ಕೇರಳದಲ್ಲಿ ರಶ್ಮಿಕಾ ಅವರನ್ನು ನೋಡಲು ಕೋಟಿಗಟ್ಟಲೆ ಜನ ಎಂಟ್ರಿ; ಸೆ ಕ್ಸಿ ಲುಕ್ ಎಂದ ಫ್ಯಾನ್ಸ್

 
ನಟನೆ, ನಗು ಮುಖ, ಹಾರ್ಟ್ ಸಿಂಬಾಲ್ ಜೊತೆಗೆ ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸುವ ನಟಿ ರಶ್ಮಿಕಾ ಮಂದಣ್ಣಾ ಅವರಿಗೆ ಸೌಥ್ ನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕೇರಳದಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ.ಬಿಟೌನ್‌ನಲ್ಲಿ ಸುಂದರಿ ಪಟ್ಟ ಗಿಟ್ಟಿಸಿಕೊಂಡಿರುವ ಬಹುಭಾಷಾ ನಟಿ ಕರ್ನಾಟಕದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಾ ಅವರು ದಕ್ಷಿಣ ಭಾರತದ ಈ ರಾಜ್ಯದಲ್ಲಿ ತಮ್ಮ ಅಭಿಮಾನಿ ಸಮೂಹ ಕಂಡು ನಿಬ್ಬೆರಗಾಗಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಟಿ ರಶ್ಮಿಕಾ ಮಂದಣ್ಣಾ ಅವರು ಗುರುವಾರ ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಬೃಹತ್ ಚಿನ್ನಾಭರಣ ಮಳಿಗೆಯೊಂದನ್ನು ಉದ್ಘಾಟಿಸುವ ಮೂಲಕ ಶುಭಾಶಯ ಕೋರಿದರು. ಇಡೀ ಇವೆಂಟ್‌ನಲ್ಲಿ ನೂತನ ಮಳಿಗೆ ಮಾತ್ರವಲ್ಲದೇ ಹಸಿರು ಸೀರೆಯಲ್ಲಿ ಬೊಂಬೆಯಂತೆ ಮಿಂಚುತ್ತಿದ್ದ ನಟಿ ರಶ್ಮಿಕಾ ಅವರೇ ಕೇಂದ್ರ ಬಿಂದುವಾಗಿದ್ದರು.
ಮಳಿಗೆ ಮುಂದೆ ನಟಿ ರಶ್ಮಿಕಾ ಮಂದಣ್ಣ ನೋಡಲು ಜನಸಾಗರವೇ ತುಂಬಿತ್ತು. ಬಾಲಿವುಡ್ ಗೋಲ್ಡನ್ ಗರ್ಲ್ ಎಂದು ಕರೆಯುವ ಅಭಿಮಾನಿಗಳ ಮುಂದೆಯೇ ರಶ್ಮಿಕಾ ಪ್ರತ್ಯಕ್ಷವಾಗಿದ್ದರು. ಇದನ್ನು ಕಂಡು ಫ್ಯಾನ್ ದಿಲ್ ಖುಷ್ ಆಗಿದ್ದ ಕಂಡು ಬಂತು. ನಟನೆ ಜೊತೆಗೆ ತಮ್ಮ ವಿಶೇಷ ಸ್ಮೈಲ್, ಹಾರ್ಟ್ ಸಂಕೇತದೊಂದಿಗೆ ಸದಾ ಅಭಿಮಾನಿಗಳಿಗೆ ದರ್ಶನ ಕೊಡುವ ನಟಿ ರಶ್ಮಿಕಾರ ಸೌಂದರ್ಯಕ್ಕೆ ಕೇರಳ ಫ್ಯಾನ್ ಕಳೆದೋಗಿದ್ದಾರೆ.  <a href=https://youtube.com/embed/p-CIUMb0uCo?autoplay=1&mute=1><img src=https://img.youtube.com/vi/p-CIUMb0uCo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪ್ರತಿಯಾಗಿ ಅವರು ಹಾರ್ಟ್ ಸಿಂಬಾಲ್ ತೋರಿಸುವ ಮೂಲಕ ರಶ್ಮಿಕಾ ಮೇಲಿನ ಅಭಿಮಾನ ಮೆರೆದಿದ್ದಾರೆ. ಇಷ್ಟದ ನಟಿ ಜೊತೆಗೆ ಫ್ಯಾನ್ಸ್ ಸಮೂಹ ಸೆಲ್ಫಿ ಕ್ಲಿಕ್ಕಿಸಿಕೊಂಡ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ, ಹಲವು ಜಾಹೀರಾತುಗಳಲ್ಲಿ ಕಾಣಸಿಗುತ್ತಾರೆ. ಮೊಬೈಲ್ ಸೇರಿದಂತೆ ಕೆಲವು ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿಯು ಉತ್ಪನ್ನಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಕೇರಳಕ್ಕೆ ಭೇಟಿ ನೀಡಿ ಮಳಿಗೆ ಉದ್ಘಾಟಿಸಿ, ಅಭಿಮಾನಿಗಳೊಂದಿಗೆ ಕೆಲ ಕಾಲ ಕಳೆದು ಖುಷಿ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಗೋಲ್ಡನ್ ಝರಿಯಿಂದ ಅಲಂಕರಿಸಲ್ಪಟ್ಟ ಗಿಳಿ ಹಸಿರು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದ ನಟಿ ರಶ್ಮಿಕಾ ಅವರನ್ನು ನೋಡಲು 2000ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ವೇದಿಕೆ ಮೇಲೆ 'ರಂಜಿತಾಮೆ' ಹಾಡಿಗೆ ನೃತ್ಯ ಮಾಡಿ, ಫ್ಯಾನ್ಸ್‌ಗೆ ರಂಜಿಸಿದರು. ಈ ವೇಳೆ ಫ್ಯಾನ್ಸ್ ಝೆಂಕಾರ ಮುಗಿಲು ಮುಟ್ಟಿತ್ತು.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.