ದ ರ್ಶನ್ ಗೆ ಹಿಗ್ಗಾಮುಗ್ಗಾ ಜಾಡಿಸಿದ ಅಜಿತ್; ಒಬ್ಬ ನಟನಿಗೆ ಈರೀತಿ ಅಂದಿದ್ದು ಇದೇ ಮೊದಲು

 

ನಟ  ದರ್ಶನ್ ಇಂದಾಗಿ ರೇಣುಕ ಸ್ವಾಮಿ ಕೊಲೆಯಾದ ಪ್ರಕರಣ ಶುರುವಾಗುತ್ತಿದ್ದಂತೆ ನಟ ದರ್ಶನ್ ಬಂಧನದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದರು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಕಾವೇರಿ ನಿವಾಸಕ್ಕೆ  ತೆರಳಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ಮಾಹಿತಿ ನೀಡುತ್ತಲೇ ಬಂದಿದ್ದಾರೆ.

ಇದೀಗ ದರ್ಶನ್ ಹಾಗೂ ಸಚಿವ ಜಮೀರ್ ಇಬ್ಬರೂ ಆಪ್ತರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರವಾಗಿದೆ. ಜಮೀರ್ ಪುತ್ರನ ಸಿನಿಮಾ ಪ್ರಮೋಷನ್​ಗೆ ದರ್ಶನ್‌ ಸಹಾಯ ಮಾಡಿದ್ದರು. ಆದ್ದರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೂಗು ತೂರಿಸಬೇಡ, ಯಾವುದೇ ಪ್ರತಿಕ್ರಿಯೇ ನೀಡಬೇಡ. ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ʼ​ಗೆ ತಿಳಿಸಿದ್ದಾರೆ. ಉಪ್ಪು ತಿಂದವ ನೀರು ಕುಡಿಯುವುದು ಅನಿವಾರ್ಯ ಎಂದಿದ್ದಾರೆ. <a href=https://youtube.com/embed/ucvdPrCLeVw?autoplay=1&mute=1><img src=https://img.youtube.com/vi/ucvdPrCLeVw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನೂ ದರ್ಶನ್ ಹಾಗೂ ನಿನ್ನ ಸ್ನೇಹ ನನಗೂ ಗೊತ್ತಿದೆ. ಆದರೆ, ಈ ಕೇಸ್​ನಿಂದ ದೂರ ಇರು , ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆ ವಹಿಸು. ನಿನ್ನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಜಮೀರ್​ಗೆ ಸಿಎಂ ಸಲಹೆ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಸ್ಯಾಂಡಲ್​​ವುಡ್​ ಸ್ಟಾರ್​ ನಟ ದರ್ಶನ್ ಅವರನ್ನು ಮೈಸೂರಿನ ರ‍್ಯಾಡಿಸನ್​ ಹೋಟೆಲ್​ನಲ್ಲಿ ವಿಜಯನಗರ ಎಸಿಪಿ ಚಂದನ್​ ಬಂಧಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ , ಪವಿತ್ರಾ ಗೌಡ ಸೇರಿ 13 ಜನರ ಬಂಧನವಾಗಿದೆ.4 ಪತ್ತೆ ಮಾಡಲಾಗುತ್ತಿದೆ.

ನಟ ದರ್ಶನ್‌ ಪ್ರಕರಣದಲ್ಲಿ ಕಾಂಗ್ರೆಸ್‌‍ನ ಹಲವು ಶಾಸಕರು, ನಾಯಕರು, ವಿರೋಧಪಕ್ಷಗಳ ಕೆಲವು ಶಾಸಕರು ಪ್ರಭಾವ ಬೀರಲು ಯತ್ನಿಸಿದರು ಎಂದು ಹೇಳಲಾಗಿದೆ. ಆದರೆ ಅದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆ ಬೆಳಕಿಗೆ ಬರಲಿ. ಈ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.