ಸಂಪೂರ್ಣ ಬದಲಾದ ಬೇಬಿ ಶಾಮಿಲಿ, ಕನ್ನಡದ ನಟಿಯರಿಗೆ ಟೆನ್ಯನ್ ಶುರು
                               Nov 12, 2024, 18:33 IST 
                               
                           
                        
ಮನುಷ್ಯ ತಗ್ಗಿ ಬಗ್ಗಿ ನಡೆದರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ. ಬೆಳೆದಾಗ ಮನುಷ್ಯನ ಸ್ವಭಾವ ಗೊತ್ತಾಗುತ್ತೆ, ಹಣ, ಹೆಸರು ಬಂದಾಗ ಮನುಷ್ಯ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಅತಿ ಮುಖ್ಯವಾಗುತ್ತೆ. ಹಾಗಿಗಿಯೇ ಸ್ಟಾರ್ ಪಟ್ಟ ಬಂದಮೇಲೆ ಚೇಂಜ್ ಆಗಿ ಬಿಡುತ್ತಾರೆ ಅಂತ ಎಲ್ಲರೂ ಹೇಳಿದ್ದನ್ನು ಕೇಳಿದ್ದೀರ. ಜೊತೆಗೆ ಕೆಲವರು ಬದಲಾಗಿರುವುದನ್ನು ಕೂಡ ನೋಡಿದ್ದೀರ. ಅದರಲ್ಲೂ ಈ ಪ್ರಪಂಚದಲ್ಲಿ ಬದಲಾವಣೆ ಅನ್ನುವ ಪದ ಬಿಟ್ಟು ಮಿಕ್ಕಿದ್ದೆಲ್ಲವೂ ಬದಲಾಗುತ್ತೆ.  
 
                        
  ಇಲ್ಲಿ ಅಂಥ ವ್ಯಕ್ತಿಯೊಬ್ಬರ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ. ಸಂಪೂರ್ಣವಾಗಿ ಓದಿ. ಯಶಸ್ಸನ್ನು ತಲೆಗೆ ತೆಗೆದುಕೊಂಡಿದ್ದ ಬೇಬಿ ಶಾಮಿಲಿ ಕಥೆ ಇದು. ಬೇಬಿ ಶಾಮಿಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುತ್ತಿದ್ದ ಹಾಗೇ ಕಣ್ಣ ಮುಂದೆ ಮುದ್ದಾದ ಮುಖ, ಕಿವಿಗೆ ಇಂಪೆನಿಸುವ ಸೊಗಸಾದ ಡೈಲಾಗ್ಗಳು ಬರುತ್ತವೆ. ಹೌದು ಮಾಸ್ಟರ್ ಆನಂದ್ ಇವರನ್ನು ನೋಡಿ ಇನ್ಸ್ಪಿರ್ ಆಗಿದ್ದರಂತೆ. 
 
 
  ಬೇಬಿ ಶಾಮಿಲಿ ಒಂದೇ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇವರ ಸಿನಿಮಾದಲ್ಲಿ ಈಕೆಯೆ ಹೀರೋ ಇದ್ದಂತೆ. ಈಕೆ ಸಿನಿಮಾದಲ್ಲಿ ನಟಿಸಿದ್ದಾರೆ ಅಂದರೆ ಸಾಕು, ನಟ-ನಟಿಯರ ಬಗ್ಗೆ ಸಿನಿ ಪ್ರೇಕ್ಷಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಈಕೆಯ ಅಭಿನಯ ಕಂಡರೆ, ನಮ್ಮ ಮನೆಯ ಮಗಳು ಎನ್ನುವ ಫೀಲ್ ಬರುತ್ತಿತ್ತು. ಆ ವಯಸ್ಸಲ್ಲಿ ಅದ್ಭುತ ನಟನೆಯಿಂದ ಎಲ್ಲರ ಮನ ಗೆದ್ದವರು ಬೇಬಿ ಶಾಮಿಲಿ.  
   <a href=https://youtube.com/embed/Bx8o8-Ove4I?autoplay=1&mute=1><img src=https://img.youtube.com/vi/Bx8o8-Ove4I/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640"> 
   
 
 
