ಕರುನಾಡಿಗೆ ಮತ್ತೊಂದು ಬರಸಿಡಿಲು, ಮತ್ತೊಬ್ಬ ಯುವ ನಟ ಹೃ.ದಯಾಘಾತಕ್ಕೆ ಇನ್ನ್ ಇಲ್ಲ

 

ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಸಾವು ಮಾಸುವ ಮುನ್ನವೇ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ಪವನ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಡ್ಯ ಮೂಲದ ಪವನ್‌ ತಮಿಳು ಮತ್ತು ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗಸ್ಟ್‌ 16ರ ಬೆಳಗ್ಗೆ ಮುಂಬೈನ ಮನೆಯಲ್ಲಿ ಹೃದಯಾಘಾತದಿಂದ 25 ವರ್ಷದ ಪವನ್‌ ಸಾವನ್ನಪ್ಪಿದ್ದರು. 

ಇದೀಗ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರದಲ್ಲಿ ಪವನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಕಿರುತೆರೆ ಜತೆಗೆ ಸಿನಿಮಾಗಳಲ್ಲಿಯೂ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸು ಹೊತ್ತು ಪವನ್‌ ಮುಂಬೈಗೆ ತೆರಳಿದ್ದರು. ಆದರೆ, ಆ ಕನಸನ್ನು ನನಸು ಮಾಡಿಕೊಳ್ಳುವ ಅರ್ಧದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಪವನ್‌ ಹುಟ್ಟೂರು ಮಂಡ್ಯ ಆದ ಹಿನ್ನೆಲೆಯಲ್ಲಿ ಅವರ ಮೃತದೇಹವನ್ನು ಮಂಡ್ಯಕ್ಕೆ ತರಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ. ನಟ ಪವನ್‌ ನಟಿಸುತ್ತಿದ್ದ ಧಾರಾವಾಹಿಗಳ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಿಬೇಕಿದೆ. ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಪವನ್ ಅವರು ಹಾಲಿ ಮುಂಬೈ ನಗರದಲ್ಲಿ ವಾಸವಿದ್ದರು. ಅವರಿಗೆ 25 ವರ್ಷ ಎನ್ನಲಾಗಿತ್ತು. ಮುಂಬೈ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮುಂಜಾನೆ 5.00 ಗಂಟೆಗೆ ತೀವ್ರ ಹೃದಯಘಾತದಿಂದ ಪ್ರಾಣ ಬಿಟ್ಟಿದ್ದಾರೆ.  <a href=https://youtube.com/embed/IgFv3etZDoo?autoplay=1&mute=1><img src=https://img.youtube.com/vi/IgFv3etZDoo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಟನಾಗಿದ್ದರಿಂದ ತನ್ನ ದೇಹ ಆಕರ್ಷಣೆಗಾಗಿ ಅತಿಯಾದ ವ್ಯಾಯಮಕ್ಕೆ ತಲ್ಲಿನರಾಗಿದ್ದ ಕಾರಣವೇ ಈ ಘಟನೆಗೆ ಕಾರಣವಾಗಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ. ಬೆಳ್ಳಿ ತೆರೆ ಚಿತ್ರಗಳಲ್ಲಿ ಅಭಿನಯಿಸುವ ಕನಸ್ಸು ಕಂಡಿದ್ದ ಯುವ‌ ನಟ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಇವರು ಮುಂಬೈನಲ್ಲಿ ನೆಲೆಸಿದ್ದರು. ಗುರುವಾರ ನಸುಕಿನ ಜಾವ ಹೃದಯಾಘಾತದಿಂದ ಸಾವು ಕಂಡಿದ್ದು, ಇಂದು ಹುಟ್ಟೂರಿನಲ್ಲಿ ಮೃತ ಯುವ ನಟನ ಅಂತ್ಯಸಂಸ್ಕಾರ ನಡೆಯಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.