ನಟಿಯರಿಗೆ ಅದು ಚೆನ್ನಾಗಿದ್ದರೆ ಮಾತ್ರ ಸಿನಿಮಾಗೆ ಅವಕಾಶ ಕೊಡುತ್ತಿದೆ; ರವಿಚಂದ್ರನ್
Jul 15, 2025, 12:03 IST
ಸೂತ್ರಧಾರಿ ಚಿತ್ರದ ನಾಯಕಿ ಕಂಡು ನಮ್ಮ ಹುಡುಗಿ ಎಂದ ಕ್ರೇಜಿ ಸ್ಟಾರ್; ಹೀಗೆ ಹೇಳಿದ್ಯಾಕೆ ಗೊತ್ತಾ ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಓಪನ್ ಹಾರ್ಟೆಡ್ ನೋಡಿ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ ಬಿಡಿ. ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರೆ. ಸೂತ್ರಧಾರಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅಲ್ಲಿ ಚಿತ್ರದ ನಾಯಕಿ ಅಪೂರ್ವ ಅವರನ್ನ ನೋಡಿ ನಮ್ಮ ಹುಡುಗಿ ಅಂತಲೇ ಹೇಳಿದ್ದಾರೆ.
ನಮ್ಮ ಹುಡುಗಿ ಅಲ್ವೇ? ಬಾರಮ್ಮ ನನ್ನ ಪಕ್ಕದಲ್ಲಿಯೇ ನಿಂತುಕೋ ಅಂತಲೂ ಕರೆದು ನಿಲ್ಲಿಸಿಕೊಂಡಿದ್ದಾರೆ. ಸೂತ್ರಧಾರಿ ಚಿತ್ರದಲ್ಲಿ ಚಂದನ್ ಶೆಟ್ಟಿ ಹೀರೋ ಆಗಿದ್ದಾರೆ. ಕಿರಣ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಾಯಕಿ ಅಂತ ಬಂದ್ರೆ, ಅದು ಅಪೂರ್ವನೆ ಆಗಿದ್ದಾರೆ. ಇವರ ಈ ಚಿತ್ರ ಮೇ-೯ ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅಲ್ಲಿಯೇ ರವಿಚಂದ್ರನ್ ಚಿತ್ರದ ನಾಯಕಿ ಅಪೂರ್ವ ಅವರನ್ನ ನೋಡಿ ನಮ್ಮ ಹುಡುಗಿ ಅಂತಲೇ ಹೇಳಿದ್ದಾರೆ.
<a href=https://youtube.com/embed/cB9rNdwrhtc?autoplay=1&mute=1><img src=https://img.youtube.com/vi/cB9rNdwrhtc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಮ್ಮ ಹುಡುಗಿ ಅಂತ ಕರೆಯೋದು ಅಲ್ಲದೆ, ವೇದಿಕೆ ಮೇಲೆ ತಮ್ಮ ಪಕ್ಕದಲ್ಲಿಯೇ ಕರೆದು ನಿಲ್ಲಿಸಿಕೊಂಡಿದ್ದಾರೆ. ರವಿಚಂದ್ರನ್ ಹಾಗೆ ಕರೆದ ಕೂಡಲೇ ಅಪೂರ್ವ NO ಅಂತ ಹೇಳಲಿಲ್ಲ. ಅಷ್ಟೆ ಖುಷಿಯಿಂದಲೇ ಹೋಗಿ ರವಿಚಂದ್ರನ್ ಪಕ್ಕ ನಿಂತು ಕೊಂಡು ಕ್ಯಾಮರಾಗೂ ಪೋಸ್ ಕೊಟ್ಟಿದ್ದಾರೆ. ಹೌದು, ಈ ಒಂದು ಪ್ರಶ್ನೆ ಬರುತ್ತದೆ. ರವಿಚಂದ್ರನ್ ಹಾಗೆ ಹೇಳೋಕೆ ಕಾರಣವೂ ಇದೆ.
ಈ ಹಿಂದೆ ಅಂದ್ರೆ, ೨೦೧೬ ರಂದು ಒಂದು ಚಿತ್ರ ಮಾಡಿದ್ದರು. ಅಪೂರ್ವ ಅನ್ನೋದೇ ಆ ಚಿತ್ರದ ಹೆಸರಾಗಿತ್ತು. ಲಿಫ್ಟ್ ಅಲ್ಲಿಯೇ ಇಡೀ ಕತೆ ಇತ್ತು. ಆ ಕಥೆಯ ನಾಯಕಿ ಬೇರೆ ಯಾರೋ ಅಲ್ಲ. ಅದು ಇದೇ ಅಪೂರ್ವನೇ ಆಗಿದ್ದಾರೆ. ಅಪೂರ್ವ ಚಿತ್ರವನ್ನ ರವಿಚಂದ್ರನ್ ತುಂಬಾನೆ ಚೆನ್ನಾಗಿ ಪ್ರಮೋಟ್ ಮಾಡಿದ್ದರು. ನಾಯಕಿ ಯಾರು ಅನ್ನೋದನ್ನ ರಿವೀಲ್ ಮಾಡಿರಲಿಲ್ಲ. ಸಿನಿಮಾ ಬಂದ್ಮೇಲೇನೆ ಎಲ್ಲರಿಗೂ ಈ ಚಿತ್ರದ ನಾಯಕಿ ಯಾರು ಅನ್ನೋದು ತಿಳಿದಿತ್ತು. ಆ ರೀತಿನೇ ರವಿಚಂದ್ರನ್ ಅಪೂರ್ವ ಚಿತ್ರವನ್ನ ಪ್ರಮೋಟ್ ಮಾಡಿದ್ದರು.