ಅಯ್ಯೋ ನಟ ಜಗ್ಗೇಶ್ ಪರಿಸ್ಥಿತಿ ನೋಡಲಾಗುತ್ತಿಲ್ಲ, ನೆಚ್ಚಿನ ಜಗ್ಗಣ್ಣನಿಗೆ ಏನಾಯಿತು

 

ನವರಸ ನಾಯಕ ಜಗ್ಗೇಶ್ ಕನ್ನಡ ಅನ್ನೋ ವಿಷಯ ಬಂದಾಗಲೆಲ್ಲ ಸದಾ ಮುಂದಿರುತ್ತಾರೆ. ಆದರೆ, ಮೊನ್ನೆ ನಡೆದ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಸೂಚಿಸಿದ ಬೆಂಬಲದ ವೇಳೆ ಜಗ್ಗೇಶ್ ಅನುಪಸ್ಥಿತಿ ಕಾಡುತ್ತಿತ್ತು. ಇದೇ ವೇಳೆ ಜಗ್ಗೇಶ್ ಅನಾರೋಗ್ಯದ ಸುದ್ದಿ ಓಡಾಡಿದೆ.
ನವರಸ ನಾಯಕ ಜಗ್ಗೇಶ್ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಅಲ್ಲದೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವ ಕೆಲವು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಜಗ್ಗೇಶ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.
ಜಗ್ಗೇಶ್​ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಯಿತು. 

ನಿನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ನಟ ಜಗ್ಗೇಶ್, ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಬಹಳ ಪ್ರಯಾಸದಿಂದಲೇ ಆಗಮಿಸಿ ಮಾಧ್ಯಮದವರ ಮುಂದೆ ಹಲವು ವಿಷಯಗಳನ್ನು ಮಾತನಾಡಿದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದರು. <a href=https://youtube.com/embed/T3KqjTNxrnQ?autoplay=1&mute=1><img src=https://img.youtube.com/vi/T3KqjTNxrnQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅಲ್ಲದೆ ತಮ್ಮ ಅಭಿಮಾನಿಗಳಿಗೆ ನವರಸ ನಾಯಕ ಜಗ್ಗೇಶ್ ಕೆಲವು ದಿನಗಳಲ್ಲಿ ನಡೆದಾಡಲು ಕಷ್ಟ ಪಡುತ್ತಿದ್ದರು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜಗ್ಗೇಶ್ ಅವರ ಬೆನ್ನು ಹುರಿಗೆ ಸಮಸ್ಯೆಯಾಗಿದೆ. ಹೀಗಾಗಿ ನಡೆದಾಡಲು ಪರದಾಡುತ್ತಿದ್ದಾರೆ. "L4 L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲು ಭಾಗಿಯಾಗಲು ಸಾಧ್ಯವಾಗಲಿಲ್ಲಾ! 2ವಾರ pysiyo ಚಿಕಿತ್ಸೆ ಹಾಗು bedrest ಕಡ್ಡಾಯ ಎಂದು ಡಾ ಸಲಹೆ ನೀಡಿದ್ದಾರೆ. 

ನಿಮ್ಮ ಮಾಹಿತಿಗಾಗಿ ಧನ್ಯವಾದ ಶುಭಸಂಜೆ.." ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್‌ಗೆ ದೇವರ ಮೇಲೆ ಎಲ್ಲಿಲ್ಲದ ನಂಬಿಕೆ. ಹೀಗಾಗಿ ಬೇರೆ ಬೇರೆ ಕಡೆಯಿರುವ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಜಗ್ಗೇಶ್ ಕೇದಾರನಾಥ ದೇವಸ್ಥಾನಕ್ಕೆ ಹೋಗಿದ್ದರು. ಆ ವೇಳೆ ಪೆಟ್ಟು ಮಾಡಿಕೊಂಡಿರಬಹುದು ಎಂದು ಸಿನಿಮಾರಂಗ ಅಂದಾಜು ಮಾಡಿದೆ. ಸದ್ಯ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾಗಿ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.