ಧಮ೯ ಸ್ಥಳದಲ್ಲಿ ಯೂಟ್ಯೂಬಸ್೯ ಮೇಲೆ ಹಲ್ಲೆ, ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಬಿಗ್ ಬಾಸ್ ರಜತ್

 

      ಧರ್ಮಸ್ಥಳದ ಪಾಂಗಳ ಪ್ರದೇಶದಲ್ಲಿ ಮೂವರು ಯೂಟ್ಯೂಬರ್ಸ್​ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುಟ್ಯೂಬರ್ಸ್​ ಮೇಲೆ ಹಲ್ಲೆ ಆಗಿದೆ. ಇದೇ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 

     ಸ್ಥಳೀಯರು ಹಲ್ಲೆ ಮಾಡಿ ಅವರ ಕ್ಯಾಮೆರಾಗಳನ್ನು ಹೊಡೆದು ಹಾಕಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಬಿಗ್​ ಬಾಸ್​ ಖ್ಯಾತಿ ರಜತ್ ಕಿಶನ್​ ಇದ್ದರು. ಅಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ.  <a style="border: 0px; overflow: hidden" href=https://youtube.com/embed/kbnC8TnSW2A?autoplay=1&mute=1><img src=https://img.youtube.com/vi/kbnC8TnSW2A/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
     ಇನ್ನು ಯೂಟ್ಯೂಬರ್ಸ್​ ಮೇಲಿನ ಹಲ್ಲೆ ಖಂಡಿಸಿದ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಹಲ್ಲೆಗೊಳಗಾದ ಯೂಟ್ಯೂಬರ್​ಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.