ನಾನು ಏನು ಹಾಕಿದ್ದೇನೆ ಅಂತ ಅಭಿಮಾನಿಗಳ ಬಳಿ ಪ್ರಶ್ನೆ ಮಾಡಿದ ಅನುಪಮ ಗೌಡ
Nov 14, 2024, 13:04 IST
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ, ತಮ್ಮ ಜೀವನದ ಅತಿ ದೊಡ್ಡ ಕನಸು ನನಸು ಮಾಡಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಅನುಪಮಾ ತಮ್ಮ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮುಗಿಸಿದ್ದರು.
ರಾಜಾ ರಾಣಿ ರೀಲೋಡೆಡ್ ಬಳಿಕ ಯಾವುದೇ ಕಾರ್ಯಕ್ರಮಗಳಲ್ಲೂ ಅನುಪಮಾ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ನಟಿ ತಮ್ಮ ಹೊಸ ಹೊಸ ಫೋಟೊ ಶೂಟ್, ವಿಡೀಯೋಗಳ ಮೂಲಕ ಸುದ್ದಿ ಮಾಡುತ್ತಿರುತ್ತಾರೆ.
ಕಳೆದ ಕೆಲವು ದಿನಗಳಿಂದ ಗೃಹಪ್ರವೇಶದ ಸುಂದರ ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡುತ್ತಿದ್ದರು, ಬೇರೆ ಬೇರೆ ಸೀರೆಯಲ್ಲಿ ವಿವಿಧ ಫೊಟೋ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು.
ಇದೀಗ ಸೀರೆ ಸೈಡಿಗಿಟ್ಟು ಮಿನಿ ಡ್ರೆಸ್ ಧರಿಸಿ, ಕಾಲಿಗೆ ಹೈ ಹೀಲ್ಸ್ ಚಪ್ಪಲ್ ಧರಿಸಿ, ತುಂಬಾನೆ ಮುದ್ದು ಮುದ್ದಾಗಿ ಅನುಪಮಾ ಪೋಸ್ ಕೊಟ್ಟಿದ್ದು, ಇವರ ಮುದ್ದಾದ ಲುಕ್ ನೋಡಿ, ಅಭಿಮಾನಿಗಳು ಕವಿಗಳಾಗಿ, ಕವನಗಳನ್ನೇ ಗೀಚಿದ್ದಾರೆ.
ಬಿಳಿ ಬಣ್ಣದ ಮಿನಿ ಡ್ರೆಸ್ ಮೇಲೆ ಕೆಂಪು, ಆರೆಂಜ್, ಹಸಿರು ಬಣ್ಣದ ಫ್ಲೋರಲ್ ಚಿತ್ತಾರ ಇರುವ ಡ್ರೆಸ್ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಅನು ಹೂನಗು ಚೆಲ್ಲುತ್ತಿದ್ರೆ, ಅಭಿಮಾನಿಗಳು ಈಕೆ ಚಂದಿರನನ್ನು ನಾಚಿಸುವಷ್ಟು ಸುಂದರಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.