ಸಾವಿರಾರು ಕೋಟಿ ಕೊಟ್ಟು ಹೊಸ ಕಾರು ಖರೀದಿ ಮಾಡಿದ ಅಶ್ವಿನಿ ಮೇಡಂ; ಹಣ ಎಲ್ಲಿಂದ ಗೊ.ತ್ತಾ

 

ಅಪ್ಪು ಅಗಲಿಕೆಯ ಬಳಿಕ ಇಡೀ ಮನೆಯ ಜವಾಬ್ದಾರಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲೇರಿದೆ. ನಿಧಾನವಾಗಿ ಸಿನಿಮಾ ಕೆಲಸಗಳಲ್ಲಿ ಅಶ್ವಿನಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಯುವ ಪ್ರೀ ರಿಲೀಸ್‌ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪುನೀತ್ ರಾಜ್‌ಕುಮಾರ್ ಅರ್ಧಕ್ಕೆ ಬಿಟ್ಟುಹೋದ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದುವರೆಸುತ್ತಿದ್ದಾರೆ. ಮುಖ್ಯವಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಅದಾಗಲೇ ಅಪ್ಪು ಒಂದಷ್ಟು ಕಥೆಗಳನ್ನು ಫೈನಲ್ ಮಾಡಿ ಸಿನಿಮಾ ನಿರ್ಮಾಣ ಆರಂಭಿಸಿದ್ದರು. ಆ ಸಿನಿಮಾಗಳು ಇದೀಗ ಬಿಡುಗಡೆಗೆ ಸಜ್ಜಾಗುತ್ತಿವೆ.

ಸದ್ಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಅಪ್ಪುಗೂ ಕಾರ್‌, ಬೈಕ್ ಕ್ರೇಜ್‌ ಜಾಸ್ತಿ ಇತ್ತು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಇವೆ. ಆ ಪಟ್ಟಿಗೆ ಇದೀಗ ಆಡಿಕ್ಯೂ 7 ಕಾರು ಸೇರಿಕೊಂಡಿದೆ. ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಒಂದು. ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ಭಿನ್ನವಾಗಿದೆ.

ಪನೋರಮಿಕ್ ಸನ್‌ರೂಫ್, 4 ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, 250 KMPH ಸ್ಪೀಡ್ ಹೀಗೆ ಸಾಕಷ್ಟು ಫೀಚರ್ಸ್ ಈ ಕಾರ್‌ನಲ್ಲಿದೆ. ಇನ್ನು ಒಂದು ಲೀಟರ್ ಪೆಟ್ರೋಲ್‌ಗೆ 14 ಕಿ.ಲೋವರೆಗೂ ಮೈಲೇಜ್ ನೀಡುತ್ತದೆ. ಇನ್ನು ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿರುತ್ತದೆ. 

8 ಏರ್‌ಬ್ಯಾಗ್ಸ್ ಸೇರಿದಂತೆ ಸಾಕಷ್ಟು ಸುರಕ್ಷತೆ ಕಾರ್‌ನಲ್ಲಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವ ಆಡಿ ಕ್ಯೂ7 ಕಾರಿನ ಆನ್‌ರೋಡ್ ಬೆಲೆ 1 ಕೋಟಿ 10 ಲಕ್ಷ ರೂ.ವರೆಗೂ ಆಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.