ಭಾವಿ ಪತ್ನಿಗೆ ಬಾಳೆಹಣ್ಣಿನ special ಪದಾರ್ಥ ಮಾಡಿ ತಿನ್ನಿಸಿದ bhat&bhat ಯೂಟ್ಯೂಬರ್
Sep 26, 2024, 13:22 IST
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಭಟ್ ಎನ್ ಭಟ್ ಯುಟ್ಯೂಬ್ ಖ್ಯಾತಿಯ ಸುದರ್ಶನ್ ಭಟ್, ಫ್ರೀ ವೆಡ್ಡಿಂಗ್ ವಿಡಿಯೋ ವೈರಲ್ ಆಗಿದೆ. ತಮ್ಮ ಫೋಟೋಶೂಟ್ ಗೆ ಅಡುಗೆ ಘಮ ನೀಡಿರುವ ಭಟ್ರು, ತಮ್ಮದೇ ಸ್ಟೈಲ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಭಟ್ ಎನ್ ಭಟ್ ಯುಟ್ಯೂಬ್ ಚಾನೆಲ್ ಖ್ಯಾತಿಯ ಸುದರ್ಶನ್ ಭಟ್ ಎಂಗೇಜ್ ಆಗಿದ್ದಾರೆ ಎನ್ನುವ ಸುದ್ದಿ ನಿಮಗೆಲ್ಲ ಈಗಾಗ್ಲೇ ಗೊತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದರ್ಶನ್ ಭಟ್ ಮತ್ತು ಕೃತಿ ನಿಶ್ಚಿತಾರ್ಥದ ಫೊಟೋಗಳು ವೈರಲ್ ಆಗಿದ್ವು. ಈಗ ಸುದರ್ಶನ್ ಭಟ್ ಹಾಗೂ ಕೃತಿ, ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ.
<a href=https://youtube.com/embed/WKuKHlUc38E?autoplay=1&mute=1><img src=https://img.youtube.com/vi/WKuKHlUc38E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ಸ್ಟಾಗ್ರಾಮ್ ನಲ್ಲಿ ಸುಂದರ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಸುದರ್ಶನ್ ಹಾಗೂ ಕೃತಿ, ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಭಿನ್ನವಾಗಿದ್ದು, ಅವರ ಕ್ರಿಯೇಟಿವಿಟಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ ಜನರು. ನಿಮಗೆಲ್ಲ ತಿಳಿದಿರುವಂತೆ ನಮ್ ಭಟ್ರು ಅಡುಗೆ ಮಾಡೋದ್ರಲ್ಲಿ ನಂಬರ್ ಒನ್. ತೋಟಕ್ಕೆ ಹೋಗಿ ತರಕಾರಿ ತಂದು, ಒಲೆಗೆ ಬೆಂಕಿ ಹಚ್ಚಿ, ಒಳಕಲ್ಲಿನಲ್ಲಿ ರುಬ್ಬಿ, ಹಳೆ ಸಂಪ್ರದಾಯದಂತೆ ಅವರು ಮಾಡುವ ಅಡುಗೆ ಎಲ್ಲರಿಗೂ ಇಷ್ಟ.
ಈಗ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಗೂ ಅಡುಗೆ ಘಮ ನೀಡಿದ್ದಾರೆ ಸುದರ್ಶನ್ ಹಾಗೂ ಕೃತಿ. Thirdeyevisionstudio ಇನ್ಸ್ಟಾಗ್ರಾಮ್ ನಲ್ಲಿ ಇವರಿಬ್ಬರ ಸುಂದರ ಫೋಟೋ ಶೂಟ್ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಮೊದಲು ಜೇಡರ ಬಲೆಯಿಂದ ಶುರುವಾಗುವ ವಿಡಿಯೋದಲ್ಲಿ ಸುದರ್ಶನ್ ಭಟ್ ಹಿಂದೆ, ಸಿಂಪಲ್ ಆಗಿರೋ ಕಾಟನ್ ಸೀರೆಯುಟ್ಟು ಬರುವ ಕೃತಿ ಎಲ್ಲರ ಗಮನ ಸೆಳೆದಿದ್ದಾರೆ. ಬಾಳೆ ಹೂವಿನ ರುಚಿ ನೋಡುವ ಕೃತಿಗೆ ತೆಂಗಿನಕಾಯಿ ನೀರು ಕುಡಿಸುವ ಸುದರ್ಶನ್, ಬಾಳೆ ಮೂತಿ ಚಟ್ನಿ ಮಾಡಿದ್ರೆ, ಕೃತಿ ಕುಚ್ಚಲಕ್ಕಿ ಗಂಜಿ ಮಾಡ್ತಾರೆ. ಕಟ್ಟೆ ಮೇಲೆ ಕುಳಿತು, ಸುಟ್ಟ ಹಲಸಿನ ಹಪ್ಪಳದ ಜೊತೆ ಊಟದ ಸವಿ ಸವಿಯುವ ಇವರ ವಿಡಿಯೋವನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.