  ಆ ಕಾಲದಲ್ಲೇ ಹೆಚ್ಚಿನ ಇನ್ಕಮ್ ಟ್ಯಾಕ್ಸ್ ಪೇ ಮಾಡುತ್ತಿದ್ದವರಲ್ಲಿ ಬೇಬಿ ಶಾಮಿಲಿ ಕೂಡ ಒಬ್ಬರು ಅಂದ್ರೆ ಆಶ್ಚರ್ಯ ಆಗದೇ ಇರದು. ಸಾಕಷ್ಟು ಸಿನಿಮಾಗಳಲ್ಲಿ ಬೇಬಿ ಶಾಮಿಲಿ ನಟಿಸಿದ್ದರು. ಇಷ್ಟೆಲ್ಲಾ ಸಿನಿಮಾ ಮಾಡಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ತೆರೆ ಮೇಲೆ ಬರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತ್ರ ನಟನೆ ಮಾಡುತ್ತಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಯಾಕೆ ಸಕ್ಸಸ್ ಆಗಲಿಲ್ಲ. ಬೇಬಿ ಶಾಮಿಲಿ ಅವರ ತಂದೆ ಬಾಬು. ಕೇರಳ ಮೂಲದವರು. ಅವರು ಕೂಡ ನಟನೆ ಮಾಡಬೇಕೆಂದು ತಮಿಳುನಾಡಿಗೆ ಬಂದಿದ್ದರು. 
 
 
  ಆದರೆ ಅವರ ಆಸೆ ಈಡೇರಲಿಲ್ಲ. ಹೀಗಾಗಿ ತಮ್ಮ ಆಸೆಯನ್ನು ತನ್ನ ಮಗಳ ಮೂಲಕ ಈಡೇರಿಸಿಕೊಂಡರು. ಬೇಬಿ ಶಾಮಿಲಿ 1987ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಬೇಬಿ ಶಾಮಿಲಿಗೆ ನಟನೆ ತರಬೇತಿ ನೀಡುತ್ತಿದ್ದರಂತೆ. 1989ರಲ್ಲಿ ತೆರೆಗೆ ಬಂದ ರಾಜನದೈ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿದ್ದರು. ಆಗ ಅವರಿಗೆ ಕೇವಲ ಎರಡು ವರ್ಷ. ಬೇಬಿ ಶಾಮಿಲಿ ಕಾಲ್ಶೀಟ್ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರಂತೆ. ಬೇಬಿ ಶಾಮಿಲಿ ಬೆಳೆದು ದೊಡ್ಡವಾಳಾಗುತ್ತಿದ್ದಂತೆ ಅವಕಾಶಗಳು ಕೂಡ ಕಡಿಮೆಯಾಗುತ್ತೆ. ಬೇಬಿ ಶಾಮಿಲಿ ಕೂಡ ತಮ್ಮ ವಿದ್ಯಾಭ್ಯಾಸ ಕಡೆ ಹೆಚ್ಚಿನ ಗಮನ ನೀಡುವುದಕ್ಕೆ ಶುರು ಮಾಡುತ್ತಾರೆ. 
 
 
  ಬಾಲನಟಿಯಾಗಿ ಇಲ್ಲಿಗೆ ಬೇಬಿ ಶಾಮಿಲಿ ಅಧ್ಯಾಯ ಮುಗಿದಿತ್ತು. 2009ರಲ್ಲಿ ಬಿಡುಗಡೆಯಾದ ಓಯ್ ಎಂಬ ತೆಲುಗು ಸಿನಿಮಾದ ಮೂಲಕ ಹೀರೋಯಿನ್ ಆಗಿ ಬೇಬಿ ಶಾಮಿಲಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ನೀಡಲಿಲ್ಲ. ಈ ಸಿನಿಮಾಗಾಗಿ ಫಿಲ್ಮ್ಫೇರ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು ಬೇಬಿ ಶಾಮಿಲಿ. ಇದಾದ ಬಳಿಕ ಹೇಳಿಕೊಳ್ಳುವಂತಹ ಅವಕಾಶಗಳು ಇವರಿಗೆ ಬರಲಿಲ್ಲ. ಎನ್ನುತ್ತಾರೆ ಆನಂದ್ ಅವರು. 

