ಬಿಗ್ ಬಾಸ್ ಮನೆಯಲ್ಲಿ ಸಿ ಗರೇಟ್ ವ್ಯಸನ; ಸ್ಪರ್ಧಿಗಳಿಗೆ ಕಿಚ್ಚ ವಾರ್ನ್
Updated: Oct 11, 2024, 17:59 IST
ಬಿಗ್ಬಾಸ್ ಮನೆಯಲ್ಲಿ ಫೊನ್ ಇಲ್ಲ. ಸಮಾಜಿಕ ಜಾಲತಾಣಗಳಲ್ಲಿ ಏನಾಗ್ತಿದೆ ಅನ್ನೋದೆ ತಿಳಿಯದಂತೆ ಇರಬೇಕು.ಆದರೂ ಕೆಲವು ವೀಕ್ಷಕರಿಗೆ ಬಿಗ್ ಬಾಸ್ ಮನೆಯಲ್ಲಿ ಆಲ್ಕೋಹಾಲ್ ಕೊಡ್ತಾರಾ? ಏನೆಲ್ಲ ಸೌಲಭ್ಯ ಇರುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಕನ್ನಡ ಬಿಗ್ ಬಾಸ್ ಶೋನಲ್ಲಿ ಸ್ಮೋಕಿಂಗ್ ಜೋನ್ ಇರುತ್ತದೆ, ಅಂತೆಯೇ ಬೇರೆ ಭಾಷೆಯಲ್ಲಿಯೂ ಸ್ಮೋಕಿಂಗ್ ಜೋನ್ ಇರುವುದು.
ಆದರೆ ಕನ್ನಡದಲ್ಲಿ ಈ ಸೀಸನ್‌ನಲ್ಲಿ ಸ್ಮೋಕಿಂಗ್ ಜೋನ್ ಕಾಣಿಸುತ್ತಿಲ್ಲ. ತೆಲುಗು ಬಿಗ್ ಬಾಸ್ ಶೋನಲ್ಲಿ ಮಹಿಳಾ ಸ್ಪರ್ಧಿ ವಿಷ್ಣುಪ್ರಿಯಾ ಅವರು ಸ್ಮೋಕ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಹೌದು, ಇಷ್ಟುದಿನ ವಿಷ್ಣುಪ್ರಿಯಾ ಅವರು ಸರಿಯಾಗಿ ಬಟ್ಟೆ ಹಾಕಿಕೊಳ್ಳೋದಿಲ್ಲ ಎಂಬ ದೂರು ಇತ್ತು, ಇದೇ ಕಾರಣಕ್ಕೆ ಅವರನ್ನು ಸಹಸ್ಪರ್ಧಿಯೋರ್ವರು ನಾಮಿನೇಟ್ ಕೂಡ ಮಾಡಿದ್ದರು.
ಇನ್ನು ಮಂಗಳೂರು ಮೂಲದ ಪೃಥ್ವಿರಾಜ್ ಶೆಟ್ಟಿಯನ್ನು ಪ್ರೀತಿಸುತ್ತಿರೋದಾಗಿ ವಿಷ್ಣುಪ್ರಿಯಾ ಹೇಳಿದ್ದರು. ಇದು ದೊಡ್ಮನೆಯಲ್ಲಿ ಹುಟ್ಟಿದ ಪ್ರೇಮವಂತೆ. ಆದರೆ ಪೃಥ್ವಿರಾಜ್ ಈ ಪ್ರೀತಿಗೆ ಒಪ್ಪಿಗೆ ಕೊಟ್ಟಿಲ್ಲ. ಪೃಥ್ವಿರಾಜ್ ಇನ್ನೋರ್ವ ಮಹಿಳಾ ಸ್ಪರ್ಧಿ ಜೊತೆ ಆತ್ಮೀಯತೆಯಿಂದ ಇದ್ದರೆ ವಿಷ್ಣುಪ್ರಿಯಾಗೆ ಇಷ್ಟವೇ ಆಗೋದಿಲ್ಲ. ಇದೇ ಕಾರಣಕ್ಕೆ ಅವರು ಸ್ಮೋಕ್ ಮಾಡಲು ಹೋಗಿದ್ದಾರೆ. ಆ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಆಗ್ತಿದೆ.
ತೆಲುಗಿನ ಶೋವೊಂದರಲ್ಲಿ ವಿಷ್ಣುಪ್ರಿಯಾ ಅವರು ನಿರೂಪಣೆ ಮಾಡಿದ ನಂತರದಲ್ಲಿ ಖ್ಯಾತಿ ಪಡೆದರು. ಅಷ್ಟೇ ಅಲ್ಲದೆ ಮಲಯಾಳಂ ಸಿನಿಮಾವೊಂದರಲ್ಲಿಯೂ ಅವರು ನಟಿಸಿದ್ದಾರೆ.
ವಿಷ್ಣುಪ್ರಿಯಾಗೆ ಈಗ 29 ವರ್ಷ ವಯಸ್ಸು ಎನ್ನಲಾಗಿದೆ.ಕನ್ನಡ ‘ಬಿಗ್ ಬಾಸ್’ ಶೋನಲ್ಲೂ ಕೂಡ ಕೆಲ ಸ್ಪರ್ಧಿಗಳು ಈ ಹಿಂದಿನ ಸೀಸನ್‌ನಲ್ಲಿ ಸಿಗರೇಟ್ ಕೊಡಿ, ತಲೆ ಕೆಟ್ಟೋಗ್ತಿದೆ ಅಂತ ಅಂಗಲಾಚಿದ್ದರು. ಸ್ಮೋಕಿಂಗ್ ಜೋನ್‌ನಲ್ಲಿ ಒಬ್ಬರೇ ಸ್ಮೋಕ್ ಮಾಡಬೇಕು, ಇಬ್ಬರು-ಮೂವರು ಒಟ್ಟಿಗೆ ಸ್ಮೋಕ್ ಮಾಡೋ ಹಾಗಿಲ್ಲ ಅಂತ ಕೂಡ ನಿಯಮ ವಿಧಿಸಲಾಗಿತ್ತು. ಈ ನಿಯಮ ಮುರಿದವರಿಗೆ ಶಿಕ್ಷೆಯೂ ಸಿಕ್ಕಿತ್ತು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.