ಬಿಗ್ ಬಾಸ್ ಒಳ ಕ.ರ್ಮಕಾಂಡ ಬಿಚ್ಚಿಟ್ಟ ಸ್ನೇಹಿತ್, ಇಷ್ಟೆಲ್ಲ ಫೇಕ್ ಇದೆ ಗೊ.ತ್ತಾ
ಬಿಗ್ ಬಾಸ್ ಕನ್ನಡ ಸೀಸನ್ 10ನಿಂದ ಸ್ನೇಹಿತ್ ಗೌಡ ಅವರು ಕಳೆದ ವಾರ ಔಟ್ ಆಗಿದ್ದಾರೆ. ಅವರು ಮನೆಯಿಂದ ಹೋದ ಬಗ್ಗೆ ನಮ್ರತಾ ಗೌಡ, ವಿನಯ್ ಗೌಡಗೆ ಬೇಸರ ಇದೆ. ಈಗ ಸ್ನೇಹಿತ್ ಗೌಡ ಅವರು ಹೊರ ಪ್ರಪಂಚಕ್ಕೆ ಬಂದ ಬಳಿಕ ಮತ್ತೆ ಡಯಟ್ ಶುರು ಮಾಡಿದ್ದಾರೆ. ಜಿಮ್ಗೆ ಮರಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡುತ್ತಿದ್ದಾರೆ.
ಇನ್ನು ಬಿಗ್ಬಾಸ್ ಮನೆಯೊಳಗೇ ಮೊದಲು ಕಾಲಿಟ್ಟಿದ್ದೆ ನಾನು ನಮೃತಾ. ನಮಗೆ ಆ ಸ್ಟೇಜ್ ಮೇಲೆ ಹೇಳಿದ್ದೇನೆಂದರೆ ನಿಮ್ಮ 1ಸ್ಟ್ ಟಾಸ್ಕ್ ಇಲ್ಲಿಂದಲೇ ಶುರು ಎಂದು ಹೇಳಿ ಅಲ್ಲಿದ್ದ ಜನರ ಬಳಿ ವೋಟ್ ಮಾಡಿಸಿದರು. ನನಗೆ 81%ಬಂತು ಹಾಗಾಗಿ ನಾನು ಬಿಗ್ಬಾಸ್ ಮನೆಗೆ ಹೋಗಲು ಸಾಧ್ಯವಾಯ್ತು ಆದರೆ ಆ ವೋಟಿಂಗ್ ನೋಡಿದರೆ ಫೇಕ್ ಅನ್ನಿಸುತ್ತದೆ ಎಂದಿದ್ದಾರೆ.
ಇನ್ನು ಸ್ನೇಹಿತ್ ಗೌಡ ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡಿವೆ. ಅವರಿಗೆ ನಿಕ್ನೇಮ್ ಕೂಡ ಇಡಲಾಗಿದೆ. ಈ ಎಲ್ಲಾ ವಿಚಾರಗಳು ಹೊರ ಬಂದ ಬಳಿಕ ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಿಲ್ಲ. ಟ್ರೋಲ್ ಬಗ್ಗೆ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದಾಗ ಆರಂಭದಲ್ಲಿ ಟ್ರೋಲ್ ನೋಡಿ ಭಯ ಆಯ್ತು. ಈಗ ಆ ಭಯ ಇಲ್ಲ ಎಂದಿದ್ದಾರೆ ಅವರು.
ಸ್ನೇಹಿತ್ ಬೇರೆಯವರಿಗೋಸ್ಕರ ಆಟ ಆಡಿದ್ದಾರೆ. ಅವರು ಪ್ರಯತ್ನ ಹಾಕಿದ್ದರೆ ಇನ್ನೂ ಕೆಲವು ದಿನ ಇರಬಹುದಿತ್ತು ಎನ್ನುವ ಕಮೆಂಟ್ಗಳು ಬಂದಿವೆ. ಆದರೆ, ಇದನ್ನು ಸ್ನೇಹಿತ್ ಗೌಡ ಒಪ್ಪಿಲ್ಲ. ಬಿಗ್ ಬಾಸ್ನ ಮಿಸ್ ಮಾಡಿಕೊಳ್ಳುತ್ತಿಲ್ಲ ಆದರೆ ವಿನಯ್ ಸಂಗೀತಾ ಇಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.