ದರ್ಶನ್ ಕೊ ಲೆಗಾರ ಎಂದ ಕೋರ್ಟ್; ಪರಪ್ಪನ ಅಗ್ರಹಾರಕ್ಕೆ ಕಣ್ಣೀ ರಿಡುತ್ತಾ ಹೊರಟ ದಾಸ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ಅತಿಥಿಯಾಗಿದ್ದಾರೆ. ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಬರೋಬ್ಬರಿ 19 ಕ್ಕೂ ಹೆಚ್ಚು ಜನರನ್ನ ಪೊಲೀಸ್ರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ದರ್ಶನ್ ಕುರಿತು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಚಿತ್ರದುರ್ಗದ ತಮ್ಮ ಅಭಿಮಾನಿ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ ಕಾರಣಕ್ಕೆ ರೇಣುಕಾಸ್ವಾಮಿ ಅವರನ್ನ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಕೇಸ್‌ನಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾದರೆ, ದರ್ಶನ್ ಎರಡನೇ ಆರೋಪಿಯಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಟೈಮ್ ಸರಿಗಿಲ್ಲ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
https://www.youtube.com/live/QCpT45yexm0?si=F-JZwjWW2xYVuFND
ದರ್ಶನ್‌ಗೆ ಹೆಣ್ಣಿನಿಂದ ಸಮಸ್ಯೆ ಇದೆ. 2027ರವರೆಗೂ ತೊಂದರೆ ಇದ್ದದ್ದೇ. ಅದಾದ್ಮೇಲೆ ಶನಿದೆಸೆ ಆರಂಭ. ದರ್ಶನ್ ಎಂಎಲ್‌ಎ ಆಗುವ ಸಾಧ್ಯತೆ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ನಟ ದರ್ಶನ್ ಅವರು ಹುಟ್ಟಿರೋದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. ಅಸಲಿಗೆ, ದರ್ಶನ್ ಅರೆಸ್ಟ್ ಆಗಿರೋದೇ ಈ ವರ್ಷದ ಆರನೇ ತಿಂಗಳಿನಲ್ಲಿ 7 ಮತ್ತು 6 ಗುಡ್ ಕಾಂಬಿನೇಶನ್. ಆದರೆ ಈ ವರ್ಷ 16, 6, 8 ನಂಬರ್‌ಗಳು ಸರಿ ಇಲ್ಲ.
ಈ ವರ್ಷದ 6ನೇ ತಿಂಗಳು ಡೇಂಜರ್ ಅಂತ ಆರ್ಯವರ್ಧನ್ ಗುರೂಜಿ ತಿಳಿಸಿದ್ದಾರೆ.ರಾಜರಾಜೇಶ್ವರಿ ನಗರದ ವಾಸ್ತುವೇ ಸರಿ ಇಲ್ಲ. ಅಲ್ಲಿರೋರು ಯಾರಿಗೂ ನೆಮ್ಮದಿ ಇಲ್ಲ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದು, ದರ್ಶನ್ ಹೆಸರಿಗೆ 21 ನಂಬರ್ ಬರುತ್ತೆ. ಅವರ ಡೇಟ್ ಆಫ್ ಬರ್ತ್‌ಗೆ ಇದು ವಿರುದ್ಧ ನಂಬರ್. ಆ ಹೆಸರು ಇರೋವರೆಗೂ ಜಗಳ ಇದ್ದೇ ಇರುತ್ತೆ. ಅವರಿಗೆ ಎಲ್ಲಾ ಇರುತ್ತೆ, ಆದರೆ ನೆಮ್ಮದಿ ಇರಲ್ಲ ಎಂದು ಹೇಳಿದ್ದಾರೆ.