ಕಾರ್ಕಳ ರೇ ಪ್‌ಕೇಸ್ ಗೆ ದೊಡ್ಡ ಟ್ವಿಸ್ಟ್; ಇಡೀ ಕರುನಾಡಿಗೆ ಬ ರಸಿಡಿಲು

 
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವ ಕುರಿತು ವರದಿಯಾಗಿದ್ದು, ಕೌಡೂರು ರಂಗನಪಲ್ಕೆ ಸಮೀಪ ಆಗಸ್ಟ್ 23ರಂದು ಈ ಘಟನೆ ನಡೆದಿದೆ. ಇದು ಸಾಮೂಹಿಕ ಅತ್ಯಾಚಾರ ಎಂದು ಆರೋಪಿಸಿರುವ ಹಿಂದೂಪರ ಸಂಘಟನೆಗಳು ಇನ್ನಷ್ಟು ಆರೋಪಿಗಳು ಇದರ ಹಿಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಅಲ್ತಾಫ್ ಎಂಬುವವನಿಗೆ ಮೂರು ತಿಂಗಳ ಹಿಂದೆ ಸಂತ್ರಸ್ತ ಯುವತಿ ಪರಿಚಯವಾಗಿತ್ತು. ಆಗಸ್ಟ್ 23ರಂದು ಮಧ್ಯಾಹ್ನ 12 ಗಂಟೆಗೆ ಅಲ್ತಾಫ್ ಆಕೆಯನ್ನು ಕಾರಿನಲ್ಲಿ ಅಯ್ಯಪ್ಪನಗರದಿಂದ ಕರೆದುಕೊಂಡು ಹೋಗಿದ್ದಾನೆ. <a href=https://youtube.com/embed/Sm-mhlTyRvI?autoplay=1&mute=1><img src=https://img.youtube.com/vi/Sm-mhlTyRvI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿನ ಕಾಡಿಗೆ ಇಬ್ಬರೂ ಹೋಗಿದ್ದಾರೆ. ಅಲ್ಲಿ ಇತರ ಇಬ್ಬರು ಬಂದು ಸೇರಿಕೊಂಡಿದ್ದಾರೆ. ಕಾರಿನಲ್ಲಿ ಬಿಯರ್ ಬಾಟಲಿ ತಂದುಕೊಟ್ಟಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆ ಅಲ್ತಾಫ್ ಬಿಯರ್‌ಗೆ ಮಾದಕವಸ್ತು ಬೆರೆಸಿದ್ದಾನೆ. ಬಲವಂತವಾಗಿ ಕುಡಿಸಿ, ಅತ್ಯಾಚಾರ ಎಸಗಿದ್ದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಸಂತ್ರಸ್ತೆಯ ದೂರಿನ ಪ್ರಕಾರ ಮದ್ಯದಲ್ಲಿ ಮತ್ತು ಬರಿಸುವ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಲಾಗಿದೆ. ಆಕೆ ಪ್ರಜ್ಞೆ ತಪ್ಪಿದ ನಂತರ ಅಲ್ತಾಫ್ ಅತ್ಯಾಚಾರವೆಸಗಿದ್ದಾನೆ. ಲೈಂಗಿಕ ಅತ್ಯಾಚಾರ ಅವನೊಬ್ಬನೇ ನಡೆಸಿದನೋ ಅಥವಾ ಮದ್ಯ ತಂದ ಇಬ್ಬರು ಸ್ನೇಹಿತರು ಸಹ ಭಾಗಿಯಾಗಿದ್ದರೋ ಅನ್ನೋದು ತನಿಖೆಯ ನಂತರವೇ ಗೊತ್ತಾಗಬೇಕು. ಸಂತ್ರಸ್ತೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.