ನಟಿ ಅಮೂಲ್ಯ ಸಹೋದರ ಇನ್ನಿ ಲ್ಲ, ಇಷ್ಟು ಸಣ್ಣ ವಯಸ್ಸಿಗೆ ಆಗಿದ್ದೇನು ಗೊತ್ತಾ
Oct 19, 2024, 09:45 IST
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅವರ ಸಹೋದರ ಮತ್ತು ನಿರ್ದೇಶಕರಾಗಿದ್ದ ದೀಪಕ್ ಅರಸ್ ಅವರು ಗುರುವಾರ ಸಂಜೆ ನಿಧನರಾದರು. ನಟಿ ಅಮೂಲ್ಯ ಅವರು ಸೇರಿದಂತೆ ಇಡಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದು ಚಿತ್ರರಂಗದ ಕಲಾವಿದರು ನಟಿ ಮನೆಗೆ ಭೇಟಿ ನೀಡಿದ್ದಾರೆ.
ಅಷ್ಟಕ್ಕೂ ಅಮೂಲ್ಯ ಅಣ್ಣ ಚಿತ್ರರಂಗಕ್ಕೆ ಅಪರಿಚಿತರೇನು ಅಲ್ಲ. ಬದಲಾಗಿ ಚಿತ್ರರಂಗದಲ್ಲಿ ನಿರ್ದೇಶಕರಾಗಿಯು ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್ ಅರಸ್ ಅವರು 42ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಕೆಲವು ವರ್ಷಗಳಿಂದ ದೀಪಕ್ ಅರಸ್ ಅವರು ಅನಾರೋಗ್ಯದಿಂದ ನರಳುತ್ತಿದ್ದರು ಎಂದು ತಿಳಿದು ಬಂದಿದೆ.
ಕೊನೆಗೆ ಚಿಕಿತ್ಸೆ ಫಲಿಕಾರಿಯಾಗದೇ ಅವರು ಆರ್.ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದರು. ಈ ಸಂಬಂಧ ಡಯಾಲಿಸಿಸ್ ಪಡೆಯುತ್ತಲೇ ಇದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಜೀವನ ಕೊನೆಯಾಗಿದೆ. ಮೃತರು ಇಬ್ಬರು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ದೀಪಕ್ ಅರಸ್ ಅವರು ಕನ್ನಡದ 'ಮನಸಾಲಜಿ, ಶುಗರ್ ಫ್ಯಾಕ್ಟರಿ' ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವುಗಳ ಜೊತೆಗೆ ಭವಿಷ್ಯದಲ್ಲಿ ಇನ್ನೊಂದಿಷ್ಟು ಉತ್ತಮ ಸದಭಿರುಚಿಯ ಸಿನಿಮಾಗಳನ್ನು ಮಾಡುವ ಆಲೋಚನೆಯಲ್ಲಿ ಅವರಿದ್ದರು ಎನ್ನಲಾಗಿದೆ.ದೀಪಕ್ ಅರಸ್ ಅವರ ಮೃತ ದೇಹವನ್ನು ನಗರದ ವೈಯಾಲಿಕಾವಲ್ ನಿವಾಸಕ್ಕೆ ತರಲಾಗಿತ್ತು .ಶುಕ್ರವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ನಾಗಮಂಗಲಕ್ಕೆ ತಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.