ಮಳೆಗಾಲದಲ್ಲಿ ಎಂಜಾಯ್ ಮಾಡಲು ಫಾರಿನ್ ಟ್ರಿಪ್ ಹೊರಟ ಚಂದನ್ ಹಾಗೂ ನಿವೇದಿತಾ ಗೌಡ, ಸದ್ಯದಲ್ಲೇ ಕರುನಾಡಿಗೆ ಶುಭ ಸುದ್ದಿ

 

 ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಬಿಗ್​ ಬಾಸ್​ ಶೋನಲ್ಲಿ ಪರಿಚಯವಾದ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅವ
ರೊಂದಿಗೆ ಪ್ರೀತಿಸಿ ಮದುವೆಯಾದವರು ನಿವೇದಿತಾ. 


ಈ ಜೋಡಿ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು, ಅವರ ವಿಡಿಯೋಗಳು ಸಹಜವಾಗಿ ವೈರಲ್​ ಆಗುತ್ತವೆ. ಅದೇ ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ನಿವೇದಿತಾ ಗೌಡ ಹೆಚ್ಚಾಗಿ ರೀಲ್ಸ್​ ಮಾಡಿ ಫ್ಯಾನ್ಸ್​ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಕಲರ್​ಫುಲ್​ ಫೋಟೋಶೂಟ್​ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ರೀಲ್ಸ್​ಗಳಿಂದ ಟ್ರೋಲ್​ ಆಗುವುದೂ ಇದೆ. ಆದರೆ ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಅವರಿಗೆ ಅಪಾರ ಪ್ರಮಾಣದ ಫ್ಯಾನ್ಸ್​ ಇದ್ದು ಸದಾ ತಮ್ಮ ನೆಚ್ಚಿನ ನಟಿ ಏನು ಶೇರ್​ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಒಳ್ಳೆಯ ಕಮೆಂಟ್ಸ್​ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್​ ಹೇಳುತ್ತಾ ಟ್ರೋಲ್​ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.


ಹೌದು ಇದೀಗ ಪತಿ ಚಂದನ್ ಶೆಟ್ಟಿ ಅವರೊಂದಿಗೆ 
ನಟಿ ಈಗ ಅಮೆರಿಕಕ್ಕೆ ಹಾರಿದ್ದಾರೆ. ಹೌದು! ನಿವೇದಿತಾ ಅವರು ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್​ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್​ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದಾರೆ.  <a href=https://youtube.com/embed/zDtG3TlwO-U?autoplay=1&mute=1><img src=https://img.youtube.com/vi/zDtG3TlwO-U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">


ವಿಡಿಯೋದಲ್ಲಿ ಸೇಂಟ್​ ಮೇರಿ ಚರ್ಚ್​ ನೋಡಬಹುದು. ಅದರ ಮುಂದುಗಡೆ ನಿಂತು ವಿಡಿಯೋ ಶೂಟ್​ ಮಾಡಿರುವ ನಿವೇದಿತಾ, ಅಲ್ಲಿಯ ಹವಾಮಾನವನ್ನು ಸಕತ್​ ಎಂಜಾಯ್​ ಮಾಡುತ್ತಿರುವಂತೆ ತೋರುತ್ತಿದೆ. ಈಕೆಯ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಸೋ ಕ್ಯೂಟ್​ ಎಂದು ಹೇಳುತ್ತಿದ್ದಾರೆ. ಚರ್ಚ್​ ಎದುರು ನಿಂತಿರುವ ನೀರಿನಲ್ಲಿ ಹಾರಿ ಚಿಕ್ಕಮಕ್ಕಳಂತೆ ನಿವೇದಿತಾ ಕುಣಿದಾಡಿದ್ದನ್ನು ಕಂಡು ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋ ತುಂಬೆಲ್ಲಾ ಹಾರ್ಟ್​ ಎಮೋಜಿ ಕಾಣಿಸುತ್ತಿದೆ. 


ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.