ರಚ್ಚುನಾ ನೋಡಿದ್ರೆ ನನಿಗೇನೆ ತಡೆಯೋಕೆ ಆಗ್ತಾ ಇಲ್ಲ, ಬೇಗ ಮದುವೆ ಆಗಿ ರಚ್ಚು ಎಂದ ಡಾಲಿ ಧನಂಜಯ್
Apr 18, 2025, 09:52 IST

ಝೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಈ ವಾರ ಕೂಡ ಭರ್ಜರಿ ಬ್ಯಾಚ್ಯುಲರ್ಸ್ನಲ್ಲಿ ಡಬಲ್ ಮನರಂಜನೆ ಇದೆ. ಈ ವಾರ ಬ್ಯಾಚುಲರ್ಸ್ಗಳಿಗೆ ಲವ್ ಕೆಮಿಸ್ಟ್ರಿ ರೌಂಡ್ ಎಂಬ ಹೊಸ ಚಾಲೆಂಜ್ ನೀಡಲಾಗಿದೆ. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದು ಈ ರೌಂಡ್ ಮೂಲಕ ಗೊತ್ತಾಗಲಿದೆ.
ಈಗಾಗಲೆ ಹಲವರ ಮನಗೆದ್ದ ಭರ್ಜರಿ ಬ್ಯಾಚುಲರ್ ಶೋ ಅಲ್ಲಿ ವಿಶೇಷ ಎಂದರೆ ಈ ವಾರ ಭರ್ಜರಿ ಬ್ಯಾಚ್ಯುಲರ್ಸ್ ಶೋಗೆ ಸಿನಿಮಾದ ಪ್ರಚಾರಕ್ಕಾಗಿ ನಟ ಡಾಲಿ ಧನಂಜಯ ತಂಡ ಭಾಗಿಯಾಗಿದೆ. ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಟ ನಾಗಭೂಷಣ್ ಮತ್ತು ಮಲೈಕಾ ಟಿ ವಸುಪಾಲ್ ನಟನೆಯ ವಿದ್ಯಾಪತಿ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ ಈ ಚಿತ್ರತಂಡ ಪ್ರಚಾರಕ್ಕಾಗಿ ಈ ಶೋಗೆ ಆಗಮಿಸಿದೆ.
<a href=https://youtube.com/embed/gzr3CLDrexY?autoplay=1&mute=1><img src=https://img.youtube.com/vi/gzr3CLDrexY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಬಂದಿದ್ದ ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಖತ್ ಫೇಮಸ್ ಆಗಿದ್ದ ಮತ್ತು ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಸುಕೃತಾ ನಾಗ್ ಜೊತೆಗೆ ಧನಂಜಯ್ ಡ್ಯಾನ್ಸ್ ಮಾಡಿದ್ದಾರೆ. ಡಾಲಿ ಮಸ್ತ್ ಡ್ಯಾನ್ಸ್ ನೋಡುತ್ತಿದ್ದಂತೆ ನಾಗಭೂಷಣ್ ಈ ತರ ಡ್ಯಾನ್ಸ್ ಮಾಡ್ತಾನೆ ಅಂತ ಗೊತ್ತಿರಲಿಲ್ಲ ಅಂತ ಹೇಳಿದ್ದಾರೆ.
ಸುಕೃತಾ ನಾಗ್ ಜೊತೆಗೆ ಡಾಲಿ ರೊಮ್ಯಾಂಟಿಕ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇವರಿಬ್ಬರ ಡ್ಯಾನ್ಸ್ ನೋಡಿ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ. ಅದರಲ್ಲೂ ನಾಗಭೂಷಣ್ ಮಾಡಿದ ಕಾಮಿಡಿ ಕೇಳಿ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಜಡ್ಜ್‌ಗಳಾದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ ಅಲ್ಲಿದ್ದವರೆಲ್ಲಾ ನಗೆಯ ಅಲೆಯಲ್ಲಿ ತೇಲಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.