ಊರ್ವಶಿ ಮೈಮಾಟ ನೋಡಿ ಕೈ ಎತ್ತಿದ ಬಾಲಯ್ಯ, ನೆಟ್ಟಿಗರಿಂದ ಆ ಕ್ರೋಶ

 
Bj
ನಮ್ಮ ಚಿತ್ರರಂಗದಲ್ಲಿ ವಿವಾದಕ್ಕೇನು ಬರವಿಲ್ಲ ಬಿಡಿ.ನಟ ಬಾಲಕೃಷ್ಣ, ಊರ್ವಶಿ ರೌಟೇಲಾ ಜೊತೆ ಆಡಿದ ಡ್ಯಾನ್ಸ್ ವಿವಾದಕ್ಕೆ ಕಾರಣವಾಗಿದೆ. 'ಡಾಕು ಮಹಾರಾಜ' ಚಿತ್ರದ ಪಾರ್ಟಿಯಲ್ಲಿ ಇಬ್ಬರೂ ಆಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಬಾಲಕೃಷ್ಣ ಅವರ ನಡೆಗೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಪ್ರಸಿದ್ಧ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿವಾದಗಳಿಗೆ ಹೆಸರುವಾಸಿ. ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಟ್ರೋಲ್ ಆಗುವುದು ಸಾಮಾನ್ಯವಾಗಿದೆ.ಅರವತ್ತು ವರ್ಷ ದಾಟಿದ ನಟ ಬಾಲಕೃಷ್ಣ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಡೆದುಕೊಳ್ಳುವ ರೀತಿಯಿಂದಾಗಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಅದೇ ರೀತಿ ಮತ್ತೊಮ್ಮೆ ಒಂದು ಘಟನೆ ಮಾಡಿದ್ದಾರೆ ಬಾಲಕೃಷ್ಣ. <a href=https://youtube.com/embed/a-JUh8tRnqs?autoplay=1&mute=1><img src=https://img.youtube.com/vi/a-JUh8tRnqs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬಾಲಕೃಷ್ಣ ನಟನೆಯ ಡಾಕು ಮಹಾರಾಜ ಚಿತ್ರ ಅವರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದಲ್ಲಿ ಊರ್ವಶಿ ರೌಟೇಲಾ ಜೊತೆ ಬಾಲಕೃಷ್ಣ ಆಡಿರುವ ಡಬಿಡಿ, ಡಿಬಿಡಿ ಹಾಡು ಹಿಟ್ ಆಗಿದೆ. ಆ ಹಾಡಿನಲ್ಲಿ ಬಾಲಕೃಷ್ಣ ಅವರ ನೃತ್ಯವನ್ನು ಟ್ರೋಲ್ ಮಾಡಲಾಗುತ್ತಿದೆ.ಇತ್ತೀಚೆಗೆ ಚಿತ್ರತಂಡದ ಹಲವರು ಭಾಗವಹಿಸಿದ್ದ ಪಾರ್ಟಿ ಒಂದು ನಡೆದಿತ್ತು. 
ಅದರಲ್ಲಿ ಬಾಲಕೃಷ್ಣ, ಊರ್ವಶಿ ರೌಟೇಲಾ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಅವರಿಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.ಪಾರ್ಟಿಯಲ್ಲಿ ಬಾಲಕೃಷ್ಣ, ಊರ್ವಶಿ ರೌಟೇಲಾ ಅವರ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆಗೆ ಗುರಿಯಾಗಿದೆ. ಬಾಲಕೃಷ್ಣ ನಟಿ ಊರ್ವಶಿ ಜೊತೆ ಅತಿರೇಕವಾಗಿ ವರ್ತಿಸಿದ್ದಾರೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.