ಅಹಮದಾಬಾದ್ ಏರ್ ಇಂಡಿಯಾ ಅವಘಡದ ಸಂಧರ್ಭದಲ್ಲಿ ಪೈಲೆಟ್ ಮಾಡಿದ ಕೆಲಸಕ್ಕೆ ಭಾರತೀಯರು ಫಿದಾ
Jun 15, 2025, 18:18 IST

ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ವಿಮಾನ ನಿಲ್ದಾಣದ ಟೇಕಾಫ್ ಆದ 30 ಸೆಕೆಂಡ್‌ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ನಂತರ ವಿಮಾನ ಪತನ ಹೊಂದಿತು ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗುಜರಾತ್ ರಾಜಧಾನಿ ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿದೆ. ಏರ್ಪೋರ್ಟ್ ಬಳಿ ಮೇಧಿನಿ ನಗರ್ನಲ್ಲಿ ಈ ಘಟನೆ ಸಂಭವಿಸಿದ್ದು ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲೆ ಬಿದ್ದಿದೆ.
<a href=https://youtube.com/embed/wpX3pf0PV44?autoplay=1&mute=1><img src=https://img.youtube.com/vi/wpX3pf0PV44/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಭಾರತ ಮೂಲದವರಾದರೂ ವಿಶ್ವಾಸ್ ಕುಮಾರ್ ರಮೇಶ್ ಬ್ರಿಟಿಷ್ ಪ್ರಜೆಯಾಗಿದ್ದು, ಲಂಡನ್‌ನಿಂದ ಕುಟುಂಬವನ್ನು ನೋಡಲು ಗುಜರಾತ್‌ಗೆ ಬಂದಿದ್ದರು. ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ವಾಪಸ್ ಲಂಡನ್‌ಗೆ ತೆರಳುತ್ತಿದ್ದರು. ಎ 11 ಸೀಟ್‌ನಲ್ಲಿ ಅವರು ಕುಳಿತು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಪಾರಾಗಿದ್ದು, ಅವರ ಎದೆ, ಕಣ್ಣು ಮತ್ತು ಕಾಲುಗಳಿಗೆ ಗಾಯಗಳಾಗಿವೆ.
ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ಜೋರಾದ ಶಬ್ದ ಕೇಳಿಸಿತು. ತಕ್ಷಣವೇ ವಿಮಾನವು ಪತನಗೊಂಡಿತು. ಎಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು. ನಾನು ಎದ್ದಾಗ, ನನ್ನ ಸುತ್ತಲೂ ಮೃತದೇಹಗಳು ಬಿದ್ದಿದ್ದವು. ನಾನು ಹೆದರಿದೆ. ಎದ್ದು ಓಡಿದೆ. ವಿಮಾನದ ತುಂಡುಗಳು ಎಲ್ಲೆಡೆ ಬಿದ್ದಿದ್ದವು. ಯಾರೋ ನನ್ನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡ ಬಂದರು ಎಂದು ವಿಶ್ವಾಸ್ ಕುಮಾರ್ ರಮೇಶ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.