ಚಂದ್ರಯಾನ 3 ಚಂದ್ರನ ದಕ್ಷಿಣದಲ್ಲಿ ಇಳಿದಿಲ್ಲ ಎಂದು ಆರೋಪ ಮಾಡಿದ ಚೀನಾ

 

ಒಬ್ಬರ ಏಳ್ಗೆ ನೋಡಿ ಹೊಟ್ಟೆ ಉರಿ ಪಡೋರು ಎಲ್ಲೆಡೆಯೂ ಇರ್ತಾರೆ. ಅದೇ ರೀತಿ ಭಾರತದ ಸಾಧನೆ ನೋಡಿ ಚೀನಾ ಬಾಯಿ ಬಾಯಿ ಬಡಿದುಕೊಳ್ಳೋದಷ್ಟೇ ಅಲ್ಲ ಸುಳ್ಳು ಸುದ್ದಿ ಬೇರೆ ಹಬ್ಬಿಸುತ್ತಿದೆ. ಭಾರತದ ಚಂದ್ರಯಾನ-3 ಯಶಸ್ಸನ್ನು ಇಡೀ ವಿಶ್ವವೇ ಪ್ರಶಂಶಿಸುತ್ತಿರುವಾಗ ಚೀನಾ ಇದಕ್ಕೆ ಕ್ಯಾತೆ ತೆಗೆದಿದೆ. 

ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳಿಲ್ಲ ಎಂದು ಆರೋಪಿಸಿದೆ. ಈ ಕುರಿತು ಆರೋಪಿಸಿರುವ ಚೀನಾ ಚಂದ್ರ ಯೋಜನೆಯ ಪಿತಾಮಹ ಎಂದು ಕರೆಯಲ್ಪಡುವ ಉಯಾಂಗ್‌ ಝಿಯಾನ್ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಹತ್ತಿರವೂ ತೆರಳಿಲ್ಲ. ಇದು ದಕ್ಷಿಣ ಧ್ರುವದಿಂದ 613 ಕಿಲೋಮೀಟರ್‌ ದೂರದಲ್ಲಿದೆ. ಭೂಮಿಯಲ್ಲಿ ಮಾತ್ರ ದಕ್ಷಿಣ ಮುಖದಲ್ಲಿ 69 ಡಿಗ್ರಿಗೆ ಅಂಟಾರ್ಟಿಕ ಸಿಗುತ್ತದೆ. 

ಆದರೆ ಚಂದ್ರನಲ್ಲಿ ದಕ್ಷಿಣ ಧ್ರುವಕ್ಕೆ 88.5-90 ಡಿಗ್ರಿ ಅಕ್ಷಾಂಶ ಇರುತ್ತದೆ. ಆದರೆ ಭಾರತ ಚಂದ್ರನಲ್ಲಿ ಕೇವಲ 69 ಡಿಗ್ರಿ ಅಕ್ಷಾಂಶದಲ್ಲಿದೆ ಎಂದು ಚೀನೀ ದಿನಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಚೀನಾ ವಿಜ್ಞಾನ ಅಕಾಡೆಮಿ ಸದಸ್ಯ ಒಯಾಂಗ್‌ ಸೈನ್ಸ್ ಟೈಮ್ಸ್‌ಗೆ ನೀಡಿದ ಸಂದರ್ಶನ ವೇಳೆ ಈ ಮಾತು ಆಡಿದ್ದಾರೆ. 

'ಚಂದ್ರಯಾನ-3' ಲ್ಯಾಂಡರ್ ಇಳಿದಿರುವ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ. ಆದರೆ ಅದು ಅಂಟಾರ್ಟಿಕ್ ಪೊಲಾರ್‌ ಪ್ರದೇಶ ಎಂದು ಕರೆಯಲಾಗುತ್ತೆ ಎಂದು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ವರದಿ ಮಾಡಿದೆ. ಈ ಹೇಳಿಕೆಯ ಬೆನ್ನಲ್ಲೇ ಹೊಸ ವಿವಾದದ ಕಿಡಿ ಕೂಡ ಸಿಡಿದಿದೆ.

ಚೀನಾ ವಿಜ್ಞಾನಿ ವಿವರಣೆ ಒಂದು ಕಡೆಯಾದರೆ, ಅಮೆರಿಕದ ನಾಸಾ ಹೇಳುವಂತೆ ಚಂದ್ರನ ದಕ್ಷಿಣ ಧ್ರುವ 80ರಿಂದ 90 ಡಿಗ್ರಿ ದಕ್ಷಿಣದಲ್ಲಿ ಇದೆಯಂತೆ. ಒಟ್ನಲ್ಲಿ ಚೀನಾ ವಿಜ್ಞಾನಿ ಈಗ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಇದೆಲ್ಲಾ ಏನೇ ಇರಲಿ ಭಾರತದ ಸಾಧನೆ ಮಾಡಲು ಜಗತ್ತಿನ ಯಾವುದೇ ದೇಶದ ಕೈಯಲ್ಲೂ ಆಗಲ್ಲ ಎಂಬುದು ಮಾತ್ರ ನಿಶ್ಚಿತ. 

ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಭಾರತ ಇದೀಗ ಚಂದ್ರನ ಮೇಲೆ ಮಾಡಿರುವ ಸಾಧನೆಯು ಬಾಹ್ಯಾಕಾಶ ಲೋಕದಲ್ಲಿ ಅಚ್ಚಳಿಯದೆ ಉಳಿಯಲಿದೆ. ಇದೀಗ ನಿದ್ದೆಯಲ್ಲಿರುವ ಭಾರತದ ಲ್ಯಾಂಡರ್ ಮತ್ತು ರೋವರ್ ಎದ್ದೇಳಿಸುವ ಕೆಲಸ ಕೂಡ ಸಾಗಿದೆ. ಮುಂದೆ ಇದು ಸಾಧ್ಯ ಆಗಿದ್ದೇ ನಿಜವಾದರೆ ಭಾರತ ಮತ್ತೊಂದು ಮೈಲಿಗಲ್ಲು ತಲುಪಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.