0ekkWLNGr0?autoplay=1&mute=1><img src=https://img.youtube.com/vi/o0ekkWLNGr0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದಕ್ಕೆ ಕಾರಣರಾದವರನ್ನು ಹುಡುಕಿಕೊಂಡು ಹೋಗಿ ಅವರನ್ನು ಅಂತ್ಯ ಮಾಡಬೇಕು. ಇದಕ್ಕೆಂದೇ ಕಾನೂನು ಮತ್ತು ಸರ್ಕಾರವಿದೆ. ಭಾರತದ ನಾಗರೀಕನಾಗಿ ಹೇಳಬೇಕು ಅಂತಂದ್ರೆ ಮೈಯಲ್ಲಿ ಕುದಿಯುತ್ತಿದೆ. ಅವರನ್ನು ಸಂಹಾರ ಮಾಡುವವರೆಗೂ ನಮಗೂ ನೆಮ್ಮದಿ ಇಲ್ಲ. ಅಮಾಯಕರ ಜೀವ ಬಲಿ ತೆಗೆದುಕೊಂಡಿದ್ದಾರೆ. ಇದಕ್ಕೆ ಅವರು ಶಿಕ್ಷೆ ಅನುಭವಿಸಲೇಬೇಕು, ಉಗ್ರರನ್ನು ಪೂರ್ಣಗೊಳಿಸಬೇಕು ಎಂದು ನಟ ದರ್ಶನ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ಶಿವಣ್ಣ ಕೂಡ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, ಇವರಿಗೆ ಮನುಷ್ಯತ್ವ ಇಲ್ವಾ? ಇಷ್ಟು ಕ್ರೂರವಾಗಿ ಯಾಕೆ ವರ್ತಿಸುತ್ತಿದ್ದಾರೆ. ಇಷ್ಟು ಕೋಪ ಯಾಕೆ? ಮನುಷ್ಯ ಒಬ್ಬ ಮನುಷ್ಯನನ್ನು ಅರ್ಥ ಮಾಡಿಕೊಂಡರೆ ಸಾಕು. ಅಂತದರಲ್ಲಿ ಈ ರೀತಿಯಾದ ವಿಚಾರ ಖಂಡನೆ ಆಗಲೇಬೇಕು. ಹೇಗಾದರೂ ಮಾಡಿ ಇದಕ್ಕೆಲ್ಲಾ ಬ್ರೇಕ್‌ ಬೀಳಬೇಕು. ನಮಗೆ ಬಹಳ ನೋವಾಗಿದೆ ಎಂದು ಪ್ರತಿಕ್ರಿಸಿದ್ದರು. ಅದರ ಬೆನ್ನಲ್ಲೇ ಇದೀಗ ದರ್ಶನ ಕೂಡ ಹೇಳಿಕೆ ನೀಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.