ಮದುವೆಗೆ ಕರೆಯದ ಡಾಲಿಗೆ ಶುಭಾಶಯ ತಿಳಿಸಿದ ದರ್ಶನ್
Feb 16, 2025, 22:43 IST

ನಟ ಡಾಲಿ ಧನಂಜಯ ಅವರ ಮದುವೆ ಆಮಂತ್ರಣವನ್ನು ನಟ ದರ್ಶನ್ ತೂಗುದೀಪ ಅವರು ತಿರಸ್ಕಾರ ಮಾಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜತೆಗೆ ಡಿ ಬಾಸ್ ಅವಾಜ್‌ಗೆ ಡಾಲಿ ಗಪ್‌ಚುಪ್ ಎಂದಿದ್ದಾರೆ ಎಂಬ ಗಾಸಿಪ್ ಕೂಡ ಹರಿದಾಡುತ್ತಿದೆ. ಮೊದಲಿಗೆ ವಿವಿಧ ಸುದ್ದಿ ಮಾಧ್ಯಮಗಳನ್ನು ಗಮನಿಸಿದಾಗ ನಟ ದರ್ಶನ್ ಅವರಿಗೆ ಡಾಲಿ ಧನಂಜಯ ಅವರು ಆಹ್ವಾನ ನೀಡುವ ಕುರಿತು ಮಾತನಾಡಿರುವ ವಿಡಿಯೋ, ಸುದ್ದಿಗಳು ಸಿಕ್ಕವು.
ನನ್ನ ಮದುವೆಗೆ ದರ್ಶನ್ ಅವರು ಬಂದ್ರೇ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವ
<a href=https://youtube.com/embed/26PXwP-E5O8?autoplay=1&mute=1><img src=https://img.youtube.com/vi/26PXwP-E5O8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನೂ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ದರ್ಶನ್ ಅವರು ಸಿಗುತ್ತಿಲ್ಲ. ಖಂಡಿತವಾಗಿ ದರ್ಶನ್ ನನ್ನ ಮದುವೆಗೆ ಬಂದ್ರೆ ನನಗೆ ಸಂತೋಷ ಎಂದು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಜತೆಗೆ ಮದುವೆ ಕುರಿತು ಧನಂಜಯ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿಯೂ ದರ್ಶನ್ ಅವರನ್ನು ಆಹ್ವಾನಿಸಲು ಪ್ರಯತ್ನಿಸಿದ್ದೇನೆ. ಅವರನ್ನು ಸಂಪರ್ಕಿಸಲು ಆಗಿಲ್ಲ ಎಂದು ಹೇಳಿದ್ದಾರೆ. ಟಿವಿ 9 ಕನ್ನಡ ಸೇರಿದಂತೆ ಬಹುತೇಕ ಕನ್ನಡ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ವಿಜಯ ಕರ್ನಾಟಕ ಯುಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋ ಇದೆ. ಈ ಮೂಲಕ ದರ್ಶನ್ ಹಾಗೂ ಡಾಲಿ ಧನಂಜಯ ಭೇಟಿಯಾಗಿಲ್ಲ. ಆಮಂತ್ರಣವನ್ನು ದರ್ಶನ್ ನಿರಾಕರಿಸಿದ್ದಾರೆ ಎಂಬುದು ಸುಳ್ಳು ಮಾಹಿತಿ.
ಇನ್ನು ದರ್ಶನ್ ಅವರ ಹುಟ್ಟು ಹಬ್ಬ ಇದ್ದ ಕಾರಣ ಮದುವೆಗೆ ಕರೆಯದಿದ್ದರೂ ನಟ ಡಾಲಿ ಧನಂಜಯ ಅವರಿಗೆ ವಿಷ್ ಮಾಡಿದ್ದಾರೆ.ನಟ ಡಾಲಿ ಧನಂಜಯ ಅವರ ಮದುವೆ ಆಮಂತ್ರಣವನ್ನು ನಟ ದರ್ಶನ್ ತೂಗುದೀಪ ಅವರು ತಿರಸ್ಕಾರ ಮಾಡಿದ್ದಾರೆ ಎಂಬ ಪೋಸ್ಟ್ ಸುಳ್ಳು. ಮದುವೆ ಕಾರ್ಡ್ ಕೊಡುವ ವಿಚಾರದಲ್ಲಿ ಈ ಇಬ್ಬರು ನಟರು ಭೇಟಿಯಾಗಿಲ್ಲ. ಈ ಬಗ್ಗೆ ಸ್ವತಃ ಡಾಲಿ ಧನಂಜಯ ಅವರು ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.