ಕನ್ನಡದ ಗೊಂಬೆ ರಾಗಿಣಿಯ ತುಪ್ಪ ಸವಿದ ಬಿಗ್ ಬಾಸ್ ಕಿಶನ್; ಫಿದಾ ಆದ ರವಿಚಂದ್ರನ್
ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ಅಲ್ಲಿ ಹೊಳೆಯುತ್ತಿದ್ದಾರೆ. ಮೋಹಕ ನೋಟ, ಮಾದಕ ಹೊಳಿಪಿನೊಂದಿಗೆ ಕಣ್ಮನ ಸೆಳೆಯುತ್ತಿದ್ದಾರೆ. ತುಪ್ಪದ ಬೆಡಗಿ ಎಂದರೆ ತಟ್ಟನೆ ನೆನಪಾಗುವುದು ರಾಗಿಣಿ ದ್ವಿವೇದಿ. ಇವರು ಮೂಲತಃ ಬೇರೆ ರಾಜ್ಯದವರಾಗಿದ್ದರೂ ಕೂಡ ವೀರ ಮದಕರಿ ಸಿನೆಮಾ ನಂತರದಲ್ಲಿ ಕನ್ನಡ ಕಲಿತು ಕನ್ನಡ ಚಿತ್ರರಂಗದಲ್ಲಿಯೇ ಅಭಿನಯಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ವೀರ ಮದಕರಿ ಸಿನಿಮಾ ಮೂಲಕ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ, ಕೆಂಪೇಗೌಡ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಕಿಚ್ಚ ಸುದೀಪ್ ಅವರ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ಅವರು, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.ಕನ್ನಡ ನಿರ್ದೇಶಕ 'ನಂದ ಕಿಶೋರ್' ಸಾರಥ್ಯದ 'ವೃಷಭ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರಾಗಿಣಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ.
https://youtube.com/shorts/BuTW4wdd0uc?si=9KF5FhlYNQAFNJgn
ಸಾಮಾನ್ಯರಂತೆ ರೋಡ್ ಸೈಡ್ ಅಂಗಡಿಯಲ್ಲಿ ಬಜ್ಜಿ ತಿಂದು ಮಂಡಕ್ಕಿ ಒಗ್ಗರಣೆ ತಿನ್ನುತ್ತ ಮಾತಾನಾಡಿದ ರಾಗಿಣಿ ಇದೀಗ ಅವರು ಪರಭಾಷೆಯಲ್ಲೂ ನಟಿಸುತ್ತ ಮಿಂಚುತ್ತಿದ್ದಾರೆ. ಈಗಾಗಲೇ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅವರು ಬಾಲಿವುಡ್‌ನಲ್ಲೂ ಮಿಂಚುವುದಕ್ಕೆ ರೆಡಿ ಆಗಿದ್ದಾರೆ. ಈ ಹಿಂದೆ ರಾ ರಾಜ್‌ಕುಮಾರ್ ಸಿನಿಮಾದ ಒಂದು ಹಾಡಿಗೆ ರಾಗಿಣಿ ಹೆಜ್ಜೆ ಹಾಕಿದ್ದರು. ಇದೀಗ ಪೂರ್ಣಪ್ರಮಾಣದಲ್ಲಿ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಗ್ಲಾಮರಸ್ ಆಗಿ ಆ ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಗಿಣಿ, 'ಇದು ಬಹಳ ಒಳ್ಳೆಯ ತಂಡ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ. ಆಯುಷ್ ಶರ್ಮಾ ಎಂಬುವವರು ಇದರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಉತ್ತಮವಾಗಿ ಮೂಡಿಬರುತ್ತಿದೆ. ನಾನು ಈ ಹಿಂದಿ ಸಿನಿಮಾ ಮಾಡುತ್ತಿರುವುದಕ್ಕೆ ನಮ್ಮ ಅಮ್ಮ ಖುಷಿಯಾಗಿದ್ದಾರೆ. ಅಪ್ಪ- ಅಮ್ಮ ಇಲ್ಲ ಅಂದಿದ್ದರೆ ನಾವು ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಎಂದು ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.