ಕನ್ನಡ ಚಿತ್ರರಂಗದಲ್ಲಿ ಅವಕಾಶ ಇಲ್ಲದ ಕಾರಣ ಬಾಲಿವುಡ್ ಸಲ್ಮಾನ್ ಖಾನ್ ಜೊತೆ ಹೊಸ ಹೆಜ್ಜೆ
Aug 17, 2024, 11:36 IST
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿ ಈಗ ಬಾಲಿವುಡ್ನಲ್ಲಿಯೂ ಬೇಡಿಕೆಯ ಟಾಪ್ ನಟಿಯಾಗಿ ಬೆಳೆದಿದ್ದಾರೆ. ಈಗ ಅದೇ ಹಾದಿಯಲ್ಲಿ ಹೊರಟಿದ್ದಾರೆ ಮೊತ್ತೊಬ್ಬ ಕನ್ನಡತಿ. ಈ ಚೆಲುವೆ ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಲೇ ಬಾಲಿವುಡ್ನಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಆ ನಟಿ ಇನ್ಯಾರೂ ಅಲ್ಲ, ಕಿಸ್ ಬ್ಯೂಟಿ ನಟಿ ಶ್ರೀಲೀಲಾ. ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ಸಿನಿಮಾ ಮಾಡಿ ಆ ನಂತರ ತೆಲುಗಿನಲ್ಲ ಅವಕಾಶಗಳನ್ನು ಗಿಟ್ಟಿಸಿಕೊಂಡರು. ತೆಲುಗು ಚಿತ್ರರಂಗದಲ್ಲಿ ಸಖತ್ ಸಿನಿಮಾಗಳನ್ನು ಮಾಡಿ ಡ್ಯಾನ್ಸ್ ಮಾಡುತ್ತಾ ಕ್ರೇಜಿ ಫ್ಯಾನ್ಸ್ ಗಳಿಸಕೊಂಡು ಈಗ ಬಾಲಿವುಡ್ಗೆ ಜಂಪ್ ಮಾಡೋಕೆ ರೆಡಿಯಾಗಿದ್ದಾರೆ.
ಬಹುಭಾಷಾ ನಟಿ ಶ್ರೀಲೀಲಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕನ್ನಡ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಈ ಚೆಲುವೆ ಸದ್ಯ ಟಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿ ಟಾಪ್ನಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಶ್ರೀಲೀಲಾ ರಶ್ಮಿಕಾ ಮಂದಣ್ಣ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕನ್ನಡದಲ್ಲಿಎಪಿ ಅರ್ಜುನ್ ಅವರ ಕಿಸ್ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ನಂತರ ಭರಾಟೆಯಲ್ಲಿ ಶ್ರೀಮುರಳಿ ಜೊತೆ ನಟಿಸಿದರು. ಆ ನಂತರ ಭರಾಟೆ ಬ್ಯೂಟಿ ಅಂತಲೇ ಕರೆಸಿಕೊಂಡರು. ಆ ನಂತರ ಧನ್ವೀರ್ ಜೊತೆ ಬೈಟು ಲವ್ ಸಿನಿಮಾ ಮಾಡಿ ತೆಲುಗು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.