ಇದೇ ಮನೆಯಲ್ಲಿ ನಟ ದ ರ್ಶನ್ ಅವರು ಜನ್ಮ ಪಡೆದಿದ್ದು; ಈ ಮನೆ ಎಲ್ಲಿದೆ ಯಾವ ಊರು ಗೊತ್ತಾ

 
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. ಬಾಕ್ಸ್‌ಆಫೀಸ್ ಸುಲ್ತಾನ, ದಾಸ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. 
ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಬಾಲ್ಯವನ್ನು ನೋಡುವುದಾದರೆ 1977, ಫೆಬ್ರವರಿ 16 ಶಿವರಾತ್ರಿಯ ದಿನದಂದು ಮಧ್ಯಾಹ್ನ ಪೊನ್ನಂಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದರು. 
ಇವರ ಜನ್ಮನಾಮ ಹೇಮಂತ್ ಕುಮಾರ್. ಬಾಲ್ಯದ ವಿಧ್ಯಾಭ್ಯಾಸ ಮುಗಿಸಿದ್ದೆಲ್ಲಾ ಮೈಸೂರಿನಲ್ಲಿಯೇ. ಇವರ ಸಹೋದರಿ ದಿವ್ಯಾ ಮತ್ತು ಸಹೋದರ ದಿನಕರ್ ತೂಗುದೀಪ. 2003 ರಲ್ಲಿ ಧರ್ಮಸ್ಥಳದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಧ್ಯಾರ್ಥಿ ವಿಜಯಲಕ್ಷ್ಮಿಯವರನ್ನು ಕೈಹಿಡಿದರು. ಇದೀಗ ಈ ದಂಪತಿಗಳಿಗೆ ವಿನೀಶ್ ಎಂಬ ಪುತ್ರನಿದ್ದಾನೆ. 
ತಮ್ಮ ಕಲಾಜೀವನದ ಮೂಲಕ ಕುಟುಂಬವನ್ನು ಸೊಗಸಾಗಿ ಪೋಷಿಸುತ್ತಿದ್ದ ತೂಗುದೀಪರು ಕಿಡ್ನಿ ವೈಪಲ್ಯದಿಂದ ಹಾಸಿಗೆ ಹಿಡಿದರು. ಮೀನಾರವರು ಪತಿಯ ಚಿಕಿತ್ಸೆಗಾಗಿ ಮನೆಯೊಂದನ್ನು ಹೊರತುಪಡಿಸಿ ತಮ್ಮ ಎಲ್ಲಾ ಹಣವನ್ನು ವ್ಯಯಿಸಿದರು. ಕಡೆಗೆ ದಿನನಿತ್ಯದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿತು. ಈ ಸಮಯದಲ್ಲಿ ಜೆ.ಎಸ್.ಎಸ್ ಆಸ್ಪತ್ರೆ ಆರ್ಥಿಕವಾಗಿ ಸಹಾಯ ಮಾಡಿತು. 
ಮೀನಾರವರೇ ಪತಿಗೆ ಕಿಡ್ನಿ ನೀಡಿದರು. ಜೆ.ಎಸ್.ಎಸ್‌ನಲ್ಲಿ ಪಾಲಿಟೆಕ್ನಿಕಲ್ ಡಿಪ್ಲೋಮಾವನ್ನು ಓದುತ್ತಿದ್ದ ದರ್ಶನ್ ಅದನ್ನು ಅರ್ಧಕ್ಕೆ ಬಿಟ್ಟು ಶಿವಮೊಗ್ಗದ ಖ್ಯಾತ ರಂಗತಂಡ ನೀನಾಸಂಗೆ ಸೇರಿ ಅಭಿನಯ ತರಬೇತಿ ಪಡೆಯಲು ಪ್ರಾರಂಭಿಸಿದರು. 1995 ರಲ್ಲಿ ಇವರು ಶಿವಮೊಗ್ಗದಲ್ಲಿದ್ದಾಗ  ತೂಗುದೀಪರು ತಮ್ಮ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. 
ನಂತರ ಸಂಸಾರ ಸಾಕಾಣಿಕೆಗೆ ಮೀನಾರವರು ಕೆಲಕಾಲ ಊಟದ ಮೆಸ್ ನ್ನು ನೆಡೆಸಿದರೆ, ದರ್ಶನರವರು ಒಂದು ಹಸು ಸಾಕಿ ಹಾಲು ಮಾರುತ್ತಿದ್ದರು. ದರ್ಶನ್ ಚಿತ್ರರಂಗಕ್ಕೆ ಹೋಗುವುದು ತೂಗುದೀಪರಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ತಾಯಿಯ ಪ್ರೋತ್ಸಾಹದಿಂದ `ನೀನಾಸಂ' ಸೇರಿದರು. ಅಲ್ಲಿ ಇವರ ಮೊದಲ ರಂಗಪ್ರವೇಶಕ್ಕೆ ಅಲಂಕಾರ ಮಾಡಿದ್ದವರು ಮಂಡ್ಯ ರಮೇಶ್. 
