ಗಜಪಡೆ ಪೇಜ್ ಗೆ ವಾನಿ೯ಂಗ್ ಕೊಟ್ಟ ನಟ ಧ್ರುವ ಸರ್ಜಾ ಫ್ಯಾನ್ಸ್, ಕಾರಣ ಏನು ಗೊತ್ತಾ

 

ಕೆಲವು ದಿನಗಳ ಹಿಂದೆ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿ ಟ್ವೀಟ್ ಮಾಡಿದ್ದನು. ಆರ್‌ಸಿಬಿ ಸೋಲುವುದಕ್ಕೆ ಅಪ್ಪು ಪತ್ನಿಯೇ ಕಾರಣ ಎಂದು ಕೆಟ್ಟ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದ. ಕಿಡಿಗೇಡಿಯ ಈ ಕೃತ್ಯವನ್ನು ಖಂಡಿಸಿ ರಾಜವಂಶದ ಅಭಿಮಾನಿಗಳು ದೂರುಗಳನ್ನು ದಾಖಲಿಸಿದ್ದಾರೆ.

ಗಜಪಡೆ ಪಡೆ ಅನ್ನುವ ಎಕ್ಸ್ ಖಾತೆಯನ್ನು ತೆರೆದು, ಅದರಲ್ಲಿ ಅಪ್ಪು ಪತ್ನಿ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಿದ್ದ. ಬಳಿಕ ಸುದೀಪ್ ಅಭಿಮಾನಿ ಅಂತ ಐಡಿ, ಡಿಪಿ ಬದಲಿಸಿದ್ದ. ಇದನ್ನು ಸುದೀಪ್ ಫ್ಯಾನ್ಸ್ ಕಂಡು ಹಿಡಿದು ಅಸಲಿ ಟ್ವೀಟ್‌ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಕಿಡಿಗೇಡಿ ವಿರುದ್ಧ ತಿರುಗಿಬಿದ್ದಿದ್ದರು.

ಈಗ ಆಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳು ಕಿಡಿಕಾರಿದ್ದಾರೆ. ಕಿಡಿಗೇಡಿ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅದೇ ವೇಳೆ ಈ ಕೃತ್ಯ ಎಸಗಿದವರು ಸಿಕ್ಕಿಕೊಂಡರೆ, ಊರು ಬಿಡಿಸುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. <a href=https://youtube.com/embed/zfwjoTnt2ak?autoplay=1&mute=1><img src=https://img.youtube.com/vi/zfwjoTnt2ak/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಿದ ಬಳಿಕ ಕೆಲವರು ಧ್ರುವ ಸರ್ಜಾ ಅಭಿಮಾನಿಗಳ ಕೆಲಸ ಎಂದು ಹೇಳುತ್ತಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್ ಇಬ್ಬರು ಅಭಿಮಾನಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಹಬ್ಬಿಸುತ್ತಿದ್ದು, ಇದನ್ನು ಖಂಡಿಸಿ ದೂರು ನೀಡಿದ್ದಾಗಿ ಧ್ರುವ ಫ್ಯಾನ್ಸ್ ಹೇಳಿಕೊಂಡಿದ್ದಾರೆ.

ನಮ್ಮ ಅಕ್ಕನ ಸಮಾನರು.. ತಾಯಿ ಸಮಾನರಾದಂತಹ ಪುನೀತ್ ರಾಜ್‌ಕುಮಾರ್ ಶ್ರೀಮತಿ ಅಶ್ವಿನಿ ಮೇಡಂ ಅವರ ಮೇಲೆ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಕೆಟ್ಟದಾಗಿ ಅಶ್ಲೀಲವಾಗಿ ಸಾಕಷ್ಟು ಕೆಟ್ಟ ಬೆಳವಣಿಗೆಗಳು ನಡೆದಿತ್ತು. ಈ ವಿಚಾರವನ್ನು ಇಟ್ಕೊಂಡು ಧ್ರುವ ಅನ್ನುವವರು ಈ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಿದ್ದಾರೆ ಅಂತ ತಪ್ಪು ಸಂದೇಶ ನೀಡುತ್ತಿದ್ದಾರೆ. ಎಂದು ಧ್ರುವ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.