ಬಿಗ್ ಬಾಸ್ ಆಟ ಶುರು, ಕಿಚ್ಚನ ಬದಲು ಉಪ್ಪಿಗೆ ಮಣೆ ಹಾಕಿದ ಕಲಸ್೯ ಕನ್ನಡ?
Sep 18, 2024, 19:01 IST
ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ ''ಬಿಗ್ ಬಾಸ್'' ತನ್ನ 10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೊನೆ ಸೀಸನ್ನ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಈ 10 ಸೀಸನ್ಗಳಲ್ಲಿಯೂ ಸುದೀಪ್ ಅವರೇ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ಸೀಸನ್ನಲ್ಲಿ ನಿರೂಪಕರು ಬದಲಾಗ್ತಾರೆ.ಎಲ್ಲ ಬದಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು.
ಕೆಲ ದಿನಗಳ ಹಿಂದೆ ಕನ್ನಡ ಬಿಗ್ ಬಾಸ್ ಆ್ಯಂಕರ್ ಬದಲಾಗಲಿದ್ದಾರೆ ಎಂಬ ವದಂತಿ ಇತ್ತು. ಕಿಚ್ಚ ಸುದೀಪ್ ಜಾಗಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ, ಪ್ರಶ್ನೆಗಳು ಅಭಿಮಾನಿಗಳಲ್ಲಿತ್ತು. ಸುದೀಪ್ ಜಾಗಕ್ಕೆ ಬೇರೆ ಯಾರನ್ನೂ ಸ್ವೀಕರಿಸಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಅಭಿಮಾನಿಗಳಿದ್ದರು. ಫೈನಲಿ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
<a href=https://youtube.com/embed/9xhsVxd0U6Y?autoplay=1&mute=1><img src=https://img.youtube.com/vi/9xhsVxd0U6Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆ ಲೀಸ್ಟ್ ಅಲ್ಲಿ ಮೊದಲ ಹೆಸರು ರಿಷಭ್ ಶೆಟ್ಟಿಯದಿದ್ದರೆ ನಂತರದಲ್ಲಿ ರಮೇಶ್ ಅರವಿಂದ್, ಡಾಲಿ ಧನಂಜಯ್, ಹಾಗೂ ಉಪೇಂದ್ರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.ಕಲರ್ಸ್ ಕನ್ನಡ ಆ್ಯಂಕರ್ ಇಂಟ್ರುಡಕ್ಷನ್ ಪ್ರೋಮೋ ಅನಾವರಣಗೊಳಿಸಿದೆ. ಪೋಸ್ಟ್ಗೆ ಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್ ಕೂಡಾ ಹೇಳೋದು ಹೌದು ಸ್ವಾಮಿ'. ಆದರೆ ಇವರ ವಿಚಾರದಲ್ಲಿ ಬದಲಾವಣೆ ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್ ಕನ್ನಡ ಸೀಸನ್ 11 | ಸೆಪ್ಟೆಂಬರ್ 29ರಿಂದ ಪ್ರಸಾರ ಎಂದು ಬರೆದುಕೊಂಡಿದೆ. ಈ ವಿಡಿಯೋ ಪಂಚಿಂಗ್ ಡೈಲಾಗ್ಸ್ ಒಳಗೊಂಡಿದ್ದು, ಬಹಳ ಕುತೂಹಲಕಾರಿಯಾಗಿ ಮೂಡಿ ಬಂದಿದೆ.
ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗ್ತಾರೆ. ಆದರೆ ಎಲ್ಲಾನೂ ನಿಯಂತ್ರಿಸೋ ಸೂತ್ರಧಾರ ಎಂದು ಹೇಳುತ್ತಿದ್ದಂತೆ ಕಿಚ್ಚ ಸುದೀಪ್ ಅದ್ಭುತವಾಗಿ ಎಂಟ್ರಿ ಕೊಟ್ಟಿದ್ದಾರೆ. ''10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ ಎಂಬ ಕಿಚ್ಚನ ಡೈಲಾಗ್ಸ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶ ಕಂಡಿವೆ. ಇದೇ ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಪ್ರಸಾರ ಕಾಣಲಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.