ರಾಜ್ ಕುಟುಂಬ ಕಂಡ್ರೆ ಸಿಟ್ಟಾಗುವ ದರ್ಶನ್; ಕಾರಣ ಬ ಚ್ಚಿಟ್ಟ ಹಿರಿಯ ಪತ್ರಕರ್ತ

 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಎರಡನೇ ಆರೋಪಿಯಾಗಿರುವ ನಟ ದರ್ಶನ್‌  ಕುರಿತು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೀಗ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ದರ್ಶನ್‌ ಕುರಿತಾಗಿ ಹಲವಾರು ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಜತೆಗೆ ದರ್ಶನ್‌ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಗಣೇಶ್‌ ಕಾಸರಗೋಡು ಮಾತನಾಡಿ ದರ್ಶನ್‌ ಪ್ರಕರಣ ಹೀಗೆ ಆಗಬಾರದಿತ್ತು. ಆಗೋಗಿದೆ.

 ಸಿನಿಮಾದಲ್ಲಿಯೂ ಈ ರೀತಿ ಹತ್ಯೆಯಾಗಲ್ಲ. ಆದರೆ ರೇಣುಕಾ ಸ್ವಾಮಿ ಫೋಟೊ ಕಂಡು ಭಯ ಆಗೋಯ್ತು. ಆದರೆ ಇದನ್ನ ತಪ್ಪಿಸಲು ಒನ್ನರಿಂದ ಮಾತ್ರ ಸಾಧ್ಯವಿತ್ತು, ಅದು ಸುದೀಪ್‌ ಅವರಿಂದ ಮಾತ್ರ. ಆದರೆ ಆ ಸ್ನೇಹ ಮುರಿದು ಬಿತ್ತು. ದರ್ಶನ್‌ ಹಾಗೂ ಅಂಬರೀಶ್‌ ತುಂಬ ಸ್ನೇಹಿತರು. ಆದರೆ ಒಂದೇ ವ್ಯತ್ಯಾಸ ಅಂದರೆ, ಅಂಬರೀಶ್‌ ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಆದರೆ ನಿರ್ಧಾರ ತಮ್ಮದು ತೆಗೆದುಕೊಳ್ಳುತ್ತಿದ್ದರು. ಆದರೆ ದರ್ಶನ್‌ ಅವರಲ್ಲಿ ಹಾಗಿಲ್ಲ. ಯಾರು ಹೇಳಿದ್ರೂ ಮಾಡಿ ಬಿಡೋಣ ಅನ್ನುವಂತ ವ್ಯಕ್ತಿತ್ವ. ದರ್ಶನ್‌ಗೆ ಅಂತಹ ಅಭಿಮಾನಿ ಬಳಗ, ನಿರ್ದೇಶಕರನ್ನು ಕಳೆದುಕೊಂಡರು. 

