ರಕ್ಷಿತಾ ಜೊತೆ ಅದಿತ್ಯ ಲವ್; ಇಬ್ಬರನ್ನು ದೂರ ಮಾಡಿದ್ದು ಯಾ ರು ಗೊ ತ್ತಾ
ಒಂದು ಕಾಲದಲ್ಲಿ ಚಿತ್ರರಂಗದ ರಾಣಿಯಂತೆ ಆಳಿದ್ದ ರಕ್ಷಿತಾ ಕೂಡ ಪ್ರೇಮ್ ಅವರನ್ನು ಮದುವೆ ಆಗುವ ಮುನ್ನ ಬೇರೊಬ್ಬರ ಪ್ರೀತಿಸಿದ್ದರು. ಹೌದು 2002ರಲ್ಲಿ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಪ್ಪು ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು ರಕ್ಷಿತಾ. ಮೊದಲ ಚಿತ್ರವೇ ಸೂಪರ್ ಹಿಟ್ ಆಗ್ತಿದ್ದಂತೆ, ಸಾಕಷ್ಟು ಸಿನಿಮಾ ಅವಕಾಶಗಳೂ ರಕ್ಷಿತಾ ಅವರನ್ನು ಅರಸಿ ಬಂದವು.
ಗೋಕರ್ಣ, ಲವ್, ಕಲಾಸಿಪಾಳ್ಯ, ಅಯ್ಯ, ಡೆಡ್ಲಿ ಸೋಮ, ಸುಂಟರಗಾಳಿ ಹೀಗೆ ರಕ್ಷಿತಾ ಸಹ ಗೆಲುವಿನ ಓಟ ಮುಂದುವರಿಸಿದ್ದ ಸಮಯದಲ್ಲೇ ಇದೆಲ್ಲದರ ನಡುವೆ ಡೆಡ್ಲಿ ಸೋಮ ಚಿತ್ರದ ನಾಯಕ ನಟ ಆದಿತ್ಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಹೌದು ಈ ಹಿಂದೆ ಕೂಡ ಅವರಿಬ್ಬರು ಲವ್ ಸಿನಿಮಾದಲ್ಲಿ ನಟಿಸಿದ್ದರು.ಹಾಗಾಗಿ ಅವರಿಬ್ಬರ ಪ್ರೀತಿಯ ಅಗಾಧತೆ ಅದೆಷ್ಟಿತ್ತೆಂದರೆ ಸಿನೆಮಾ ಶೂಟಿಂಗ್ ಸೆಟ್ ಅಲ್ಲಿ ಚಿತ್ರೀಕರಣ ಮಾಡಲು ಮೂರ್ನಾಲ್ಕು ಬಾರಿ ಕರೆದು ಹೇಳಬೇಕಿತ್ತು.
ಈ ಚಿತ್ರ ಬೆಂಗಳೂರಿನ ಕುಖ್ಯಾತ ರೌಡಿ ಸೋಮನ ಜೀವನದ ಕತೆಯನ್ನು ಆಧರಿಸಿದೆ. ಒಂದು ಸಭ್ಯ ಕುಟುಂಬದ ಯುವಕ ಅನಿವಾರ್ಯ ಕಾರಣಗಳಿಂದ ಹೇಗೆ ಭೂಗತ ಲೋಕಕ್ಕೆ ಹೆಜ್ಜೆಯಿಡುತ್ತಾನೆ ಎಂಬುದನ್ನು ಚಿತ್ರ ವಿವರಿಸುತ್ತದೆ. ಆದಿತ್ಯ ನಟನೆಯ ಡೆಡ್ಲಿ ಸೋಮ ಚಿತ್ರವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ರಕ್ಷಿತಾ ಅಭಿನಯಿಸಿದ್ದರೆ,ತಾರಾ, ದೇವರಾಜ್, ಶೋಭರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ನಟಿ ರಕ್ಷಿತಾ ಬೋಲ್ಡ್ ಅಂಡ್ ಹಲವು ಆಸೆ ಕನಸುಗಳ ಕಟ್ಟಿಕೊಂಡಿದ್ದ ನಟಿ ಆದರೆ ಅದೆಲ್ಲೊ ಒಂದು ಗಳಿಗೆಯಲ್ಲಿ ಆದಿತ್ಯ ತಮ್ಮನ್ನು ಆಳುತ್ತಿದ್ದಾನೆ ಎಂದೆನಿಸಿ ಮನಸ್ಸು ಗಟ್ಟಿ ಮಾಡಿಕೊಂಡು ಆ ಪ್ರೀತಿಯಿಂದ ಹೊರಬಿದ್ದರು. ಹಲವಾರು ಸಿನಿಮಾಗಳ ಮಾಡಿ ಜನರ ಮನಗೆದ್ದರು. ಮುಂದೆ ಅಮ್ಮ ತೋರಿಸಿದ ನಟ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿ ಇದೀಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.