ಇದಕ್ಕೂ ಮೊದಲು ಮೈಸೂರಿನ ಜಗನಮೋಹನ ಪ್ಯಾಲೇಸ್‌ನಲ್ಲಿ ನಾಲ್ಕೈದು ಸಾರಿ ಮಾಡೆಲಿಂಗ್ ಕೂಡ ಮಾಡಿದ್ದರು. ನೀನಾಸಂ ನಂತರ ಅಭಿನಯದ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದ ದರ್ಶನ್‌ಗೆ ಬೇಗನೆ ನಿರಾಶೆಯಾಯಿತು. ಕೊನೆಗೆ ಲೈಟ್ ಬಾಯ್ ಆಗಿ ಸಿನಿ ಇಂಡಸ್ಟ್ರಿಯಲ್ಲಿ ಪಯಣ ಆರಂಭಿಸಿದರು. ಹಲವು ಅಪಮಾನಗಳನ್ನು ಎದುರಿಸಿ ಮುಂದೆವರೆದ ಇವರಿಗೆ ಇಲ್ಲಿ ಅಣಜಿ ನಾಗರಾಜರ ಪರಿಚಯವಾಯಿತು. 
ಅಣಿಜಿವರು ಖ್ಯಾತ ಸಿನಿಮ್ಯಾಟೋಗ್ರಾಫರ್ ಬಿ.ಸಿ.ಗೌರಿಶಂಕರ್ ಅಂದರೆ ನಟಿ ರಕ್ಷಿತಾ ಪ್ರೇಮ್ ತಂದೆ ಸಹಾಯಕರಾಗಿದ್ದರು. ದರ್ಶನ್ ಕೂಡ ಗೌರಿಶಂಕರ್ ಅವರ ಸಹಾಯಕರಾಗಿ ಅಸಿಸ್ಟಂಟ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದರು. 1997 ರಲ್ಲಿ ಎಸ್ ನಾರಾಯಣರವರು ತಮ್ಮ ಮಹಾಭಾರತ ಸಿನಿಮಾದಲ್ಲಿ ಅವಕಾಶ ಕೊಟ್ಟರು. ನಂತರ ಡಿಟೆಕ್ಟಿವ್ ಚಂದ್ರಕಾಂತ ಎಂಬ ಸೀರಿಯಲ್‌ನಲ್ಲಿ ನಟಿಸಿದರು. 
ಆದರೆ ದರ್ಶನ್‌ರವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಎಸ್ ನಾರಾಯಣ್‌ರವರ ಅಂಬಿಕಾ ಧಾರಾವಾಹಿಯಲ್ಲಿ ನಟಿಸಿದ ಮೇಲೆ. ಹಾಗೆಯೇ ಮೂರು ಕಾರ್ಟೂನ್‌ಗಳಲ್ಲಿ ಕೆಲವು ಪಾತ್ರಗಳಿಗೆ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ  ದರ್ಶನ್ ಒಂದು ತಮಿಳು ಮತ್ತು ಐದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ನಂತರದಲ್ಲಿ 2006 ರಲ್ಲಿ ಸಹೋದರ ದಿನಕರ ಜೊತೆ ಸೇರಿ `ತೂಗುದೀಪ ಪ್ರೊಡಕ್ಷನ್ಸ್' ಆರಂಭಿಸಿ ಜೊತೆ ಜೊತೆಯಲಿ' ಚಿತ್ರ ನಿರ್ಮಿಸಿದರು. 
ದಿನಕರ ತೂಗುದೀಪ ಮುನ್ನೆಡೆಸುವ ಈ ಸಂಸ್ಥೆ 'ಬುಲ್‌ಬುಲ್',`ನವಗ್ರಹ',`ಮದುವೆಯ ಮಮತೆಯ ಕರೆಯೋಲೆ' ಚಿತ್ರಗಳನ್ನು ನಿರ್ಮಿಸಿದೆ. ನಂತರ ತೂಗುದೀಪ ಡಿಸ್ಟ್ರಿಬ್ಯೂಷನ್ ವಿತರಣೆ ಸಂಸ್ಥೆ ಆರಂಭಿಸಿ ಬೃಂದಾವನ, ಒಗ್ಗರಣೆ, ಜೈಲಲಿತಾ, ಉಗ್ರಂ ಮುಂತಾದ ಚಿತ್ರಗಳನ್ನು ಕೂಡ ಈ ಸಂಸ್ಥೆ ವಿತರಿಸಿದೆ. ಇದೀಗ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮರೆಯುತ್ತಿದ್ದಾರೆ.