ಕಿಚ್ಚನ ವಿರುದ್ಧವೇ ನಾಲಗೆ ಹರಿಬಿಟ್ಟ ಚೈತ್ರಾ ಕುಂದಾಪುರ, ರೊಚ್ಚಿಗೆದ್ದ ಕೋಟ್ಯಾಂತರ ಸುದೀಪ್ ಅಭಿಮಾನಿಗಳು
Oct 23, 2024, 09:09 IST
ಬಿಗ್ ಬಾಸ್ ಕನ್ನಡ ಸೀಸನ್ 11ರ ಕಳೆದ ವೀಕೆಂಡ್ ಎಪಿಸೋಡ್ ಸಕ್ಕತ್ತಾಗಿತ್ತು ಎನ್ನುವುದು ಪ್ರತಿಯೊಬ್ಬ ಪ್ರೇಕ್ಷಕನ ಅಭಿಪ್ರಾಯ. ಕೆಟ್ಟ ಸೀಸನ್ ಅಂತಾ ಕೇಕ್ ಕತ್ತರಿಸಿದ ಸುದೀಪ್ ಸಂಪೂರ್ಣ ವಾರದಲ್ಲಿ ನಡೆದ ಅವಘಡಗಳಲ್ಲಿ ಕೆಲವರ ಪಾತ್ರದ ಬಗ್ಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಚೈತ್ರಾ ಕುಂದಾಪುರ, ಲಾಯರ್ ಜಗದೀಶ್‌ಗೆ ಆಡಿದ ಮಾತಿನ ಬಗ್ಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು.
ಕೆಲವು ಪ್ರಶ್ನೆಗಳನ್ನು ನೇರವಾಗಿ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್ ಕೇಳಿದರು. ಸುದೀಪ್ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಚೈತ್ರಾ ಕಣ್ಣು ತುಂಬಿಕೊಂಡರು. ಅಷ್ಟಾದರೂ ಸುದೀಪ್ ಸಂಚಿಕೆ ನಡೆಸಿಕೊಟ್ಟ ಬಳಿಕ ಚೈತ್ರಾ ಕುಂದಾಪುರ ಕೆಲವು ಸ್ಪರ್ಧಿಗಳ ಮುಂದೆ ನೇರವಾಗಿ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಷ್ಟು ವರ್ಷದ ನೈತಿಕತೆಯನ್ನು ಒಂದು ಗಂಟೆಯಲ್ಲಿ ಕಳೆದುಕೊಂಡು ಬಿಟ್ಟೆ. ನನಗೆ ಇದು ಹೆಂಗೆ ಕಾಣಿಸಿತು ಅಂದರೆ ಲಾಯರ್ ಜಗದೀಶ್ ಅವರಿಗೆ ಕ್ಲೀನ್ ಚೀಟ್ ಕೊಟ್ಟಂತೆ ಕಾಣಿಸಿತು. ನಿಜವಾಗಿ ನನಗೆ ಹಾಗೇ ಅನಿಸಿತು. ನೇರವಾಗಿ ಹೇಳುತ್ತೇನೆ. ಜಗದೀಶ್ ಅವರಿಗೆ ಕ್ಲೀನ್ ಚೀಟ್ ಕೊಟ್ಟಂತೆ ಕಾಣಿಸಿತು ಬಿಟ್ಟರೆ ಬೇರೆ ಏನೂ ಇಲ್ಲ. ಬಾಯಿಕಟ್ಟಿಕೊಂಡು ಕೂತಿದ್ದೇವೆ. ನನ್ನ ವೈಯಕ್ತಿಕ ವಿಚಾರ ಮಾತನಾಡಿದಕ್ಕೆ, ನನ್ನ ಕೇಸ್ ವಿಚಾರ ಮಾತನಾಡಿದಕ್ಕೆ ನಾನು ಅವರ ಮೇಲೆ ಕೋಪಗೊಂಡಿದ್ದು ಎಂದು ಚೈತ್ರಾ ಕುಂದಾಪುರ ನಟಿ ಅನುಷಾ ರೈ ಬಳಿ ಹೇಳಿಕೊಂಡರು.
<a href=https://youtube.com/embed/kD0yQFRUp-k?autoplay=1&mute=1><img src=https://img.youtube.com/vi/kD0yQFRUp-k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಮಗೆ ಕೆಸರು ಎರಚಿದರೆ ನಾವು ಕೂಡ ಅವರಿಗೆ ಕೆಸರು ಎರಚಬೇಕು. ನಾವು ಅವರಿಗೆ ಗುಲಾಬಿ ಎಸೆಯಲು ಆಗುವುದಿಲ್ಲ. ಆ ಮನುಷ್ಯನ ಬಗ್ಗೆ ಯಾಕೆ ಆ ಹಂತಕ್ಕೆ ಸ್ಪಷ್ಟನೆ ಕೊಡುತ್ತಾರೋ ನನಗೆ ಗೊತ್ತಾಗಿಲ್ಲ. ಮುಂದಿನ ದಿನಗಳಲ್ಲಿ ನೀವು ಹೇಗೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರಲ್ಲ ಎಂದು ಮಾನಸ ಮುಂದೆ ಹೇಳಿಕೊಂಡರು.
ನಾನು ಜಗದೀಶ್ ಪರ ನಿಂತಿಲ್ಲ ಎನ್ನುವ ಆ ಒಂದು ಪದವನ್ನು ಜನರು ಪರಿಗಣಿಸುತ್ತಾರಾ?. ಜನ ಇವರುಗಳಿಗೆ ಸುದೀಪ್ ಸರ್ ಉಗಿದರು ಎನ್ನುವುದನ್ನು ಮಾತ್ರ ಪರಿಗಣಿಸುತ್ತಾರೆ. ಇಡೀ ಮನೆ ಒಂದಾಗಿ ಗ್ರೂಪ್ ಮಾಡಿ ಜಗದೀಶ್ ಸರ್‌ನ ಹೊರಗೆ ಹಾಕಿದರು ಅಂತಾ ಸುದೀಪ್ ಸರ್ ಕ್ಲಾಸ್ ತೆಗೆದುಕೊಂಡರು ಅಂತಾ ಮಾತ್ರ ನೆನಪಿಟ್ಟುಕೊಳ್ಳುತ್ತಾರೆ ಹೊರತು, ಮಧ್ಯ ಒಂದೊಂದು ವಾಕ್ಯನ ಹೇಳಿದರು ಎನ್ನುವುದನ್ನು ಖಂಡಿತಾ ಜನ ನೆನಪಿಟ್ಟುಕೊಳ್ಳುವುದಿಲ್ಲ' ಎಂದು ಚೈತ್ರಾ ಕುಂದಾಪುರ ಹೇಳಿದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.