ಹಿಂ ದೂ ಹೋರಾಟಗಾತಿ೯ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ? ಉಳಿದ ಸ್ಫಧಿ೯ಗಳಿಗೆ ನಡುಕ ಶುರು

 
 ಈಗ ಎಲ್ಲೆಲ್ಲೂ ಬಿಗ್ಬಾಸ್ ದೆ ಸುದ್ದಿ ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮ ಆರಂಭದ ಅಧಿಕೃತ ಮಾಹಿತಿ ಹೊರಬಿದ್ದ ಬಳಿಕ ಸ್ಪರ್ಧಿಗಳು ಯಾರೆಲ್ಲ ಎನ್ನುವುದರ ಪಟ್ಟಿ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಮತ್ತೊಂದು ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹೊರಬಿದ್ದಿದೆ.
ಸುದೀಪ್ ಮತ್ತೆ ಬಿಗ್‌ ಬಾಸ್‌ ಶೋ ನಡೆಸಿಕೊಡಲಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ, ಈಗಿನಿಂದ ಬೇರೇನೇ ಲೆಕ್ಕ ಇದು ಹೊಸ ಅಧ್ಯಾಯ ಎಂದು ಹೇಳಿ ಬಿಗ್‌ ಬಾಸ್‌ ಆರಂಭದ ದಿನಾಂಕವನ್ನು ಕಿಚ್ಚ ರಿವೀಲ್‌ ಮಾಡಿದ್ದಾರೆ.ಸಂಭಾವ್ಯ ಸ್ಪರ್ಧಿಗಳ ಹೊಸ ಪಟ್ಟಿ ಹೊರಬಿದ್ದಿದ್ದು, ಇದರಲ್ಲಿ ಹಲವು ಅಚ್ಚರಿ ತರುವ ಹೆಸರುಗಳಿವೆ.
ಹೌದು ಚೈತ್ರಾ ಕುಂದಾಪುರಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕುಂದಾಪುರ ಮೂಲದ ಚೈತ್ರಾ ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಇನ್ನು ಕೆಜಿಎಫ್‌ ಬಾಬು ಹೆಸರು ಕೂಡ ಕೇಳಿ ಬಂದಿದ್ದು ಶ್ರೀಮಂತ ಕುಳ, ಉದ್ಯಮಿ ಹಾಗೂ ರಾಜಕಾರಣಿ ಕೆಜಿಎಫ್ ಬಾಬು ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನು ಇವರಲ್ಲದೆ ಹುಲಿ ಕಾರ್ತಿಕ್‌, ಗೌರವ್‌ ಶೆಟ್ಟಿ, ಮಾನಸ ಸಂತು, ನಟಿ ಪ್ರೇಮಾ, ಹರೀಶ್ ನಾಗರಾಜ್, ಐಶ್ವರ್ಯಾ ರಂಗರಾಜನ್, ಅಮೂಲ್ಯ ಭಾರದ್ವಾಜ್.
 ಭವ್ಯಾ ಗೌಡ, ದೀಪಕ್‌ ಗೌಡ, ಅಕ್ಷಯ್‌ ನಾಯಕ್‌, ಲೇಖಿ ಗೋಸ್ವಾಮಿ, ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್ ಹೆಸರು ಸಹ ಬಿಗ್‌ ಬಾಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.