ಮದುವೆಗೆ ತಯಾರಾದ ಅನುಶ್ರೀ, ಬಹು ವೆಚ್ಚದ ಕಾರು ಖರೀದಿ ಮಾಡಿ ಹನಿಮೂನ್ ಪ್ಲಾನ್ ಮಾಡಿದ ಅನುಶ್ರೀ
Jun 17, 2025, 17:40 IST

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ. ಮಾತಿನಲ್ಲೇ ಮರುಳು ಮಾಡುವ ಕರಾವಳಿ ಚೆಲುವೆ ಅನುಶ್ರೀ ಅವರ ಮಾತಿಗೆ ಸೋಲದವರಿಲ್ಲ. ಕನ್ನಡಿಗರು ಪ್ರೀತಿಯಿಂದ ಮಾತಿನ ಮಲ್ಲಿ ಅಂತಲೇ ಬಿರುದು ಕೊಟ್ಟಿರುವ ಅನುಶ್ರೀಗೆ ಅವರ ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಈಗಾಗಲೇ ಆಂಕರ್ ಅನುಶ್ರೀ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಸದ್ಯ ಕನ್ನಡದಲ್ಲಿರುವ ಅತ್ಯಂತ ದುಬಾರಿ ನಾಯಕಿ ಎಂದೇ ಹೇಳಲಾಗುತ್ತಿದೆ. ಜೀ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀಯವರೇ ನಿರೂಪಣೆ ಮಾಡುತ್ತಾರೆ.
ಅನುಶ್ರೀ ಅವರ ನಿರೂಪಣೆಗೆ ಮನೆ ಮಂದಿ ಎಲ್ಲಾ ಕಾದು ಕುಳಿತಿರುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪದಿಂದ ಹಿಡಿದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಂತಹ ದುಬಾರಿ ರಿಯಾಲಿಟಿ ಶೋಗಳಿಗೆ ಇವರೇ ನಿರೂಪಕಿ. ಅನುಶ್ರೀ ಇಲ್ಲದೆ, ಈ ಶೋಗಳನ್ನು ನೋಡುವುದಕ್ಕೆ ಕಿರುತೆರೆ ವೀಕ್ಷಕರು ಇಷ್ಟಪಡುವುದಿಲ್ಲ. ಆಮಟ್ಟಿಗೆ ವೀಕ್ಷಕರನ್ನು ತನ್ನೆಡೆಗೆ ಆಂಕರ್ ಅನುಶ್ರೀ ಅವರು ಸೆಳೆದು ಬಿಟ್ಟಿದ್ದಾರೆ.
ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಬಹು ವರ್ಷಗಳಿಂದ ಅನುಶ್ರೀ ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದು, 2025 ರಲ್ಲಿ ಮದುವೆಯಾಗುತ್ತೇನೆ ಎಂದು ಆಂಕರ್ ಅನುಶ್ರೀ ಅವರು ಹೇಳಿದ್ದು, ಮದುವೆಗೂ ಮುನ್ನವೇ ಆಂಕರ್ ಅನುಶ್ರೀ ಅವರು ಹೊಸ ಐಶಾರಾಮಿ ಕಾರು ಖರೀಸುವ ಮೂಲಕ ಅನುಶ್ರೀ ಅವರು ಸುದ್ದಿಯಲ್ಲಿದ್ದಾರೆ. ನಿರೂಪಣೆಯ ಜೊತೆಗೆ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದಾರೆ ಅನುಶ್ರೀ. ಪ್ರತಿ ಎಪಿಸೋಡಿಗೆ ಲಕ್ಷಾಂತರ ಸಂಭಾವನೆ ಪಡೆವ ಅನುಶ್ರೀ, ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ
ಆಂಕರ್ ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆಯೇ ಬರೋಬ್ಬರಿ 25 ಲಕ್ಷ ರೂಪಾಯಿಗಳು. ಕಾರಿನ ಟಾಪ್ ಎಂಡ್ ಮಾಡೆಲ್ಲಿನ ಬೆಲೆ 40 ಲಕ್ಷ ರೂಪಾಯಿಗಳು. ಇನ್ನೂ ಅನುಶ್ರೀ ಅವರು ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಮಾಡಿದ್ದು, ಯಾವ ಮಾಡೆಲ್ ಅನ್ನು ಖರೀದಿ ಮಾಡಿದ್ದಾರೆ ಎಂಬುದು ಖಾತ್ರಿ ಇಲ್ಲ.
ಆದರೆ ಈ ಕಾರಿನ ಮಿಡಲ್ ವೇರಿಯೆಂಟ್ ಹೆಚ್ಚು ಪ್ರಚಲಿತದಲ್ಲಿದೆ. ಹಾಗಾಗಿ ಅನುಶ್ರೀ ಸಹ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಬೆಲೆ ನೀಡಿ ಮಿಡಲ್ ವೇರಿಯೆಂಟ್ ಅನ್ನೇ ಖರೀದಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.