ಜೈ ಲಿನಿಂದ ದರ್ಶನ್ ರಿಲೀಸ್; ಭವಿಷ್ಯ ನುಡಿದ ಚಾಮುಂಡೇಶ್ವರಿ ತಾಯಿ

 

ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ-ವಿವಾದ ಏನೇ ಇರಲಿ.

 ಸದ್ಯಕ್ಕೆ ದರ್ಶನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಎಂಬ ಮಾತುಗಳು ಮಾತ್ರ ದಶ ದಿಕ್ಕುಗಳಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಎದುರಾದ ಇದೊಂದು ಅಪಾಯವನ್ನು ದರ್ಶನ್ ಪಾರು ಮಾಡಿದರೆ ಮುಂದೆ ಯಾರಿಂದನೂ ದರ್ಶನ್ ಅವರನ್ನು ತಡೆಯಲು ಸಾಧ್ಯ ಇಲ್ಲ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ನಾನು ಅಂದರೆ ನಂಬರ್.. ನಂಬರ್ ಅಂದರೆ ನಾನು.ಎನ್ನುವ ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ದರ್ಶನ್ ಅವರ ಜಾತಕ ಹರಿವುಕೊಂಡು ಮುಂದೆ ಏನೆಲ್ಲ ಆಗಬಹುದು ಎನ್ನುವುದನ್ನು ಈಗ್ಲೇ ಹೇಳಲು ಶುರು ಮಾಡಿದ್ದಾರೆ. 

ಸದ್ಯದಲ್ಲಿಯೇ ದರ್ಶನ್ ಬಂಧನದಿಂದ ಮುಕ್ತರಾಗುತ್ತಾರೆ ಎಂದು ಕೂಡ ಹೇಳುತ್ತಿದ್ದಾರೆ. ಈ ನಡುವೆ ಅವರ ಅಭಿಮಾನಿಗಳು ದರ್ಶನ್ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ದರ್ಶನ್ ಅವರ ಇಬ್ಬರು ಅಭಿಮಾನಿಗಳು ಪ್ರಸಿದ್ಧ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದಾರೆ.

ಹೌದು. ದಸರೀಘಟ್ಟ ಚೌಡೇಶ್ವರಿ ದೇವಸ್ಥಾನ..ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿರುವ 800 ವರ್ಷಗಳ ಇತಿಹಾಸವನ್ನೂ ಹೊಂದಿರುವ ಭವ್ಯ ದೇವಾಲಯ. ಶ್ರೀ ಕ್ಷೇತ್ರ ದಸರೀಘಟ್ಟದಲ್ಲಿ ನೆಲೆಗೊಂಡಿರುವ ಚೌಡೇಶ್ವರಿ ದೇವಿಯು ವಲ್ಮಿಕಿ ರೂಪದಲ್ಲಿಇದೆ. ಅದರ ಮುಂಭಾಗದಲ್ಲಿಆರು ಅಡಿ ಎತ್ತರದಲ್ಲಿಅಮ್ಮನವರ ಆಕೃತಿಯನ್ನು ಶುದ್ಧ ಆವೆಮಣ್ಣು, ನಾರಿಕೇಳ, ಶಂಖ ಇತ್ಯಾದಿ ಪ್ರಾಕೃತಿಕ ದ್ರವ್ಯಗಳಿಂದ ನಿರ್ಮಿಸಲಾಗಿದೆ. ತಾಯಿಯ ಧ್ಯಾನ ಶ್ಲೋಕದಲ್ಲಿಅವಳ ವರ್ಣನೆ ಕಾಣಬಹುದಾಗಿದೆ.

ಯಾವಾಗ ಅವರು ಹೊರಬರುತ್ತಾರೆ ಎಂದು ಕೇಳಿದ್ದೆವು ಎಂದಿರುವ ಇಬ್ಬರು, ಅದಕ್ಕೆ ದೇವಿ ಏನೂ ಕೂಡ ಉತ್ತರ ನೀಡುತ್ತಿಲ್ಲ. ಎಷ್ಟು ದಿವಸ ಆಗುತ್ತದೆ ಎಂದು ನಾವು ಕೇಳಿದೆವು ಅದಕ್ಕೆ ದೇವಿ ಇನ್ನೂ ಸಮಯಬೇಕು. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ ಎಂದಿದ್ದಾರೆ. 

ಕೊನೆಯದಾಗಿ ಕೇಳಿದಾಗ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದ್ದಾಳೆ ಎಂದು ಅಭಿಮಾನಿ ಉತ್ತರಿಸಿದ್ದಾರೆ. ಅಭಿಮಾನಗಳ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು, ಕಷ್ಟ ಇದೆ ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.