ಡಿವೋರ್ಸ್ ಬೆನ್ನಲ್ಲೇ ಪಬ್ಲಿಕ್ ನಲ್ಲಿ ಎದ್ದು ಬಿದ್ದು ಜಗಳ ಮಾಡಿಕೊಂಡ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್
Jan 21, 2024, 16:16 IST
ಮೊದಲೆಲ್ಲಾ ಮದುವೆ ಆದರೆ ಮುಗಿಯಿತು ಇದ್ದರೂ ಸತ್ತರೂ ಅವರ ಜೊತೆ ಎನ್ನುವಂತಾಗಿತ್ತು. ಡೈವೋರ್ಸ್ ಅಷ್ಟೊಂದು ಸುದ್ದಿ ಮಾಡಿರಲಿಲ್ಲ. ಆದರೆ ಈಗ ಹೊಂದಾಣಿಕೆ ಆಗದಿದ್ದರೆ. ಅವರು ಬೈದರು. ಇವರು ಹೇಳಿದರೂ ಎಂದು ಕೂಡ ಡೈವೋರ್ಸ್ ಕೊಟ್ಟು ಬೇರೆ ಆಗುವ ಹಂತಕ್ಕೆ ಹೋಗಿ ನಿಂತಿದೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಆದರೆ ಇದೀಗ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬೆಲ್ಲಾ ವದಂತಿಗಳು ಎಲ್ಲೆಡೆ ಹರಡುತ್ತಿದೆ, ಈ ಬೆನ್ನಲ್ಲೇ, 2010 ರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಪ್ರತಿದಿನ ಜಗಳವಾಡುತ್ತಿದ್ದೆವು ಎಂದು ನೀಡಿರುವ ಹೇಳಿಕೆಯ ಸುದ್ದಿ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಅದನ್ನು ಐಶ್ವರ್ಯ ರೈ ಹೋರಾಟ ಎಂದು ಕರೆದರೆ, ಅಭಿಷೇಕ್ ಭಿನ್ನಾಭಿಪ್ರಾಯ ಎಂದಿದ್ದರು. ಆದರೆ ಎಷ್ಟೇ ಜಗಳಗಳು ನಡೆದರು ಇವರಿಬ್ಬರು ರಾಜಿ ಮಾಡಿಕೊಳ್ಳುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು ಎಂದು ಸ್ವತಃ ಅವರೇ ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಅವರು 2007ರ ಏಪ್ರಿಲ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 2011ರಲ್ಲಿ, ಮಗಳು ಆರಾಧ್ಯಗೆ ದಂಪತಿ ಪೋಷಕರಾಗುತ್ತಾರೆ. ಇನ್ನು ಇವರಿಬ್ಬರು ಧೂಮ್ 2, ಗುರು ಮತ್ತು ರಾವನ್ ಸೇರಿ ಮುಂತಾದ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಇನ್ನು ಈ ಜೋಡಿ ಎಷ್ಟು ಬಾರಿ ಜಗಳವಾಡುತ್ತಾರೆ ಎಂಬ ಪ್ರಶ್ನೆಗೆ ಈ ಹಿಂದೊಮ್ಮೆ ಉತ್ತರಿಸಿದ್ದರು. ಓಹ್, ಪ್ರತಿದಿನ ಎಂದು ಹೇಳಿದ್ದರು. ಆದರೆ ಅವು ಜಗಳಗಳಲ್ಲ, ಭಿನ್ನಾಭಿಪ್ರಾಯಗಳಿದ್ದಂತೆ. ಗಂಭೀರವಲ್ಲ… ಅದೊಂದು ರೀತಿಯ ಆರೋಗ್ಯಕರ ಚರ್ಚೆ ಎಂದೇ ಹೇಳಬಹುದು ಎಂದು ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ. ಇನ್ನು ಇವಷ್ಟೇ ಅಲ್ಲದೆ, ಕೆಲವೊಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ದಂಪತಿ ಹೋದರೆ, ಪಾಪರಾಜಿಗಳು ಐಶ್ವರ್ಯಾ ಸಿಂಗಲ್ ಆಗಿರುವ ಫೋಟೋ ಬೇಕೆಂದು ಮನವಿ ಮಾಡುತ್ತಾರೆ.
ಈ ವಿಚಾರಕ್ಕೆ ಅನೇಕ ಬಾರಿ ಅಭಿಷೇಕ್ ಬಚ್ಚನ್ ಬೇಸರಗೊಂದು ಆಕೆಯ ಜೊತೆ ಜಗಳವಾಡುತ್ತಾ ಹೋಗಿರುವುದನ್ನು ಕಾಣಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.