ಮಗು ನಾಮಕರಣಕ್ಕೆ ದರ್ಶನ್ ಬರಲ್ಲ,‌ ಬಿರುಗಾಳಿ ಎಬ್ಬಿಸಿದ ಸುಮಲತಾ

 
Jj
ನಟ ದರ್ಶನ್‌ ತೂಗುದೀಪ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಆರು ಅಕೌಂಟ್‌ಗಳನ್ನು ಅನ್‌ಫಾಲೋ ಮಾಡಿರುವ ವಿಚಾರ ಹಲವು ಗಾಸಿಪ್‌ಗಳಿಗೆ ಪುಷ್ಟಿ ನೀಡಿದೆ. ಈ ಬೆನ್ನಲ್ಲೇ ದರ್ಶನ್‌ಗೆ ಇನ್ಸ್ಟಾಗ್ರಾಮ್‌ ಸ್ಟೋರಿ ಮೂಲಕ ಸುಮಲತಾ ಅಂಬರೀಶ್ ಪರೋಕ್ಷವಾಗಿ ಟಾಂಗ್‌ ಕೊಟ್ರಾ ಎಂಬ ವಿಚಾರ ಚರ್ಚೆ ಆಗುತ್ತಿದೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ಇದೆಲ್ಲಾ ಊಹಾಪೋಹ, ದರ್ಶನ್‌ಗೂ ನನ್ನ ಇನ್ಸ್ಟಾಗ್ರಾಮ್‌ ಸ್ಟೋರಿಗೂ ಯಾವುದೇ ಸಂಬಂಧವಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವುದರ ಮೂಲಕ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
ಸುಮಲತಾ ಅಂಬರೀಶ್‌ ಮತ್ತು ದರ್ಶನ್‌ ಮಧ್ಯೆ ಬಿರುಕು ಮೂಡಿದೆ. ವೈಮನಸ್ಸು ಉಂಟಾಗಿದೆ, ಮದರ್‌ ಇಂಡಿಯಾ ಮೇಲೆ ದರ್ಶನ್‌ಗೆ ಮುನಿಸು ಬಂದಿದೆ ಎಂಬ ವದಂತಿಗಳಿಗೆ ಸುಮಲತಾ ಅವರು ಇದೀಗ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಶ್‌, ನನ್ನ ಹಿಂದಿನ ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ, ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ ಎಂದಿದ್ದಾರೆ. <a href=https://youtube.com/embed/2j-miT9hKac?autoplay=1&mute=1><img src=https://img.youtube.com/vi/2j-miT9hKac/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು. ನಿಜಕ್ಕೂ, ದರ್ಶನ್‌ ಅವರು ಇನ್ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.
ಸದ್ಯ ರಾಜಕಾರಣದಿಂದಲೂ ದೂರ ಉಳಿದಿರುವ ಸುಮಲತಾ ಅಂಬರೀಶ್‌, ಮೊಮ್ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನೂ ಮೊಮ್ಮಗನ ನಾಮಕರಣ ಶಾಸ್ತ್ರ ಕೂಡ ಸಮೀಪಿಸುತ್ತಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿದ ಸುಮಲತಾ ಅಂಬರೀಶ್‌, ದರ್ಶನ್‌ನ ಬಿಟ್ಟು ನಮ್ಮ ಮನೆಯಲ್ಲಿ ಯಾವ ಒಳ್ಳೆಯ ಕಾರ್ಯವನ್ನು ನಾವು ಮಾಡಿಲ್ಲ, ಮಾಡುವುದು ಇಲ್ಲ ಎಂದು ಪರೋಕ್ಷವಾಗಿ ದರ್ಶನ್‌ಗೆ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.