ಬಿಗ್ ಬಾಸ್ ಧರ್ಮ ಕೀರ್ತಿರಾಜ್ ತಾಯಿಗೆ ಒಂದು ಕೈ‌ಇಲ್ಲ, ಮನೆ‌ ಪರಿಸ್ಥಿತಿ ಯಾರಿಗೂ ಬೇಡ

 
ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭ ಆಗಿ 8ನೆಯ ವಾರಕ್ಕೆ ಕಾಲಿಟ್ಟಿದೆ. ಇಲ್ಲಿವರೆಗೂ ಸೈಲೆಂಟ್ ಆಗಿದ್ದ ನವಗ್ರಹ ನಟ ಧರ್ಮ ಕೀರ್ತಿರಾಜ್ ಆಕ್ಟಿವ್ ಆಗಿದ್ದಾರೆ. ಟಾಸ್ಕ್‌ನಲ್ಲಿ ಚುರುಕಾಗುತ್ತಿದ್ದಾರೆ. ಆಗಾಗ ಅಗ್ರೇಸಿವ್ ಆಗುತ್ತಿದ್ದಾರೆ. ಮನೆ ಮಂದಿಯ ಮಧ್ಯೆ ತಾನೂ ಇದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅದೆಷ್ಟೋ ಬಾರಿ ಧರ್ಮ ಕೀರ್ತಿರಾಜ್ ಅವರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ನಡೆದಿತ್ತು. ಆದರೆ, ಸಾಧ್ಯವಾಗಿರಲಿಲ್ಲ.
ಈಗ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರದಿಂದ ಧರ್ಮ ಕೀರ್ತಿರಾಜ್ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ವೀಕ್ಷಕರನ್ನು ನಿಧಾನವಾಗಿ ತನ್ನ ಬಳಿಕ ಸೆಳೆಯುವುದಕ್ಕೆ ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಕಂಡಂತೆ ಧರ್ಮ ಬಿಗ್ ಬಾಸ್ ಮನೆಯೊಳಗೂ ಲವರ್ ಬಾಯ್ ಆಗಿಯೇ ಉಳಿದು ಬಿಡುತ್ತಾರೋ ಏನೋ ಅನ್ನುವ ಅನುಮಾನಗಳಿಗೆ ತೆರೆ ಎಳೆಯುತ್ತಿದ್ದಾರೆ. <a href=https://youtube.com/embed/F-OQLDhQceg?autoplay=1&mute=1><img src=https://img.youtube.com/vi/F-OQLDhQceg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇಲ್ಲಿವರೆಗೂ ಧರ್ಮ ಕೀರ್ತಿರಾಜ್ ಹೆಸರು ನಟಿ ಐಶ್ವರ್ಯಾ ಸಿಂಧೋಗಿ ಹಾಗೂ ಅನುಷಾ ಅವರ ಜೊತೆನೇ ತಳುಕು ಹಾಕಿಕೊಳ್ಳುತ್ತಿತ್ತು. ಆದ್ರೀಗ ಧರ್ಮ ಸದ್ದು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಈ ಮಧ್ಯೆ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ. ಅಮ್ಮನ ಬಲಗೈ ಇಲ್ಲ ಅನ್ನುವ ಸತ್ಯವನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಇದು ವೀಕ್ಷಕರು ಕೂಡ ಭಾವುಕರಾಗುವಂತೆ ಮಾಡಿದೆ.
ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ ದಿನದಿಂದ ಧರ್ಮ ಕೀರ್ತಿರಾಜ್ ತನ್ನ ವೈಯಕ್ತಿಕ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಜೊತೆಗೆ ತನ್ನ ಕುಟುಂಬದ ಬಗ್ಗೆನೂ ತುಟಿ ಬಿಚ್ಚಿರಲಿಲ್ಲ. ಆದರೆ, ಇದೇ ಮೊದಲ ಬಾರಿ ಧರ್ಮ ಕೀರ್ತಿರಾಜ್ ತನ್ನ ಅಮ್ಮನ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಬಲಗೈ ಇಲ್ಲ ಅನ್ನೋದನ್ನು ಬಿಗ್ ಬಾಸ್ ಶೋನಲ್ಲಿ ರಿವೀಲ್ ಮಾಡಿದ್ದಾರೆ.
ಹೌದು, ಧರ್ಮ ಕೀರ್ತಿ ರಾಜ್ ಅವರ ಅಮ್ಮನಿಗೆ ಬಲಗೈ ಇಲ್ಲ. ಕಾರು ಅಪಘಾತದಲ್ಲಿ ಧರ್ಮ ಅವರ ತಾಯಿ ಬಲಗೈ ಕಳೆದುಕೊಂಡಿರುವ ಘಟನೆಯನ್ನು ಇದೇ ಮೊದಲ ಬಿಚ್ಚಿಟ್ಟಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೆ ಆಗಿನ್ನೂ ಐದಾರು ವರ್ಷ. ಆ ವೇಳೆ ತಂದೆ ಕೀರ್ತಿರಾಜ್ ವಿವಾಹ ವಾರ್ಷಿಕೋತ್ಸವಕ್ಕಾಗಿ ತಿರುಪತಿಗೆ ಹೋಗಿದ್ದರು. 
ಅಲ್ಲಿಂದ ವಾಪಾಸ್ ಬರುವಾಗ ಅವರ ತಾಯಿಯ ಕೈ ಕಾರಿನಿಂದ ಹೊರಗೆ ಇತ್ತು. ಈ ವೇಳೆ ಬಸ್ ಬಂದು ಗುದ್ದಿದ್ದರಿಂದ ಕೈ ಕಟ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.