2024ಕ್ಕೆ ಪ್ರಧಾನಿ ಬದಲಾವಣೆ; ಮಹತ್ವದ ನಿರ್ಧಾರಕ್ಕೆ ಕೈ ಹಾಕಿದ ಬಿಜೆಪಿ ಹೈಕಮಾಂಡ್

 

ಚಾಯ್‌ವಾಲಾ ದೇಶದ ಪ್ರಧಾನಿಯಾಗುವುದು, ಪತ್ರಿಕೆ ಹಾಕುತ್ತಿದ್ದಾತ ಪಕ್ಷದ ಅಧ್ಯಕ್ಷನಾಗುವುದು ಹಾಗೂ ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿ ಕೇಂದ್ರ ಸಚಿವನಾಗುವುದು ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ. ಇದು ಪಕ್ಷದ ವಿಶೇಷತೆ. ಹೌದು ಈ ಸಲ ಈ ವ್ಯಕ್ತಿ ಪ್ರಧಾನಿ ಆಗಬಹುದು ಎಂದು ಎಲ್ಲೆಡೆ ಹೇಳಲಾಗ್ತಿದೆ ಅಷ್ಟಕ್ಕು ಆ ವ್ಯಕ್ತಿ ಯಾರು? ನೋಡೋಣ

ಸರಳ ಜೀವನದಿಂದ ಗುರುತಿಸಿಕೊಂಡು ಒಡಿಶಾದ ಮೋದಿ ಎಂದು ಪ್ರಖ್ಯಾತರಾಗುತ್ತಿರುವ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ಪ್ರಧಾನಿ ಮೋದಿಗೆ ಹೋಲಿಸುತ್ತಿದ್ದಾರೆ. ಹೌದು ಹಲವರು ಅಭಿಮಾನಿಗಳನ್ನು ಹೊಂದಿರುವ ಇವರು ಮುಂದಿನ ಪ್ರಧಾನಿ ಆಗುತ್ತಾರೆ ಎನ್ನಲಾಗುತ್ತಿದೆ.

64 ವರ್ಷದ ಪ್ರತಾಪ್‌ ಚಂದ್ರ ಸಾರಂಗಿ ಒಡಿಶಾದ ಬಾಲಾಸೋರ್‌ನಿಂದ ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಒಡಿಶಾದ ಮೋದಿ', 'ನಾನಾ' ಎಂದೇ ಇವರು ಹೆಸರುವಾಸಿ. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಸೆಳೆತ ಹೊಂದಿದ್ದ ಇವರು, ರಾಮಕೃಷ್ಣ ಮಠದಲ್ಲಿ ಸನ್ಯಾಸಿ ದೀಕ್ಷೆ ಪಡೆದ ಬಳಿಕ ವೃದ್ಧ ತಾಯಿ ಸೇವೆ ಮಾಡುವುದಕ್ಕಾಗಿ ಮನೆಗೆ ಮರಳಿದ್ದರು. 

ಆದರೆ ಅವಿವಾಹಿತರಾಗಿಯೇ ಇದ್ದರು. ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಗ್ರಾಮದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪ್ರತಾಪ್‌ ಬೆರೆತರು. ಆರ್‌ಎಸ್‌ಎಸ್‌, ವಿಎಚ್‌ಪಿ ಸಂಪರ್ಕಕ್ಕೆ ಬಂದ ಬಳಿಕ ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಗಣ ಶಿಕ್ಷಾ ಮಂದಿರ ಯೋಜನೆ ಅಡಿಯಲ್ಲಿ ಸಮರ್‌ ಕರಾ ಕೇಂದ್ರವನ್ನು ಆರಂಭಿಸಿದರು. 2004, 2009ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್‌ನಲ್ಲಿ ಸಂಚರಿಸುವ ಪ್ರತಾಪ್‌ ಸರಳತೆಗೆ ಜನಪ್ರಿಯರು. 

ತಮ್ಮ ದುಡಿಮೆಯ ಹೆಚ್ಚಿನ ಪಾಲನ್ನು ಬಡ ಮಕ್ಕಳಿಗಾಗಿ ಖರ್ಚು ಮಾಡುವ ಅವರು ಚುನಾವಣೆಯಲ್ಲಿ ಗೆದ್ದ ನಂತರ ಹೆಚ್ಚು ಲೋಕ ಪ್ರಿಯರಾಗಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಮೋದಿ ಬಳಿಕ ಅತಿ ಹೆಚ್ಚು ಚಪ್ಪಾಳೆ ಕೇಳಿ ಬಂದಿದ್ದು ಇವರು ಪದಗ್ರಹಣ ಮಾಡುವಾಗಲೇ. ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಹಾಗೂ ಜಾನುವಾರು ಮೇವು, ಹೈನುಗಾರಿಕೆ ಖಾತೆಯನ್ನು ಪಡೆದುಕೊಂಡಿದ್ದಾರೆ. <a href=https://youtube.com/embed/lTIPuanL9lw?autoplay=1&mute=1><img src=https://img.youtube.com/vi/lTIPuanL9lw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇವರು ದ್ವಿಭಾಷಾ ನಿಪುಣ  ಒಡಿಯಾ ಮತ್ತು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಬೈಸಿಕಲ್‌ ಮೇಲೆ ಸುತ್ತುತ್ತಿರುತ್ತಾರೆ. ನಾನು ಸಚಿವನಾದೆ ಎಂದು ಸ್ವಭಾವ ಹೇಗೆ ಬದಲಾಗಲು ಸಾಧ್ಯ? ಸಹಾಯಕ ಮಂತ್ರಿಯಾದ ಮೇಲೆ ಸರಳ ಜೀವನ ನಡೆಸಲು ಸಾಧ್ಯವಿಲ್ಲವೇ? ನಾನು ಏನಾಗಿದ್ದೆನೋ ಅದಾಗಿಯೇ ಇರುತ್ತೇನೆ. 

ಮಂತ್ರಿಯಾದ ಮೇಲೆ ನನ್ನ ಜವಾಬ್ದಾರಿ ಸಂಪೂರ್ಣ ಭಾರತಕ್ಕಾಗಿ. ನನಗೆ ನಿಭಾಯಿಸಿರುವ ಖಾತೆಯ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ನನ್ನ ನನ್ನ ಹೊಣೆಗಾರಿಕೆ ಏನೆಂದು ನಿರ್ಧರಿಸುತ್ತೇನೆ. ಅದರ ಜತೆಗೆ ನನ್ನ ಜನ್ಮಭೂಮಿಯಾದ ಒಡಿಶಾ ಬಗ್ಗೆಯೂ ಕಾಳಜಿ ವಹಿಸುತ್ತೇನೆ, ಎನ್ನುವಷ್ಟು  ಸರಳ ಮನೋಭಾವದವರು ಪ್ರತಾಪ್ ಸಾರಂಗಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.