ಇದೀಗ ಉದ್ಯಮ ಕೂಡ ಗೊಂದಲದಲ್ಲಿದೆ. ಬ್ಯಾನ್‌ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಯಾವ ಚೇಂಬರ್‌ ಏನು ಮಾಡ್ಲಿಕ್ಕೆ ಆಗತ್ತೆ? ಕಾನೂನು ಎಲ್ಲರಿಗೂ ಒಂದೇ. ಈಗ ದರ್ಶನ್‌ ಕಾನೂನು ಸುಳಿಯಲ್ಲಿ ಸಿಕ್ಕಾಕೊಂಡಿದ್ದಾರೆ ಎಂದರು.ಆಗಿನ ಕಾಲಕ್ಕೆ ದರ್ಶನ್‌ ಅವರು ನನ್ನ ಬದುಕು ನಾಯಿ ಪಾಡು ಆಗಿದೆ ಎಂದು ಹೇಳಿಕೊಂಡಿದ್ದರು. ಯಾರೋ ಅವಕಾಶ ಬಿಟ್ಟಿದ್ದು ಇವರಿಗೆ ಕೊಡ್ತಾ ಇದ್ದರು.  <a href=https://youtube.com/embed/KrDKw3Pwj2A?autoplay=1&mute=1><img src=https://img.youtube.com/vi/KrDKw3Pwj2A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೀಗ ಚಂದನವನದಲ್ಲಿ ಮೆರೆದು, ಇದೀಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಪ್ರಸ್ತುತ ದರ್ಶನ್‌ ಅವರದ್ದು ಈಗ ನಾಯಿ ಪಾಡೆ ಆಗಿದೆ. ಇಷ್ಟು ದೊಡ್ಡ ಅಭಿಮಾನಿಗಳು, ನೋಡುಗರನ್ನು ಇಟ್ಟುಕೊಂಡು ಈ ರೀತಿ ಮಾಡಬಾರದಿತ್ತು ಎಂದರು. ಅಣ್ಣಾವ್ರ ಕುಟುಂಬದ ಕುರಿತು ಒಂದಿಷ್ಟು ಸಿಟ್ಟು ಇತ್ತು ಆದರೆ ದ್ವೇಷ ಇರಲಿಲ್ಲ. ಇನ್ನು ದರ್ಶನ್‌ ಅಣ್ಣ ದಿನಕರ್‌ ಸ್ಕ್ರಿಪ್ಟ್‌ ಹಿಡದುಕೊಂಡು ಹಲವು ನಿರ್ದೇಶಕರ ಮನೆ ಬಾಗಲಿಗೆ ಹೋಗಿದ್ದ. ಆದರೆ ಯಾರೂ ಆ ಕಥೆಯನ್ನು ಇಷ್ಟ ಪಟ್ಟಿಲ್ಲ. ಚಾನ್ಸ್‌ ಯಾರೂ ದಿನಕರನಿಗೆ ಕೊಡಲೂ ಇಲ್ಲ. 

ಬಳಿಕ ದಿನಕರನೇ ನಿಂತು ಪ್ರೊಡ್ಯೂಸ್‌ ಮಾಡಿ ಸಿನಿಮಾ ಗೆದ್ದಿತ್ತು. ಅದುವೇ ಜೊತೆ ಜೊತೆಯಲಿ ಸಿನಿಮಾ. ಅದ್ಭುತ ಯಶಸ್ಸು ಪಡೆಯಿತು. 25 ದಿನ ಓಡಿತು. ಅಂತ ದೊಡ್ಡ ಸಿನಿಮಾ ಕೊಟ್ಟು ಕೂಡ ದಿನಕರ್‌ಗೆ ಅವಕಾಶ ಸಿಕ್ಕಿಲ್ಲ. ಅಲ್ಲಿಂದ ದರ್ಶನ್‌ ಅವರು ಅಲ್ಲಿಂದ ಪ್ರೊಡ್ಯೂಸರ್‌ ಆದರು. ದರ್ಶನ್‌ 10 ಸಿನಿಮಾ ಮಾಡಿದ್ರೂ 1 ಲಕ್ಷ ರೂ ಕೂಡ ಆಗಿರಲಿಲ್ಲ ಆಗ ಅವರಿಗಿದ್ದ ಸಂಭಾವನೆ.

ಒಂದ ಸಲ ಸಿಕ್ಕಿದ್ದಾಗ ಈಗೆಲ್ಲ ಬಂದ ನಟರುಗಳು ಲಕ್ಷ ಲಕ್ಷ ರೂ. ಪಡೆಯುತ್ತಿದ್ದಾರೆ. ಆಗ 1 ಲಕ್ಷ ರೂ.ಗೂ ನಾನು ಪರದಾಡುತ್ತಿದ್ದೆ. ಆದರೆ ಈಗ ಡಿಮ್ಯಾಂಡ್‌ ಮಾಡ್ತಿದ್ದೇನೆ. ಕೊಡುವರು ಇದ್ದಾರೆ ಎಂದಿದ್ದರು ದರ್ಶನ್‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