ಆದಿಪುರುಷ್ ಸಿನಿಮಾ ಕೋಟಿಗಟ್ಟಲೆ ಕಲೆಕ್ಷನ್, ಒಂದೇ ದಿನದಲ್ಲಿ ನೂರು ಕೋಟಿ ಗಳಿಕೆ

 

ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿಯಾಗಿ ಅಮೋಘವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ಪ್ರಭಾಸ್ ಈಗ ಆದಿಪುರುಷ ಶ್ರೀ ರಾಮನಾಗಿ ತೆರೆಯ ಮೇಲೆ ಬಂದಿದ್ದಾರೆ. ಆದರೆ ಆದಿ ಪುರುಷ ಸಿನೆಮಾ ರಿಲೀಸ್ ಆದ ಒಂದೇ ದಿನಕ್ಕೆ ಪ್ರಭಾಸ್ ಗೆ ಆಘಾತವಾಗಿದೆ. ಹೌದು ಓಂ ರಾವತ್ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಭಾರತದ ಹಿಂದೂ ಪವಿತ್ರ ಗ್ರಂಥ ರಾಮಾಯಣ ಆಧಾರಿತ ಆದಿಪುರುಷ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದ್ದು.

ಸಿನಿಮಾದ ಕುರಿತಂತೆ ಮಿಶ್ರ ಪ್ರತಿಕ್ರಿಯೆ ಬರುತ್ತಿರುವುದ ನಿಜಕ್ಕೂ ಕೂಡ ಚಿತ್ರತಂಡದ ನಿದ್ದೆಗೆಡಿಸಿದೆ. ಹೌದು ಮೊದಲ ದಿನದಿಂದಲೇ ಸಿನಿಮಾದ ಕುರಿತಂತೆ ಟೀಕಾ ಟಿಪ್ಪಣಿಗಳನ್ನು ಪ್ರೇಕ್ಷಕರು ಮಾಡುತ್ತಿರುವುದು ಚಿತ್ರದ ಕಲೆಕ್ಷನ್ ವಿಚಾರದಲ್ಲಿ ಕೂಡ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. 

ಅದರಲ್ಲೂ ವಿಶೇಷವಾಗಿ ರಾಮಾಯಣದ ಪಾತ್ರೆಳಗಳನ್ನು ಸಿನಿಮಾದಲ್ಲಿ ತೋರಿಸಿರುವ ರೀತಿ ನಿಜಕ್ಕೂ ಕೂಡ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬುದಾಗಿ ಹಿಂದೂ ಸಂಘಟನೆಗಳು ಕೂಡ ಇದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ಇದರ ನಡುವೆ ಸಾಕಷ್ಟು ನೆಗೆಟಿವ್ ಪ್ರಚಾರಗಳು ಕೂಡ ಸಿನಿಮಾದ ವಿರುದ್ಧ ನಡೆಯುತ್ತಿವೆ. ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳನ್ನು ಕಂಡು ಹುಡುಕಲಾಗಿದ್ದು ಅದರಲ್ಲಿಯೂ ವಿಶೇಷವಾಗಿ ಪ್ರಭಾಸ್ಅವರನ್ನು ರಾಮನ ಅವತಾರದಲ್ಲಿ ತೋರಿಸಿರುವ ರೀತಿ ಕೂಡ ಸಾಕಷ್ಟು ಅಸಂಬದ್ಧವಾಗಿದೆ ಎಂಬುದಾಗಿ ಪುರಾಣಪ್ರಿಯರು ತಮ್ಮ ವಾದವನ್ನು ಮಂಡಿಸಿದ್ದಾರೆ. 

ಆರಂಭದಲ್ಲಿ ರಾಮಾಯಣದ ಕಥೆಯನ್ನು ಆಧರಿಸಿ ಮಾಡಿರುವಂತಹ ಸಿನಿಮಾ ಎಂದು ಹೇಳಿಕೊಂಡಿದ್ದರು ಕೂಡ ಅದರ ಪಕ್ಕದಲ್ಲಿಯೇ ನಮ್ಮ ಕಲ್ಪನೆಗೆ ಅನುಸಾರವಾಗಿ ಬದಲಾವಣೆಗಳನ್ನು ಕೂಡ ಮಾಡಿಕೊಂಡಿದ್ದೇವೆ ಎಂಬುದಾಗಿ ಚಿತ್ರದಲ್ಲಿ ಹೇಳಿಕೊಂಡಿದೆ. ಇನ್ನು ಈ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಕಾಣದಿದ್ದರೆ ಮುಂದಿನ ದಿನಗಳಲ್ಲಿ ಪ್ರಭಾಸ್ ಅವರ ಸಿನಿಮಾ ಜೀವನಕ್ಕೆ ಬಲವಾದ ಪೆಟ್ಟು ಬೀಳುವ ಸಾಧ್ಯತೆಗಳಿವೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.