ಟೊಮ್ಯಾಟೊ ಬೆಳೆದು ಕೋಟ್ಯಾಧೀಶ್ವರನಾದ ಸಾಮಾನ್ಯ ರೈತ, ಈತನ ಐಡಿಯಾ ನೋಡಿದ್ರೆ ಬೆಚ್ಚಿಬೀಳ್ತೀರಾ

 

ಟೊಮೆಟೊ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದರೆ ರೈತರು ಮಾತ್ರ ಖುಷಿಯಾಗಿದ್ದಾರೆ. ಕೆಲವು ಟೊಮೆಟೊ ಬೆಳೆದ ರೈತರು ತಾವು ಈವರೆಗ ಕಂಡಿರದಷ್ಟು ಹಣವನ್ನು ಈ ಬೆಲೆ ಏರಿಕೆ ಸೀಸನ್‌ನಲ್ಲಿ ಪಡೆದುಕೊಂಡಿದ್ದಾರೆ. ಅದಕ್ಕೆ ಉದಾಹರಣೆಯೇ ಮಹಾರಾಷ್ಟ್ರದ ಪುಣೆ ಭಾಗದ ರೈತ ತುಕಾರಾಂ ಭಾಗೋಜಿ ಗಾಯಕರ್‌. 

ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ. ನಷ್ಟಿದ್ದು, ಮಹಾರಾಷ್ಟ್ರದ ಪುಣೆಯ ಈ ರೈತರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಇಂಡಿಯಾ ಟುಡೆಯಲ್ಲಿ ಪ್ರಕಟವಾದ ವರದಿ ಪ್ರಕಾರ ತುಕಾರಾಂ ಭಾಗೋಜಿ ಗಾಯಕರ್ ಟೊಮೆಟೊ ಮಾರಾಟದ ಮೂಲಕ 1.5 ಕೋಟಿ ರೂ. ಸಂಪಾದಿಸಿದ್ದಾರೆ. 

13,000 ಕ್ರೇಟ್ ಟೊಮೆಟೊಗಳನ್ನು ಮಾರಾಟ ಮಾಡುವ ಮೂಲಕ ಕೋಟ್ಯಧಿಪತಿಯಾಗಿದ್ದಾರೆ.
ತುಕಾರಾಂ ಭಾಗೋಜಿ ಗಾಯಕರ್‌ ಒಟ್ಟು 18 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ. ಈ ಪೈಕಿ ಕುಟುಂಬದವರ ಸಹಕಾರದಿಂದ 12 ಎಕರೆ ಜಮೀನಿನಲ್ಲಿ ಈ ಬಾರಿ ಟೊಮೆಟೊ ಕೃಷಿ ಮಾಡಿದ್ದರು. ಅದೃಷ್ಠಕ್ಕೆ ಈ ವರ್ಷ ಅವರ ಜಮೀನಿನಲ್ಲಿ ಟೊಮೆಟೊ ಬೆಳೆ ಉತ್ತಮವಾಗಿ ಬಂದಿತ್ತು. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಕ್ಕಿದ್ದು ಅವರು ಏಕಾಏಕಿ ಕೋಟ್ಯಧಿಪತಿಯಾಗಿದ್ದಾರೆ. <a href=https://youtube.com/embed/XHAFUDPXK1E?autoplay=1&mute=1><img src=https://img.youtube.com/vi/XHAFUDPXK1E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ತುಕಾರಾಂ ಭಾಗೋಜಿ ಗಾಯಕರ್ ಮಾತನಾಡಿ, 'ಈಗ ಒಂದು ಕ್ರೇಟ್ ಟೊಮೆಟೊಗೆ 2,100 ರೂ. ದರವಿದೆ. ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರ 900 ಕ್ರೇಟ್ ಟೊಮೆಟೊ ಮಾರಾಟ ಮಾಡಿ 18 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿದ್ದೇನೆ,' ಎಂದಿದ್ದಾರೆ. ಒಂದು ತಿಂಗಳಲ್ಲಿ ಟೊಮೆಟೊ ಮಾರಾಟ ಮಾಡಿ ಲಕ್ಷ ರೂ.ಗಿಂತ ಹೆಚ್ಚು ಗಳಿಕೆ ಮಾಡಿದ್ದಾರೆ. ಕೋಲಾರದ ರೈತರೊಬ್ಬರು ಕೇವಲ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡುವ ಮೂಲಕ 38 ಲಕ್ಷ ರೂ. ಸಂಪಾದಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.