ಕೋಟಿ ಬೆಲೆಯ ಹೊಸ ಮನೆ ಖರೀದಿಸಿದ ಅನುಪಮಾ ಗೌಡ, ಇಷ್ಟೊಂದು ಹಣ ಎಲ್ಲಿಂದ ಎಂದ ಜನ

 
 ನೂರೆಂಟು ಕನಸುಗಳ ಹೊತ್ತು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಅಕ್ಕ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಅನುಪಮಾ ಗೌಡ. ರಾಜಾ ರಾಣಿ,ಗಿಚ್ಚಿ ಗಿಲಿಗಿಲಿ, ಅನುಬಂಧ ಅವಾರ್ಡ್ಸ್ ನನ್ನಮ್ಮ ಸೂಪರ್ ಸ್ಟಾರ್ ಮುಂತಾದ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ಅನುಪಮಾ ಗೌಡ ಇದೀಗ ಹೊಸ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ.
ಹೌದು.. ನಟಿ ಅನುಪಮಾ ಗೌಡ ಹೊಸ ಮನೆ ಖರೀದಿಸಿದ್ದಾರೆ. ಅನುಪಮಾ ಗೌಡ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಅನುಪಮಾ ಗೌಡ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ನಟ-ನಟಿಯರು ಹಾಜರಿದ್ದರು. ಅಂದ್ಹಾಗೆ, ತಮ್ಮ ಮನೆಗೆ ‘ನಮ್ಮನೆ’ ಅಂತ ಅನುಪಮಾ ಗೌಡ ಹೆಸರಿಟ್ಟಿದ್ದಾರೆ. <a href=https://youtube.com/embed/fwPyyIGwjUw?autoplay=1&mute=1><img src=https://img.youtube.com/vi/fwPyyIGwjUw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಟಿ, ನಿರೂಪಕಿ ಅನುಪಮಾ ಗೌಡಗೆ ಏಕಾಏಕಿ ಯಶಸ್ಸು ಸಿಕ್ಕಿಲ್ಲ. ಸಾಕಷ್ಟು ಕಷ್ಟಪಟ್ಟಿದ್ದ ಅವರಿಗೆ ಸೋಲು-ಗೆಲುವಿನ ಪಾಠ ಆಗಿದೆ. ಈ ಹಿಂದೆ ಅವರು ಲಕ್ಷಗಟ್ಟಲೇ ಸಾಲ ಮಾಡಿಕೊಂಡಾಗ ಅವರಿಗೆ ಖ್ಯಾತ ನಟಿಯೊಬ್ಬರು ಶಕ್ತಿಯಾಗಿ ನಿಂತಿದ್ದರಂತೆ. ಅದು 7-8 ವರ್ಷದ ಹಿಂದಿನ ಘಟನೆ. ಅಕ್ಕ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಅನುಪಮಾ ಗೌಡ ಅವರು ಆ ಸಾಲವನ್ನು ತೀರಿಸಬೇಕಿತ್ತು. 
ಆಗ ಅವರಿಗೆ ಸ್ನೇಹಿತರು ನೆರವಾದರು. ಆ ಟೈಮ್‌ನಲ್ಲಿ ಅವರಿಗೆ ದೊಡ್ಡ ಶಕ್ತಿ ಆಗಿದ್ದು ನೇಹಾ ಗೌಡ ಅವರಂತೆ. ಅದೇ ಸಮಯಕ್ಕೆ ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 5 ಆಫರ್ ಬಂದು ಜೀವನದ ದಾರಿಯನ್ನು ಬದಲು ಮಾಡಿತ್ತು. ಅನುಪಮಾ ಗೌಡ ಹಾಗೂ ನೇಹಾ ಗೌಡ ಅವರು ಒಳ್ಳೆಯ ಸ್ನೇಹಿತರು. ನೇಹಾ ಗೌಡಳಿಂದ ನಾನು ತುಂಬ ಬದಲಾಗಿದ್ದೇನೆ ಎಂದು ಅನುಪಮಾ ಗೌಡ ಅವರು ಸಾಕಷ್ಟು ಬಾರಿ ಹೇಳಿದ್ದಾರೆ. ಇದೀಗ ತಮ್ಮದೇ ಸ್ವಂತ ಹಣದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.