ಮುಗ್ಧನ ತರ ವರ್ತನೆ ಮಾಡುವ ಹನುಮಂತನ ಆಸ್ತಿ ವಿವರಣೆ ಕೊಟ್ಟ ಅಣ್ಣ ಅತ್ತಿಗೆ
Jan 17, 2025, 16:57 IST

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತ ತಲುಪಿದೆ. ಇನ್ನೇನು ಎರಡು ವಾರಗಳು ಮಾತ್ರ ಬಾಕಿ ಇದ್ದು ಮೂರನೇ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಶುರುವಾಗಿದೆ. ಈ ಬಾರಿಯ ವಿನ್ನರ್ ಯಾರು? ಯಾರಾಗಬೇಕು ಎನ್ನುವ ಅಭಿಪ್ರಾಯವನ್ನು ಜನ ಈ ಕ್ಯಾಂಪೇನ್ ಮೂಲಕ ಹಂಚಿಕೊಳ್ಳುತ್ತಿದೆ.
ಸಣ್ಣ ಪುಟ್ಟ ಹಳ್ಳಿ, ಆಟೋ ಚಾಲಕರು, ಉತ್ತರ ಕರ್ನಾಟಕ ಭಾಗದ ಜನ ಸೇರಿದಂತೆ ನಗರ ಪ್ರದೇಶದಲ್ಲೂ ಒಬ್ಬ ಸ್ಪರ್ಧಿಯ ಹೆಸರು ಆಕಾಶದೆತ್ತರಕ್ಕೆ ಕೇಳಿ ಬರುತ್ತಿದೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹನುಮಂತ ಲಮಾಣಿ, ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 15 ಕಾರ್ಯಕ್ರಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಗಾಯಕ. ಈ ಹುಡುಗನ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಮಾತು ಸರಳ, ಜೀವನ ಶೈಲಿ ಕೂಡ ತುಂಬಾನೇ ಸರಳ.
<a href=https://youtube.com/embed/hXxwi2nOLHg?autoplay=1&mute=1><img src=https://img.youtube.com/vi/hXxwi2nOLHg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಒಂದು ಶರ್ಟ್ ಹಾಗೂ ಲುಂಗಿ ಮಾತ್ರ ಇವರಿಗೆ ಬಿಗ್‌ಬಾಸ್ ಮನೆಯಲ್ಲಿರುವ ಆಸ್ತಿ. ಯಾರು ಎಷ್ಟೇ ಚಂದದ ದುಬಾರಿ ಉಡುಪುಗಳನ್ನು ಹಾಕಿಕೊಂಡು ಮಿಂಚಿದರೂ ಕೂಡ, ಹನುಮಂತ ಮಾತ್ರ ಬಿಗ್‌ಬಾಸ್ ಮನೆಗೆ ಬರುವಾಗ ಹೇಗೆ ಇದ್ದರೋ ಈಗಲೂ ಹಾಗೇ ಇದ್ದಾರೆ. ಹೀಗಾಗಿ ಬಿಗ್‌ಬಾಸ್ ವೀಕ್ಷಕರಿಗೆ ಹನುಮಂತು ಮನೆ ಮಗನಾಗಿದ್ದು ನೂರಕ್ಕೆ ನೂರು ಸತ್ಯ. ಅಣ್ಣಾ ಅತ್ತಿಗೆಯ ಪ್ರಕಾರ ಅವರ ಬಳಿ ಕೋಟಿಗಳಿವೆ ಅರ್ಥಾತ್ ಕೋಟಿ ಮನಗಳಿವೆ.
ಆದರೆ ಸರಳ ಸ್ಪರ್ಧಿ ಹನುಮಂತ ಯಾರ ಗೋಜಿಗೂ ಹೋಗದೆ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಇವರ ಆಟದ ಶೈಲಿಗೆ ಇಡೀ ಕರುನಾಡ ಜನತೆ ಮೆಚ್ಚುಗೆ ಸೂಚಿಸುತ್ತಿದೆ. ಇದಕ್ಕಾಗಿ ಹನುಮಂತನೇ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಗೆಲ್ಲಬೇಕು ಎಂದು ಜನ ಪೂಜೆ ಮಾಡುತ್ತಿದ್ದಾರೆ. ಒಬ್ಬ ತಾಯಿ ಹನುಮಂತನ ಗೆಲುವಿಗಾಗಿ ಆತನದ ಫೋಟೋ ಇರುವ ಫ್ಲೆಕ್ಸ್‌ಗೆ ಪೂಜೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅವರೇ ಬಿಗ್ಬಸ್ ಗೆದ್ದು ಹಣವನ್ನು ಪಡೆಯಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.