ಅಂಬಿ ಇದ್ದಿದ್ರೆ ದಶ೯ನ್ ಹೀಗಾಗ್ತಿರಿ೯ಲ್ಲ; ಕಿಚ್ಚ ಸುದೀಪ್

 
 ಕನ್ನಡ ಸ್ಟಾರ್ ನಟ ದರ್ಶನ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ದರ್ಶನ್ ಏನೇ ಮಾಡಿದ್ರೂ ಅವರೇ ನಮ್ಮ ನೆಚ್ಚಿನ ನಟ ಎನ್ನುವ ಫ್ಯಾನ್ಸ್ ಇದ್ದಾರೆ. ದರ್ಶನ್‌‌ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ನಟರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ಖ್ಯಾತ ನಟ ಸುದೀಪ್ ದರ್ಶನ್‌‌‌‌ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ, ಜತೆಗೆ ಆ ಒಬ್ಬ ವ್ಯಕ್ತಿ ಇದ್ದಿದ್ದರೆ ದರ್ಶನ್‌ಗೆ ಇಂಥಹ ಪರಿಸ್ಥಿತಿ ಬರುತ್ತ ಇರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ರೆ ಯಾರು ಆ ವ್ಯಕ್ತಿ? ದರ್ಶನ್‌‌ಗೂ ಆ ವ್ಯಕ್ತಿಗೂ ಇರೋ ನಂಟೇನು? ನೋಡೋಣ.
ಇದೀಗ ಸಂದರ್ಶನವೊಂದರಲ್ಲಿ ದರ್ಶನ್‌ ಕುರಿತಾಗಿ ಕಿಚ್ಚ ಸುದೀಪ್‌ ಮನಬಿಚ್ಚಿ ಮಾತನಾಡಿದ್ದಾರೆ. ಅಂಬರೀಶ್‌ ಅವರು ಇದ್ದಿದ್ದರೆ ಎಲ್ಲರನ್ನು ಕರೆದು ಬುದ್ದಿ ಹೇಳೋ ಪ್ರಯತ್ನ ಮಾಡ್ತಾ ಇದ್ದರು. ಅವರ ವ್ಯಕ್ತಿತ್ವದ ತೂಕ ಹಾಗಿತ್ತು ಎಂದು ಕಿಚ್ಚ ಹೇಳಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ನೆಟ್ಟಿಗರು ಅಂಬರೀಶ್‌‌ ಇದ್ದಿದ್ದರೆ ದರ್ಶನ್‌‌‌ ಹಾದಿ ತಪ್ತಾ ಇರ್ತಿಲಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.
<a href=https://youtube.com/embed/0tHVq_z1SEI?autoplay=1&mute=1><img src=https://img.youtube.com/vi/0tHVq_z1SEI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಷ್ಟೇ ಅಲ್ಲದೇ ತಮ್ಮ ಫ್ಯಾನ್ಸ್‌ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಫ್ಯಾನ್ಸ್‌ಗೆ ಕೂಡ ಬುದ್ಧಿ ಮಾತು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೇ ದರ್ಶನ್‌‌ ಫ್ಯಾನ್ಸ್‌ ವಿಚಾರವಾಗಿ ಸುದೀಪ್‌ ಮಾತನಾಡಿ ಫ್ಯಾನ್ಸ್‌ ನೋವು ನನಗೆ ಅರ್ಥ ಆಗುತ್ತೆ. ಕೆಲವೊಬ್ಬರು ಪ್ರಾರ್ಥನೆ ಮಾಡುತ್ತಾರೆ. ಫ್ಯಾನ್ಸ್ ಕೂಡ ಕಾಮ್‌ ಆಗಬೇಕು. ಕೆಲವೊಬ್ಬರಿಗೆ ಕಾನೂನು ಹೇಗೆ ಕೆಲಸ ಮಾಡುತ್ತೆ ಎನ್ನೋದು ಅರ್ಥ ಆಗಲ್ಲ ಎಂದೂ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿದ ಸುಮಲತಾ ನನ್ನ ಮಗ ಇಂತಹ ಕೆಲಸ ಮಾಡುವವನಲ್ಲ ಎಂದಿದ್ದರು. ದರ್ಶನ್ ಆರೋಪಿ, ಅಪರಾಧಿಯಂತೆ ಬಿಂಬಿಸೋದ ಬೇಡ ಎಂದು ಹೇಳಿದ್ರು. ಕಾನೂನು ವ್ಯವಸ್ಥೆಯಲ್ಲಿ ಏನೇನು ಕ್ರಮ ಆಗಬೇಕೋ ಆದು ಆಗಲಿ. ನನ್ನ ಪೋಸ್ಟ್ ನಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದೇನೆ ಎಂದಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.