ದ ರ್ಶನ್ ಎರಡನೇ ಮದುವೆ ಆಗಿಲ್ವಾ, ನಾನು ಕೂಡ ಆಗ್ತೀನಿ ಎಂದ ಗಂಡ, ಆ ತ್ಮಹತ್ಯೆ ಮಾಡಿಕೊಂಡ ಪತ್ನಿ

 
ಪತಿಯ ಅನೈತಿಕ ಸಂಬಂಧ, ನಿರಂತರ ಕಿರುಕುಳ ತಾಳಲಾರದೆ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ಮಹಿಳೆಯೊಬ್ಬರು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಅನುಷಾ ಮೃತ ದುರ್ದೈವಿ. ಎರಡು‌ ದಿನದ ಹಿಂದೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದ ಅನುಷಾ ಸಾವು-ಬದುಕಿನ ಮಧ್ಯೆ ಹೋರಾಡಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅನುಷಾ ಐದು ವರ್ಷಗಳ ಹಿಂದೆ ಶ್ರೀಹರಿ ಎಂಬಾತನ ಜತೆಗೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದೆ. ಇತ್ತೀಚೆಗೆ ಪತಿ ಶ್ರೀಹರಿಗೆ ಮತ್ತೊಬ್ಬಳ ಜತೆಗೆ ಅನೈತಿಕ ಸಂಬಂಧ ಇದೆ ಎಂಬುದು ಅನುಷಾಗೆ ಗೊತ್ತಾಯಿತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 
ಮೊನ್ನೆಯೂ ಇದೇ ವಿಚಾರಕ್ಕೆ ಗಲಾಟೆ ಆಗಿ ತೀವ್ರ ಮನನೊಂದ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆಕೆಯ ಕಿರುಚಾಟ ಕೇಳಿ ಕುಟುಂಬಸ್ಥರು ಕೂಡಲೇ ಬಾಗಿಲು ಮುರಿದು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅನುಷಾ ಇಂದು ಮೃತಪಟ್ಟಿದ್ದಾರೆ.
ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು‌ ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈ ಬಗ್ಗೆ ಅನುಷ ತಂದೆ ಹೇಮಂತ್ ಪ್ರತಿಕ್ರಿಯಿಸಿದ್ದು, ಕಳೆದ ಮೂರು ತಿಂಗಳಿನಿಂದ ಮಗಳು ಮತ್ತು ಅಳಿಯ ಮಧ್ಯೆ ಜಗಳ ಹೆಚ್ಚಾಗಿತ್ತು. ನನ್ನ ಮಗಳಿಗೆ ಮಹಿಳಾ ಠಾಣೆಗೆ ದೂರು ಕೊಡೋಣಾ ಅಂದಿದ್ದೆ. 
ಇಲ್ಲ ಬೇಡ ನನ್ನ ಸಂಸಾರನ ಸರಿ ಮಾಡಿಕೊಳ್ಳುತ್ತೀನಿ ಅಂತಿದ್ದಳು. ಮಗಳು ಬೆಂಕಿ ಹಚ್ಚಿಕೊಳ್ಳುವಾಗ ಅವನು ಮನೆಲೇ ಇದ್ದ, ಆದರೂ ಕಾಪಾಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.