ಕೇವಲ ರೀಲ್ಸ್ ಮಾಡಿನೇ ಮಜಾ ಮಾಡಬೇಕಿತ್ತು, ನಿಜ ಜೀವನದಲ್ಲಿ ಯಾವ ಸುಖನೂ ಸಿಕ್ಕಿಲ್ಲ ಎಂದ ಚಂದನ್
Jul 3, 2025, 21:31 IST

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ.
ಹೌದು ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ. ಇಂಥಾ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿ ಸರಿಯಾಗಿ ಒಂದು ವರ್ಷವಾಗಿದೆ. ಆದರೆ.. ಇವತ್ತು ಕೂಡ ಇವರ ವಿಚ್ಛೇದನದ ವಿಚಾರದ ಕುರಿತು ಅನೇಕರಲ್ಲಿರುವ ಕುತೂಹಲ ಕಡಿಮೆಯಾಗಿಲ್ಲ. ಇವತ್ತು ಕೂಡ ಇಬ್ಬರು ದೂರವಾಗಿದ್ದೇಕೆ ? ಮನಸ್ತಾಪ ಶುರುವಾಗಿದ್ದು ಎಲ್ಲಿಂದ ? ಎನ್ನುವ ಪ್ರಶ್ನೆ ಹಲವರಲ್ಲಿ ಇದ್ದೇ ಇದೆ.
<a href=https://youtube.com/embed/5PbaZPpUaM4?autoplay=1&mute=1><img src=https://img.youtube.com/vi/5PbaZPpUaM4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಮತ್ತೊಮ್ಮೆ ಚಂದನ್ ಶೆಟ್ಟಿ ಅವರಿಗೆ ಈ ವಿಚ್ಛೇದನದ ಕುರಿತು ಪ್ರಶ್ನೆಗಳು ಎದುರಾಗಿವೆ. ಈ ಪ್ರಶ್ನೆಗಳಿಗೆ ಚಂದನ್ ಶೆಟ್ಟಿ ಉತ್ತರವನ್ನು ಕೂಡ ನೀಡಿದ್ದಾರೆ. ಮೊದಲ ಮೂರು ವರ್ಷ ಚೆನ್ನಾಗಿತ್ತು ಈ ಕುರಿತು ಸುವರ್ಣ ನ್ಯೂಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಮದುವೆಯಾದ ಮೂರು ವರ್ಷದ ನಂತರ.. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ವಿಚಾರ ಅರಿವು ಆಗಲು ಶುರುವಾಯ್ತು.
ಇನ್ನು ನಮ್ಮ ರೀಲ್ಸ್ ನೋಡಿದ ಅನೇಕರು ನಾವು ಚೆನ್ನಾಗಿದ್ದೇವೆ ಎಂದುಕೊಂಡಿದ್ದರು, ಆದರೆ ಆ ಖುಷಿ ರೀಲ್ಸ್‌ಗೆ ಮಾತ್ರ ಸೀಮಿತವಾಗಿತ್ತು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಯಾರನ್ನೂ ದೂಷಿಸಲು ನಾನು ಇಷ್ಟ ಪಡುವುದಿಲ್ಲ ಮೊದಲು ಕೂಡ ನಾನು ಯಾರನ್ನು ದೂಷಿಸಿಲ್ಲ. ಈಗಲೂ ದೂಷಿಸುವುದಿಲ್ಲ ಮುಂದೆಯೂ ಕೂಡ ಬ್ಲೇಮ್ ಗೇಮ್‌ನ ನಾನು ಆಡುವುದಿಲ್ಲ ಯಾಕೆಂದರೆ ಪರಸ್ಪರ ಕೆಸರು ಎರಚಿದರೆ ಗಲೀಜಾಗುವುದು ನಾವೇ, ನೋಡುವವರಿಗೆ ಅದು ಅಸಹ್ಯ ಅನ್ಸುತ್ತೆ, ಯಾಕೆಂದರೆ ನಾವು ಹಲವಾರು ಡಿವೋರ್ಸ್‌ಗಳನ್ನು ನೋಡಿದ್ದೇವೆ, ಜಗಳ ಮಾಡಿಕೊಂಡು ದೂರ ಆಗಿರುವುದನ್ನು ನೋಡಿದ್ದೇವೆ, ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಜೀವನದ ಈ ಹಂತದಲ್ಲಿ ಇದೆಲ್ಲ ಮಾಡಿಕೊಳ್ಳುವ ಅವಶ್ಯಕತೆ ನನಗೆ ಇರಲಿಲ್ಲ, ಆದರೆ ಜೀವನ ದೊಡ್ಡದು, ನನ್ನದು ಜೀವನ ಇದೆ, ನಿವೇದಿತಾ ಅವರದ್ದು ಇನ್ನು ಚಿಕ್ಕ ವಯಸ್ಸು ಅವರದ್ದು ದೊಡ್ಡ ಬದುಕು ಇದೆ, ಇನ್ನೂ ಸಾಧನೆ ಮಾಡುವಂತಹದ್ದು ತುಂಬಾನೇ ಇದೆ ಎಂದು ಚಂದನ್ ಶೆಟ್ಟಿ ಸುವರ್ಣಗೆ ನೀಡಿದ ಈ ಸಂದರ್ಶನದಲ್ಲಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.