ಕೊನೆಗೂ ಬಿಜೆಪಿ ರಾಜ್ಯಾದ್ಯಕ್ಷ ಬದಲಾವಣೆ ಚರ್ಚೆ, ಕರ್ನಾಟಕದ ಹಿಂದೂ ಹುಲಿಗೆ ರಾಜ್ಯಾದ್ಯಕ್ಷ ಪಟ್ಟ

 

ಕರ್ನಾಟಕ: ಸ್ನೇಹಿತರೆ ನಮಸ್ಕಾರ, ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಅಬ್ಬರಕ್ಕೆ ಬಿಜೆಪಿ ಪಕ್ಷಕ್ಕೆ ಹೀನಾಯ ಸೋಲು ಕಂಡ ವಿಚಾರ ಇಡೀ ದೇಶಕ್ಕೆ ಸುದ್ದಿಯಾಗಿತ್ತು. ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಯಾವ ಮಟ್ಟಿಗೆ ಇದೆ ಎಂಬುವುದು ಈ ಬಾರಿಯ ಚುನಾವಣೆಯಲ್ಲಿ ಕಂಡುಬಂದಿತ್ತು. 

ಹೌದು, ಕರ್ನಾಟಕದಲ್ಲಿ ಬಿಜೆಪಿ ಸೋತ ಬಳಿಕ ಸಾಕಷ್ಟು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬಿಜೆಪಿ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ. ಯಾಕೆಂದರೆ ಬಿಜೆಪಿಯ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ರವರ ಮಾತಿನಿಂದ. ಹೌದು, ಸದಾ ಅನ್ಯಾಧರ್ಮಿಯರನ್ನು ದೂರಿಕೊಂಡು ಇರುತ್ತಿದ್ದ ನಳೀನ್ ಕುಮಾರ್ ಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ‌ ಇರಲಿಲ್ಲ. 

ಜೊತೆಗೆ ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ನಡೆದ ಹಲ್ಲೆಯ ವಿಚಾರದಲ್ಲೂ ರಾಜ್ಯಾದ್ಯಕ್ಷರ ಹೆಸರನ್ನು ಹಿಂದೂ ಕಾರ್ಯಕರ್ತರು ಹೇಳುತ್ತಿದ್ದರು. ಇನ್ನು ಈ ಎಲ್ಲಾ ವಿಚಾರದ ನಡುವೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ವಿರುದ್ಧ ಹಿಂದೂ ಹೃದಯ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ್ಲ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರು. ಇದೆಲ್ಲಾ ಬಿಜೆಪಿ ಪಕ್ಷಕ್ಕೆ ಹೀನಾಯ ‌ಸೋಲಿನ ರುಚಿ ಕಂಡಿತ್ತು. 

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ ಕೂಡ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ರಾಜೀನಾಮೆ ನೀಡದೆ ಮೌನವಾಗಿದ್ದು ಕೂಡ ಬಿಜೆಪಿ ಕಾರ್ಯಕರ್ತರಿಗೆ ಬೇಸರದ ವಿಚಾರವಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಮತ್ತೆ ರಾಜ್ಯಾದ್ಯಕ್ಷ ಬದಲಾವಣೆ ಚರ್ಚೆ ನಡೆಯುತ್ತಿದೆ. ನಳೀನ್ ಕುಮಾರ್ ಕಟೀಲು ಬದಲು ಇದೀಗ ಸಿ.ಟಿ ರವಿ ಅವರನ್ನು ಬಿಜೆಪಿಯ ರಾಜ್ಯಾದ್ಯಕ್ಷರನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂಬ ವಿಚಾರ ವೈರಲ್ ಆಗುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.