ಪೂರ್ಣಚಂದ್ರನಾಗಿ ಬೇಗ ಬಾ LOVE YOU’.. ವೇದಿಕೆ ಮೇಲೆ ಭಾವಿ ಪತಿಗೆ ಪ್ರಪೋಸ್ ಮಾಡಿದ್ರು ಅನುಶ್ರೀ
Aug 4, 2025, 09:47 IST
ಈಗ ಎಲ್ಲೆಲ್ಲೂ ಈ ಸ್ಟಾರ್ ನಿರೂಪಕಿಯ ಮದುವೆಯದ್ದೇ ಮಾತುಕತೆ. ಮದುವೆ ಯಾವಾಗ ಎನ್ನುತ್ತಿದ್ದ ಅಭಿಮಾನಿಗಳಿಗೆ ಈ ತಿಂಗಳ ಕೊನೆಯಲ್ಲಿ ಉತ್ತರ ಸಿಗಲಿದೆ. ಹೌದು, ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಅವರು ಈ ತಿಂಗಳು ಅಂದರೆ, ಆಗಸ್ಟ್ 28ಕ್ಕೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿಯನ್ನು ಅನುಶ್ರೀ ವಿವಾಹ ಆಗಲಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿಯೇ ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ ಎನ್ನಲಾಗಿದೆ.
<a style="border: 0px; overflow: hidden" href=https://youtube.com/embed/SSTG9mXDgv4?autoplay=1&mute=1><img src=https://img.youtube.com/vi/SSTG9mXDgv4/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ಇನ್ನೂ, ಇದರ ಮಧ್ಯೆ ವೇದಿಕೆ ಮೇಲೆ ಭಾವಿ ಪತಿಗೆ LOVE YOU ಹೇಳಿ ನಾಚಿ ನೀರಾಗಿದ್ದಾರೆ. ಹೌದು, ಜೀ ಕನ್ನಡ ರಿಲೀಸ್ ಮಾಡಿರೋ ಪ್ರೋಮೋದಲ್ಲಿ ಮಹಾನಟಿ ವೇದಿಕೆ ಮೇಲೆ ನಿಶ್ವಿಕಾ ನಾಯ್ಡು, ಅನು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದ್ರೆ ಹೇಗೆ ಹೇಳ್ತೀರಾ ಅಂತಾರೆ.
ಆಗ ಅನುಶ್ರೀ, ನನ್ನ ಜೀವನದಲ್ಲಿ ಪೂರ್ಣಚಂದ್ರನಾಗಿ ನೀ ಬೇಗ ಬಾ I LOVE YOU ಎಂದು ಹೇಳುತ್ತಲೇ ನಾಚಿಕೊಂಡಿದ್ದಾರೆ. ಆಗ ಅನುಶ್ರೀ ಅವರು ಭಾವಿ ಪತಿಗೆ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದನ್ನು ಕೇಳಿ ಎಲ್ಲರೂ ಫುಲ್ ಖುಷ್ ಆಗಿದ್ದಾರೆ.