ಠಾಣೆಯಲ್ಲಿ ವಿಚಿತ್ರ ನಿದ್ದೆಗೆ ಜಾರಿದ ದ ರ್ಶನ್; ತಲೆಕೆಡಿಸಿಕೊಂಡ ಅಧಿಕಾರಿಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್, ಪೊಲಿಸ್ ಸ್ಟೇಷನ್ ಸೆಲ್‌ನಲ್ಲಿ ಹೇಗಿದ್ದಾರೆ. ಇಷ್ಟು ದಿನಗಳ ಕಾಲ ದರ್ಶನ್ ಪೊಲೀಸ್ ಠಾಣೆಯಲ್ಲಿ ಹೇಗಿದ್ದಾರೆ? ಸರಿಯಾಗಿ ಊಟ ತಿಂಡಿ ಮಾಡುತ್ತಿದ್ದರೋ ಇಲ್ಲವೋ, ಅವರಿಗೆ ಕೂಡ ಸಾಮಾನ್ಯರು ಉಳಿಯುವ ಸೆಲ್ ಅಥವಾ ಚೆನ್ನಾಗಿರುವ ವಿಐಪಿ ಸೆಲ್ ಕೊಡ್ತಾರಾ ಎಂಬೆಲ್ಲ ನೂರೆಂಟು ಪ್ರಶ್ನೆ ಜನರ ಮನದಲ್ಲಿದೆ.
ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರತ್ಯೇಕ ಸೆನ್‌ನಲ್ಲಿ ಇಡಲಾಗಿದೆ. ದರ್ಶನ್‌ಗೆ ಪ್ರತ್ಯೇಕ ಸೆಲ್. ಈ ಸೆಲ್‌ಗೆ ಬೇರೆ ಆರೋಪಿಗಳು ಬರಲು ಅವಕಾಶವಿಲ್ಲ. ಹಾಗೊಂದ್ ವೇಳೆ ಭೇಟಿಯಾದ್ರೆ ದರ್ಶನ್ ಏನಾದ್ರೂ ಕೋಪದಲ್ಲಿ ಬೆದರಿಸೋ ಸಾಧ್ಯತೆ ಇರುತ್ತೆ. ಹೀಗಾಗಿ ಪ್ರತ್ಯೇಕವಾಗಿ ಇಡಲಾಗಿದೆ. ಸ್ವತಃ ಪವಿತ್ರಾ ಗೌಡ ಕೂಡ ದರ್ಶನ್ ಮಾತಾಡಿಸಲು ಮುಂದಾಗುತ್ತಿಲ್ಲ ಅನ್ನೋದ್ ಮೂಲಗಳಿಂದ ತಿಳಿದು ಬರ್ತಿದೆ.
ಆರಂಭದಲ್ಲಿ ದರ್ಶನ್ ಎರಡು ದಿನ ತನಗೆ ಊಟ ಬೇಡ ಜ್ಯೂಸ್ ಕೊಡಿ ಅಂತಾ ತರಿಸ್ಕೊಂಡ್ ಕುಡೀತಾ ಇದ್ರು. ಒಮ್ಮೆ ಇಡ್ಲಿ ಬೇಕು ಅಂತಾ ಹೇಳಿದ್ರು, ಪೊಲೀಸ್ರು ತರಿಸಿಕೊಟ್ಟಿದ್ರು. ಆನಂತರ ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಅನ್ನ ಸಾಂಬಾರ್ ನೀಡಲಾಗ್ತಿದೆ. ಬಟ್, ದರ್ಶನ್ ಜೂನ್ 11 ರಂದು ಸ್ಟೇಷನ್‌ಗೆ ಹೋದಾಗಿಂದ ಇಲ್ಲಿಯವರೆಗೂ ಒಂದೇ ಒಂದು ಟೈಮ್‌ನಲ್ಲಿಯೂ ಪೂರ್ತಿ ಊಟ ಮಾಡಿದ್ದು ಇಲ್ಲವೇ ಇಲ್ಲವಂತೆ.
ಆ ಸೆಲ್‌ನಲ್ಲಿ ದರ್ಶನ್‌ಗೆ ಏನೇನ್ ಇವೆ ಅಂದ್ರೆ ಕೇಳಿಬರ್ತಿರೋ ಉತ್ತರ 1 ಚಾಪೆ, ಒಂದು ಚೇರ್ ಅನ್ನೋ ಆನ್ಸರ್ ಬರ್ತಿದೆ. ಹೊರಗಡೆ ಸ್ಥಳ ಮಹಜರು, ನ್ಯಾಯಾಧೀಶರ ಮುಂದೆ ಹಾಜರು ಪಡ್ಸೋದು, ವಿಚಾರಣೆ… ಟೈಮ್ ಅನ್ನು ಹೊರತು ಪಡ್ಸಿ ದರ್ಶನ್ ದಿನ ಇಡೀ ಇದೇ ರೂಮ್‌ನಲ್ಲಿ ಇರ್ತಾರೆ. ಸಂದರ್ಭದಲ್ಲಿ ಚೇರ್ ಮೇಲೆ ಕುಳಿತುಕೊಳ್ಳುವುದಕ್ಕಿಂತ ಚಾಪೆ ಮೇಲೆ ಜಾಸ್ತಿ ಕುಳಿತು ಜಾಸ್ತಿ ಟೈಮ್ ಕಳಿತಿರೋದ್ ಕಾಣಿಸ್ತಿದೆ. ಚಾಪೆ ಮೇಲೆ ಕುಳಿತಾಗ ದರ್ಶನ್ ಮೌನಕ್ಕೆ ಶರಣಾಗಿರುತ್ತಾರೆ.
ಅದೆಷ್ಟೋ ದೊಡ್ಡ ವ್ಯಕ್ತಿಯಾಗಿದ್ರೂ ಸ್ಟೇಷನ್‌ನಲ್ಲಿ ಸಿಗರೇಟ್ ಸಿಗೋದಿಲ್ಲ. ಹೀಗಾಗಿ ಚೈನ್ ಸ್ಮೋಕ್ ಮಾಡೋರು, ಸಿಗರೇಟ್ ಹ್ಯಾಬಿಟ್ ಇದ್ದವ್ರು ಒಂದ್ ಕ್ಷಣ ಸ್ಟೇಷನ್ ಮೆಟ್ಟಿಲು ಏರ್ತಾ ಇದ್ದಂತೆ ಕಂಗಾಲಾಗೋದು ಪಕ್ಕಾ. ಪೊಲೀಸರ ಬಳಿ ಸಿಗರೇಟ್ ಬೇಕು ಅಂತಾ ಪರಿಪರಿಯಾಗಿ ಕೇಳ್ಕೊಂಡಿದ್ದಾರೆ. ಆದ್ರೆ ಪೊಲೀಸರು ಸಿಗರೇಟ್ ವ್ಯವಸ್ಥೆ ಮಾಡಿಲ್ಲ.